Actor Rajinikanth : ನಟ ರಜನಿಕಾಂತ್ ಅವರ ಸಂಬಂಧದ ಕುರಿತು ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ನಿಡಿರುವ ಹೇಳಿಕೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಲೈವಾ ತಮ್ಮ 36ನೇ ವಯಸ್ಸಿನಲ್ಲಿ 19 ವರ್ಷದ ನಟಿಯನ್ನ ಮದುವೆಯಾಗಲು ಬಯಸಿದ್ದರು ಎನ್ನುವ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ..
ಸೂಪರ್ ಸ್ಟಾರ್ ರಜನಿಕಾಂತ್ ಅವರು 1975 ರಲ್ಲಿ ಅಪೂರ್ವ ರಾಗಂಗಳ್ ಎಂಬ ತಮಿಳು ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. 74ನೇ ವಯಸ್ಸಿನಲ್ಲಿಯೂ ಅನೇಕ ಯುವ ನಾಯಕರಿಗೆ ಟಫ್ ನೀಡುತ್ತಿದ್ದಾರೆ. 20 ವರ್ಷದ ಯುವಕನಂತೆ ಅದೇ ಸ್ಟೈಲ್ ಮತ್ತು ಅದೇ ಸ್ಮೈಲ್‌ನಿಂದ ಜನಮನ ಗೆಲ್ಲುತ್ತಿದ್ದಾರೆ..
ಸಧ್ಯ ಕೂಲಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಜನಿಕಾಂತ್ ಅವರ ಕುರಿತು ತಮಿಳಿನ ಹಿರಿಯ ನಟಿಯೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.. ಚಿತ್ರಾ ಲಕ್ಷ್ಮಣನ್ ಅವರಿಗೆ ನೀಡಿರುವ ಸಂದರ್ಶನವೊಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..
ಇದನ್ನೂ ಓದಿ:ಸಿರೀಯಲ್‌ನಲ್ಲಿ ಅತ್ತೆ-ಅಳಿಯ.. ನಿಜ ಜೀವನದಲ್ಲಿ ಗಂಡ-ಹೆಂಡತಿ! ಪ್ರೀತಿಸಿ ಮದುವೆಯಾದ ಸ್ಟಾರ್ ಸೆಲೆಬ್ರಿಟಿ ಜೋಡಿ ಇದು!!
ನಟ ರಜನಿಕಾಂತ್ ಸಾಕಷ್ಟು ಜನಪ್ರಿಯ ನಟಿಯರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ರೀತಿ 1986ರಿಂದ 1989ರವರೆಗೆ ನಟಿ ಅಮಲಾ ಜತೆ ಸತತ 4 ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಮಲಾ-ರಜನಿ ಕೆಮಿಸ್ಟ್ರೀ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಇದರಿಂದ ತ್ಲೆಕ್ಕರನ್, ಕೊಡಿ ಫಲುತ್ತು ಮತ್ತು ಮಾಪಿಳ್ಳೈ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು.
ಅಮಲಾ ಮತ್ತು ರಜನಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ತುಂಬಾ ಹತ್ತಿರವಾಗಿದ್ದರು ಎಂಬ ವದಂತಿ ಹಲವು ವರ್ಷಗಳಿಂದಲೂ ಇದೆ. ಅಷ್ಟೇ ಅಲ್ಲ, ಈ ಜೋಡಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಮುಂದಾಗಿತ್ತು ಎಂಬ ಸುದ್ದಿ ಇತ್ತು. ಆಗ ಅಮಲಾಗೆ 19 ವರ್ಷ ಮತ್ತು ರಜಿನಿ ಅವರಿಗೆ 36 ವರ್ಷ ವಯಸ್ಸು.
Rajini was 36 yrs old then while Amala was 19!.. She acted in movies like Velaikkaaran (1987), Kodi Parakkudhu (1988) & Maapillai (1989) with Rajini.. Rajini wanted to divorce his wife & marry Amala.. He & his wife Latha were seperated for a year for this reason. pic.twitter.com/EhotTdCO4u
— Viber Raja (@Viberraja) December 13, 2024
ಅಷ್ಟೇ ಅಲ್ಲ, ರಜನಿ ಮದುವೆಯಾಗಿದ್ದರೂ, ತನ್ನ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ. ನಟಿ ಅಮಲಾ ಅವರನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದರು ಎಂದು ಹಿರಿಯ ನಟಿ ತಮ್ಮ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.. ಆದರೆ ಇದು ಎಷ್ಟು ಸತ್ಯ ಎಂಬುವುದು ತಿಳಿದಿಲ್ಲ..
ಈ ಸಮಸ್ಯೆಯಿಂದಾಗಿ ರಜನಿ ಮತ್ತು ಅವರ ಪತ್ನಿ ಲತಾ ಯಾವುದೇ ಮಾತುಕತೆ ಇಲ್ಲದೆ 1 ವರ್ಷ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಆ ವೇಳೆ ರಜನಿ ಅವರಿಗೆ ವಿಚ್ಛೇದನ ನೀಡುವ ಇರಾದೆ ಕೇಳಿದ ಲತಾ ಕೆ.ಬಾಲಚಂದರ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಆ ನಂತರ ಬಾಲಚಂದರ್ ರಜನಿ ಅವರಿಗೆ ಬುದ್ದಿ ಹೇಳಿ, ಇದೆಲ್ಲ ಬಿಟ್ಟು ಲತಾ ಜೊತೆ ಬಾಳುವಂತೆ ಸಲಹೆ ನೀಡಿದ್ದಾಗಿ ಹಿರಿಯ ನಟಿ ತಿಳಿಸಿದ್ದಾರೆ...
ಸೂಚನೆ : ಹಿರಿಯ ನಟ ರಜನಿಕಾಂತ್ ಮತ್ತು ನಟಿ ಅಮಲಾ ಅವರ ನಡುವಿನ ಸಂಬಂಧವನ್ನು ಖಚಿತಪಡಿಸಲು ಯಾವುದೇ ಪುರಾವೆಗಳಿಲ್ಲ.. ಇಂಟರ್‌ನೆಟ್‌ನಲ್ಲಿ ವೈರಲ್ ಆದ ವಿಡಿಯೋ ಮೂಲವಾಗಿಟ್ಟುಕೊಂಡು, ಅದರಲ್ಲಿ ಹಿರಿಯ ನಟಿ ನೀಡಿದ ಹೇಳಿಕೆಯನ್ನು ಮಾತ್ರ ಪ್ರಕಟಿಸಲಾಗಿದೆ.. Zee Kannada News ಇದನ್ನು ಖಚಿತಪಡಿಸುವುದಿಲ್ಲ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.