ಕೇವಲ ತಂತ್ರಜ್ಞಾನದಿಂದಲೇ ಸಿನಿಮಾವನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲ: ಅನಿಲ್ ಕಪೂರ್

ಶೇಖರ್ ಕಪೂರ್ ಅವರ ಮಿಸ್ಟರ್ ಇಂಡಿಯಾ ಸಿನಿಯಾ ಪ್ರೊಜೆಕ್ಟ್ ಕುರಿತಾಗಿ ಮಾತನಾಡಿದ ಅನಿಲ್ ಕಪೂರ್ ತಂತ್ರಜ್ಞಾನ ಬೆಳವಣಿಗೆಯೂ ಸಿನಿಮಾಗೆ ಸಹಕಾರಿಯಾಗಿದೆ.ಆದರೆ ಅದೊಂದೇ ಸಿನಿಮಾ ಯಶಸ್ವಿಗೆ ಸಹಾಯವಾಗಲು ಸಾಧ್ಯವಿಲ್ಲ ಎಂದರು.

Last Updated : May 19, 2019, 01:27 PM IST
ಕೇವಲ ತಂತ್ರಜ್ಞಾನದಿಂದಲೇ ಸಿನಿಮಾವನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲ: ಅನಿಲ್ ಕಪೂರ್  title=

ನವದೆಹಲಿ: ಶೇಖರ್ ಕಪೂರ್ ಅವರ ಮಿಸ್ಟರ್ ಇಂಡಿಯಾ ಸಿನಿಯಾ ಪ್ರೊಜೆಕ್ಟ್ ಕುರಿತಾಗಿ ಮಾತನಾಡಿದ ಅನಿಲ್ ಕಪೂರ್ ತಂತ್ರಜ್ಞಾನ ಬೆಳವಣಿಗೆಯೂ ಸಿನಿಮಾಗೆ ಸಹಕಾರಿಯಾಗಿದೆ.ಆದರೆ ಅದೊಂದೇ ಸಿನಿಮಾ ಯಶಸ್ವಿಗೆ ಸಹಾಯವಾಗಲು ಸಾಧ್ಯವಿಲ್ಲ ಎಂದರು.

ಶುಕ್ರವಾರದಂದು ಶೇಖರ್ ಕಪೂರ್ ಮತ್ತು ಅನಿಲ್ ಕುಮಾರ್ ಪರಸ್ಪರ ಭೇಟಿ ಮಾಡಿ ಸಿನಿಮಾದ ಬಗ್ಗೆ ಚರ್ಚಿಸಿದರು. ಇದಾದ ನಂತರ ಶೇಕರ್ ಸಾಮಾಜಿಕ ಮಾಧ್ಯಮಗಳಲ್ಲಿ ಮುಂದಿನ ಚಿತ್ರ ಮಿಸ್ಟರ್ ಇಂಡಿಯಾ 2 ಅಥವಾ ಮತ್ತೊಂದು ಸಿನಿಮಾ ಜೊತೆಯಾಗಿ ಮಾಡುವುದರ ಕುರಿತು ನೀವು ಅವರಿಗೆ ಹೇಳಿ ಅನಿಲ್ ಕಪೂರ್ ! ಎಂದು ಟ್ವೀಟ್ ಮಾಡಿದ್ದಾರೆ.

ಈ ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅನಿಲ್ ಕಪೂರ್ "ಹೌದು, ನಾವು ಚರ್ಚಿಸುತ್ತಿದ್ದೆವು. ಆದರೆ ಆ ಬಗ್ಗೆ ಈಗಲೇ ಚರ್ಚೆ ಮಾಡುವುದು ಸರಿಯಲ್ಲ, ಶೇಖರ್ ಮತ್ತು ನಾನು ಉತ್ತಮ ಸ್ನೇಹಿತರು. ಅವಕಾಶ ಸಿಕ್ಕಾಗಲೆಲ್ಲಾ ನಾವು ಭೇಟಿ ಆಗತ್ತಿರುತ್ತೇವೆ. ಇದುವರೆಗೂ ನಮ್ಮ ನಡುವೆ ಏನು ಬದಲಾಗಿಲ್ಲ" ಎಂದು ತಿಳಿಸಿದರು. 

1987 ರಲ್ಲಿ ಬಿಡುಗಡೆಯಾದ  ಶೇಕರ್ ಕಪೂರ್ ನಿರ್ದೇಶನ ಹಾಗೂ ಅನಿಲ್ ಕಪೂರ್ ಅಭಿನಯದ ಮಿಸ್ಟರ್  ಇಂಡಿಯಾ ವಾಣಿಜ್ಯಿಕವಾಗಿ ಯಶಸ್ವಿಯಾದ ವೈಜ್ಞಾನಿಕ ಚಿತ್ರಗಳಲ್ಲಿ ಒಂದಾಗಿದೆ.

Trending News