ಅಗ್ಗ ದುಬಾರಿ ಚರ್ಚೆ ನಡುವೆ ಬಜೆಟ್ ನಲ್ಲಿ ಲಾಭವಾಗುವುದು ಆದಾಯ ತೆರಿಗೆದಾರಾರಿಗೆ !ಟ್ಯಾಕ್ಸ್ ಫ್ರೀ ಆಗುವುದು 10 ಲಕ್ಷದವರೆಗಿನ ಆದಾಯ

ಈ ಬಾರಿ ಹಣಕಾಸು ಸಚಿವರು ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಮೂಲಕ ಆದಾಯ ತೆರಿಗೆಯಲ್ಲಿ ಪರಿಹಾರ ನೀಡುತ್ತಾರೆ ಎನ್ನಲಾಗಿದೆ.

Written by - Ranjitha R K | Last Updated : Jan 31, 2025, 11:56 AM IST
  • ಈ ವರ್ಷದ ಬಜೆಟ್ ನಾಳೆ ಮಂಡನೆಯಾಗಲಿದೆ
  • ಬಜೆಟ್‌ನ ಹೆಸರು ಕೇಳಿದ ತಕ್ಷಣ ಜನರ ನಿರೀಕ್ಷೆಗಳು ಆಗಸದೆತ್ತರಕ್ಕೆ ಏರುತ್ತವೆ.
  • ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಮೂಲಕ ಆದಾಯ ತೆರಿಗೆ ಕಡಿತ
ಅಗ್ಗ ದುಬಾರಿ ಚರ್ಚೆ ನಡುವೆ ಬಜೆಟ್ ನಲ್ಲಿ ಲಾಭವಾಗುವುದು ಆದಾಯ ತೆರಿಗೆದಾರಾರಿಗೆ !ಟ್ಯಾಕ್ಸ್ ಫ್ರೀ  ಆಗುವುದು 10 ಲಕ್ಷದವರೆಗಿನ ಆದಾಯ title=

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ಅಂದರೆ ನಾಳೆ, ದೇಶದ ಬಜೆಟ್  ಮಂಡಿಸಲಿದ್ದಾರೆ. ಬಜೆಟ್‌ನ ಹೆಸರು ಕೇಳಿದ ತಕ್ಷಣ ಜನರ ನಿರೀಕ್ಷೆಗಳು ಆಗಸದೆತ್ತರಕ್ಕೆ ಏರುತ್ತವೆ. ವಿಶೇಷವಾಗಿ ಉದ್ಯೋಗಸ್ಥ ಮತ್ತು ಮಧ್ಯಮ ವರ್ಗದವರು ಆದಾಯ ತೆರಿಗೆ ಕಡಿತದ ಘೋಷಣೆಗಾಗಿ ಕಾಯುತ್ತಿದ್ದಾರೆ.ಈ ಬಾರಿಯ ಬಜೆಟ್ ನಲ್ಲಿ ಹಳೆ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಘೋಷಣೆಯನ್ನು ವಿತ್ತ ಸಚಿವರು ಮಾಡುತ್ತಾರೆಯೇ ಎನ್ನುವ ಕುತೂಹಲ ಕಾದಿದೆ. ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಮೂಲಕ ಆದಾಯ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆಯೂ ಚರ್ಚೆಯೂ ನಡೆಯುತ್ತಿದೆ. ಈ ಬಾರಿ ಹಣಕಾಸು ಸಚಿವರು ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಮೂಲಕ ಆದಾಯ ತೆರಿಗೆಯಲ್ಲಿ ಪರಿಹಾರ ನೀಡುತ್ತಾರೆ ಎನ್ನಲಾಗಿದೆ. ಈ ಬಾರಿಯ ಬಜೆಟ್ ಘೋಷಣೆಯ ಜೇಬಿನಲ್ಲಿ ಹೆಚ್ಚು ಹಣ ಉಳಿತಾಯವಾಗಲಿದೆ ಎಂಬ ನಿರೀಕ್ಷೆ ಜನ ಸಾಮಾನ್ಯರದ್ದು. 

10 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತ :   
ಪ್ರಸ್ತುತ ತೆರಿಗೆ ವ್ಯವಸ್ಥೆಯಲ್ಲಿ ಎರಡು ರೀತಿಯ ತೆರಿಗೆ ಪದ್ಧತಿಗಳಿವೆ. ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ  3 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ನಂತರದ ಆದಾಯದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ.  ಆದರೆ ನಿಮ್ಮ ಆದಾಯ ತೆರಿಗೆಯನ್ನು  ಶೂನ್ಯ  ಮಾಡುವ ಕೆಲವು ಮಾರ್ಗಗಳಿವೆ.ಇದರ ಪ್ರಕಾರ ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಆಗಿದ್ದರೂ, ತೆರಿಗೆ ಹೊಣೆಗಾರಿಕೆ ಶೂನ್ಯವಾಗಿರುತ್ತದೆ.    

ಇದನ್ನೂ ಓದಿ : ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದು ಇಲ್ಲಿ!ಬಂಗಾರದ ಮೇಲೆ ಒಂದೇ ಒಂದು ರೂ. ಟ್ಯಾಕ್ಸ್ ನೀಡಬೇಕಿಲ್ಲ, ಅಲ್ಲಿಗೆ ತೆರಳಲು ವೀಸಾದ ಅಗತ್ಯವೂ ಇಲ್ಲ

ತೆರಿಗೆ ಉಳಿಸುವುದು ಹೇಗೆ ?:
ಹಳೆಯ ತೆರಿಗೆ ಪದ್ಧತಿಯಲ್ಲಿ, ವೈಯಕ್ತಿಕ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.  ಆದರೆ ಹೊಸ ವ್ಯವಸ್ಥೆಯಲ್ಲಿ, ಅಂತಹ ಕಡಿತ ಇಲ್ಲ. ಹೊಸ ತೆರಿಗೆ ವ್ಯವಸ್ಥೆಯಲ್ಲಿ 75 ಸಾವಿರ ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಮಾತ್ರ ಲಭ್ಯವಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 10 ಲಕ್ಷ ಆದಾಯದ ಮೇಲೆ ಆದಾಯ ತೆರಿಗೆ ಉಳಿಸಲು ಕೆಲವು ಕಡಿತಗಳತ್ತ ಗಮನ ಹರಿಸಬೇಕಾಗುತ್ತದೆ. 10 ಲಕ್ಷ ರೂಪಾಯಿ ಆದಾಯವನ್ನು ಹೇಗೆ ತೆರಿಗೆ ಮುಕ್ತಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ. 

೧.10 ಲಕ್ಷ ಆದಾಯದ ಮೇಲೆ ಹಳೆಯ ತೆರಿಗೆ ಅಡಿಯಲ್ಲಿ ತೆರಿಗೆ ಸಲ್ಲಿಸಿದರೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ 50 ಸಾವಿರ ರೂ. 
೨. PPF, EPF, SSY, NCS ಇತ್ಯಾದಿ ಉಳಿತಾಯ ಯೋಜನೆಗಳನ್ನು ಒಳಗೊಂಡಿರುವ 80C ಅಡಿಯಲ್ಲಿ, 1.50 ಲಕ್ಷ ರೂಪಾಯಿಗಳ ಕಡಿತ ಅಥವಾ ತೆರಿಗೆ ಮುಕ್ತ ಆದಾಯ ಲಭ್ಯವಿದೆ.  
೩. 80ಡಿ ಅಡಿಯಲ್ಲಿ, ಆರೋಗ್ಯ ವಿಮಾ ಪ್ರೀಮಿಯಂನಲ್ಲಿ  25 ಸಾವಿರ ಉಳಿತಾಯವಿದೆ.  
೪. 80TTA ಅಡಿಯಲ್ಲಿ, ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಪಡೆದ ಬಡ್ಡಿಯಲ್ಲಿ  10,000 ವರೆಗೆ ಉಳಿಸಬಹುದು.  
೫. 24(b) ಅಡಿಯಲ್ಲಿ, ಗೃಹ ಸಾಲದ ಬಡ್ಡಿಯಲ್ಲಿ  2 ಲಕ್ಷದವರೆಗೆ ಉಳಿಸಬಹುದು.
೬. 80CCD(1B) ಅಡಿಯಲ್ಲಿ, NPS ಗೆ ಹೆಚ್ಚುವರಿ ಕೊಡುಗೆಯ ಮೇಲೆ  65 ಸಾವಿರ ಕಡಿತವಿದೆ. ಇವೆಲ್ಲವನ್ನೂ ಸೇರಿಸಿದರೆ ನಿಮ್ಮ ವಾರ್ಷಿಕ ಆದಾಯವನ್ನು ಒಟ್ಟು 5 ಲಕ್ಷ ರೂ. ಆಗುತ್ತದೆ. ಅಂದರೆ ಈಗ ನಿಮ್ಮ ತೆರಿಗೆಗೆ ಒಳಪಡುವ ಆದಾಯವು 5 ಲಕ್ಷ ರೂ ಆಗಿರುತ್ತದೆ.ಅದರ ಮೇಲೆ ಹಳೆಯ ತೆರಿಗೆ ಪದ್ಧತಿಯಲ್ಲಿ ಈ ರೀತಿಯಲ್ಲಿ ಆದಾಯ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ. 

ಇದನ್ನೂ ಓದಿ : ಚಿನ್ನ ಖರೀದಿ ಮಾಡುವವರಿಗೆ ಶಾಕ್: ಬಜೆಟ್‌ಗೂ ಮೊದಲೇಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ 'ಹಳದಿ ಲೋಹ'
 
2.50 ಲಕ್ಷದವರೆಗೆ: ಶೂನ್ಯ ಆದಾಯ ತೆರಿಗೆ :

2.50 ಲಕ್ಷದಿಂದ 5 ಲಕ್ಷದವರೆಗೆ: 5% ತೆರಿಗೆ ಇದು ಸುಮಾರು 12500 ರೂ. ಈಗ ಆದಾಯ ತೆರಿಗೆಯ ಸೆಕ್ಷನ್ 87A ಅಡಿಯಲ್ಲಿ, ಪ್ರತಿ ತೆರಿಗೆದಾರರು  12500 ವರೆಗೆ ರಿಯಾಯಿತಿಯನ್ನು ಪಡೆಯುತ್ತಾರೆ. ಅಂದರೆ, ನಿಮ್ಮ ಆದಾಯ ತೆರಿಗೆ ಶೂನ್ಯಕ್ಕೆ  ತಲುಪುತ್ತದೆ. ಆದಾಯ ತೆರಿಗೆಯ ನಿಯಮಗಳ ಪ್ರಕಾರ, ಸೆಕ್ಷನ್ 87 ಎ ಅಡಿಯಲ್ಲಿ ವಿನಾಯಿತಿ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News