ನವದೆಹಲಿ: JNU ಹಿಂಸಾಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಭೇಟಿಗೆ ದೀಪಿಕಾ ಪಡುಕೋಣೆ ನೀಡಿರುವ ಭೇಟಿಯನ್ನು ಕಂಗನಾ ರಣಾವತ್ ಅವರ ಸಹೋದರಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ JNUಗೆ ಭೇಟಿ ನೀಡಿರುವ ದೀಪಿಕಾ ಅವರದ್ದು ಇದೊಂದು ಕೇವಲ ಪಿಆರ್ ಸ್ಟಂಟ್ ಆಗಿದೆ ಎಂದಿದ್ದಾರೆ. ಒಂದೆಡೆ ದೀಪಿಕಾ ಅವರ 'ಛಪಾಕ್' ಚಿತ್ರದ ಕುರಿತು ವಿಡಿಯೋ ಹಂಚಿಕೊಂಡಿರುವ ಕಂಗನಾ ರಣಾವತ್, ಆಸಿಡ್ ದಾಳಿಗೆ ತುತ್ತಾದ ಜೀವನಾಧಾರಿತ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಸ್ವಾಗತಿಸಿದ್ದರೆ, ಇನ್ನೊಂದೆಡೆ ಕಂಗನಾ ಸಹೋದರಿ ರಂಗೋಲಿ ಚಂದೆಲ್ ಟ್ವೀಟ್ ಮಾಡುವ ಮೂಲಕ ದೀಪಿಕಾ ಅವರ JNU ಭೇಟಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ತಮ್ಮ ಸಹೋದರು ಆಸಿಡ್ ದಾಳಿಗೆ ತುತ್ತಾಗಿ ಬದುಕುಳಿದವರಲ್ಲಿ ಒಬ್ಬರಾಗಿದ್ದು, ಅವರ ನೋವು ಆಕೆಗೆ ತಿಳಿದಿದೆ ಎಂದಿದ್ದಾರೆ.
Kya usne kabhi Uri,Pulwama,Article 370 ya phir CAA ke baare mein ya desh mein kabhi bhi kisi mudde ke baare mein kabhi bhi kisi ideology ka saath diya? Main abhi bhi nahin manti ki usko JNU ke students mein thoda bhi interest hai, yeh sirf paise mein intrest rakhte hain...(contd) https://t.co/W32Fy4wGEe
— Rangoli Chandel (@Rangoli_A) January 8, 2020
ಈ ಕುರಿತು ಟ್ವೀಟ್ ಮಾಡಿರುವ ರಂಗೋಲಿ 'ಅಣ್ಣಾ ಇವರಿಗೆ ಯಾವುದೇ ಧರ್ಮವಿಲ್ಲ. ಇತ್ತೀಚೆಗೆ ಚಿತ್ರರಂಗದಲ್ಲಿ ಲೆಫ್ಟ್ ವಿಚಾರಧಾರೆಗೆ ಮಹತ್ವ ನೀಡಲಾಗುತ್ತದೆ. ಆಂಟಿ-ಹಿಂದೂ ಆದರೆ ಕೆಲಸ ಕೂಡ ಸಿಗುತ್ತದೆ ಬ್ರಾಂಡ್ ಗಳೂ ಕೂಡ ಸಿಗುತ್ತವೆ. ರೈಟ್ ವಿಚಾರಧಾರೆಯ ಧ್ವಜ ಮೇಲೆದ್ದಾಗ ಇವರೂ ಕೂಡ ಬಾಗಲಿದ್ದಾರೆ ಮತ್ತು ಆ ದಿನ ದೂರ ಕೂಡ ಇಲ್ಲ' ಎಂದು ಬರೆದುಕೊಂಡಿದ್ದಾಳೆ.
Bhai saab inka koi dharam nahin hai, aaj kal film industry mein left ka bolbala hai, anti Hindu hokar kaam bhi milta hai aur brands bhi, dekho jab right ka jhanda lehrayega tab yeh inke talve chaatenge, dekh lena woh din bhi door nahin 😁 https://t.co/lxwSNVJDkP
— Rangoli Chandel (@Rangoli_A) January 8, 2020
ದೀಪಿಕಾ ಪಡುಕೋಣೆ ಹೆಸರನ್ನು ಉಲ್ಲೇಖಿಸದೆ ಅವರನ್ನು ಪ್ರಶ್ನಿಸಿರುವ ಕಂಗನಾ ಸಹೋದರಿ ರಂಗೋಲಿ ಚಂದೆಲ್, ಉರಿ ಉಗ್ರ ದಾಳಿ, ಆರ್ಟಿಕಲ್ 370, CAA ಅಥವಾ ದೇಶದ ಇತರೆ ಯಾವುದೇ ವಿಷಯಗಳ ಬಗ್ಗೆ ಯಾವುದೇ ಐಡಿಯಾಲಾಜಿಗೆ ಸಾಥ್ ನೀಡಿದ್ದಾರೆಯೇ? ಎಂದು ಪ್ರಸ್ನಿಸಿದ್ದಾರೆ. ನಾನು ಈಗಲೂ ಸಹ ಹೇಳುತ್ತೇನೆ ಅವರಿಗೆ JNU ವಿದ್ಯಾರ್ಥಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ, ಅವರಿಗೆ ಹಣದಲ್ಲಿ ಮಾತ್ರ ಆಸಕ್ತಿ ಇದೆ ಎಂದಿದ್ದಾರೆ. ಅಷ್ಟೇ ಅಲ್ಲ ಬಹಿರಂಗವಾಗಿ ಅವರು ಮಾಡಿರುವ ಈ ಕೆಲಸ ತಮಗೆ ಮುಚ್ಚುಗೆಯಾಗಿದ್ದು, ಬಿಲದಲ್ಲಿ ಇನ್ನೂ ಹಲವಾರು ಇಲಿಗಳು ಅಡಗಿ ಕುಳಿತಿವೆ. ಎಲ್ಲ ಇಲಿಗಳು ಮೆಲ್ಲಗೆ ಹೊರಬೀಳಲಿವೆ. JNUಗೆ ಭೇಟಿ ನೀಡಿ ಬಹಿರಂಗವಾಗಿ PR ಸ್ಟಂಟ್ ಮಾಡಿರುವ ದೀಪಿಕಾ ಅವರನ್ನು ನಾವು ಗೌರವಿಸಬೇಕು ಎಂದಿದ್ದಾಳೆ.