Bigg Boss Kannada 11 Winner: ಬಿಗ್‌ ಬಾಸ್‌ ವಿನ್ನರ್‌ ಆದ ಹನುಮಂತ, ರನ್ನರ್‌ ಅಫ್‌ಗೆ ತೃಪ್ತಿಪಟ್ಟುಕೊಂಡ ತ್ರಿವಿಕ್ರಮ್!!

Bigg Boss Kannada 11 Winner: ಬಿಗ್‌ ಬಾಸ್ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಎಲ್ಲರ ಆಸೆಯಂತೆ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.   

Written by - Puttaraj K Alur | Last Updated : Jan 27, 2025, 12:10 AM IST
 Bigg Boss Kannada 11 Winner: ಬಿಗ್‌ ಬಾಸ್‌ ವಿನ್ನರ್‌ ಆದ ಹನುಮಂತ, ರನ್ನರ್‌ ಅಫ್‌ಗೆ ತೃಪ್ತಿಪಟ್ಟುಕೊಂಡ ತ್ರಿವಿಕ್ರಮ್!!
Live Blog

Bigg Boss Kannada 11 Winner: ಬಿಗ್‌ ಬಾಸ್ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಎಲ್ಲರ ಆಸೆಯಂತೆ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್‌ ಅವರು ರನ್ನರ್‌ ಅಫ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ. 2ನೇ ರನ್ನರ್‌ ಅಫ್‌ ಆಗಿ ರಜನ್‌ ಕಿಶನ್‌, 3ನೇ ರನ್ನರ್‌ ಅಫ್‌ ಮೋಕ್ಷಿತಾ ಪೈ ಮತ್ತು 4ನೇ ರನ್ನರ್‌ ಅಫ್‌ ಆಗಿ ಉಗ್ರಂ ಮಂಜು ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

27 January, 2025

  • 23:26 PM

    ಬಿಗ್‌ ಬಾಸ್‌ ಮನೆಯಿಂದ ರಜತ್‌ ಔಟ್:‌ ಬಿಗ್‌ ಬಾಸ್‌ ಮನೆಯಿಂದ 2ನೇ ರನ್ನರ್‌ ಅಫ್‌ ಆಗಿ ರಜತ್‌ ಕಿಶನ್‌ ಔಟ್‌ ಆಗಿದ್ದಾರೆ. ಕಿಚ್ಚ ಸುದೀಪ್‌ ಅವರು ಹನುಮಂತ, ತ್ರಿವಿಕ್ರಮ್‌ ಮತ್ತು ರಜತ್‌ ಅವರನ್ನ ಬಿಗ್‌ ಬಾಸ್‌ ವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಮೂವರಿಗೂ ಒಂದು ಟಾಸ್ಕ್‌ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ರಜತ್‌ ಅವರು ಔಟ್‌ ಆದರು. ಹೀಗಾಗಿ ಹನುಮಂತ ಮತ್ತು ತ್ರಿವಿಕ್ರಮ್‌ ಅವರು ಅಂತಿಮ ಸೆಣಸಾಟಕ್ಕೆ ಸಜ್ಜಾಗಿದ್ದಾರೆ.  

  • 23:17 PM

    ಹನುಮಂತನ ಬಿಗ್ ಬಾಸ್ ಜರ್ನಿ ಹೇಗಿತ್ತು ನೋಡಿ: 21ನೇ ದಿನಕ್ಕೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಹನುಮಂತು ಲಕ್ಷಾಂತರ ಜನರ ಮನಸ್ಸು ಗೆದ್ದಿದ್ದಾರೆ. ಈ ಬಾರಿಯ ಗ್ರ್ಯಾಂಡ್‌ ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ಹನುಮಂತ ಎಂಟ್ರಿಯಾಗಿ ಹೊಸ ದಾಖಲೆಯನ್ನು ನಿರ್ಮಿಸಿದರು. ಹೇಳೋದೆಲ್ಲಾ ಹೇಳಾಗೈತಿ, ತೋರ್ಸೋದೆಲ್ಲಾ ತೋರ್ಸಾಗೈತಿ, ಹನುಮಂತು ಜರ್ನಿ ಬಗ್ಗೆ ನೀವೇನ್‌ ಹೇಳ್ತೀರ್ರಿ? ನೋಡಿ...
     

  • 23:13 PM

    ರಜತ್ ಕಿಶನ್‌ ಬಿಗ್ ಬಾಸ್ ಜರ್ನಿ ಹೇಗಿತ್ತು ನೋಡಿ: 50 ದಿನಗಳ ನಂತರ ಬಿಗ್​ ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದ ರಜತ್ ಕಿಶನ್ ಲಕ್ಷಾಂತರ ಜನರ ಮನಗೆದ್ದು ಟಾಪ್​​ 3ಯಲ್ಲಿ ಜಾಗ ಪಡೆದುಕೊಂಡಿದ್ದಾರೆ. ಲೇಟಾಗಿ ಬಂದ್ರೂ ಎಲ್ಲರನ್ನೂ ಎಂಟರ್‌ಟೈನ್ ಮಾಡಿದ ರಜತ್ ಕಿಶನ್‌ ಬಿಗ್ ಬಾಸ್ ಜರ್ನಿ ಇಲ್ಲಿದೆ ನೋಡಿ...

  • 22:48 PM

    ಬ್ರೇಸ್ಲೆಟ್ ಉಡುಗೊರೆ ನೀಡಿದ ಕಿಚ್ಚ: ಬಿಗ್ ಬಾಸ್ ಕನ್ನಡ ಅಂತಿಮ ಘಟ್ಟದ ​​ಹೃದಯಸ್ಪರ್ಶಿ ಕ್ಷಣದಲ್ಲಿ, ಕಿಚ್ಚ ಸುದೀಪ್ ತಮ್ಮ ವೈಯಕ್ತಿಕ ಬ್ರೇಸ್ಲೆಟ್ ಅನ್ನು ಪುಟ್ಟ ಹುಡುಗನಿಗೆ ಗಿಫ್ಟ್‌ ಆಗಿ ನೀಡಿದ್ದಾರೆ. ಈ ಪುಟ್ಟ ಬಾಲಕ ಕಿಚ್ಚ ಸುದೀಪ್‌ ಅವರ ನೃತ್ಯವನ್ನು ಪ್ರದರ್ಶಿಸಿ ಕಿಚ್ಚ ಸುದೀಪ್‌ ಅವರ ಗಮನ ಸೆಳೆದಿದ್ದ. ಇದರಿಂದ ಖುಷಿಯಾದ ಸುದೀಪ್‌ ಅವರು ಪುಟ್ಟ ಹುಡುಗನನ್ನು ವೇದಿಕೆಗೆ ಕರೆದು ತಮ್ಮ ಕೈಗೆ ಧರಿಸಿದ್ದ ಪರ್ಸನಲ್‌ ಬ್ರೇಸ್ಲೆಟ್ ಅನ್ನು ತೆಗೆದು ಗಿಫ್ಟ್‌ ನೀಡಿದ್ದಾರೆ.  
     

  • 22:36 PM

    ಕಿಚ್ಚನಿಗೆ ಅಮ್ಮನ ನೆನಪು: ಕಿಚ್ಚ ಸುದೀಪ್ ಅವರ ದಿವಂಗತ ತಾಯಿಯೊಂದಿಗಿನ ಬಾಂಧವ್ಯವನ್ನು ಹೃದಯಸ್ಪರ್ಶಿ ನೃತ್ಯ ಪ್ರದರ್ಶನದ ಮೂಲಕ ಬಿಗ್‌ ಬಾಸ್‌ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಈ ಹೃದಯಸ್ಪರ್ಶಿ ನೃತ್ಯವನ್ನು ಕಣ್ತುಂಬಿಕೊಂಡ ಕಿಚ್ಚ ಸುದೀಪ್‌ ಅವರು ಭಾವುಕರಾದರು. 
     

  • 22:26 PM

    ಬಿಗ್‌ ಬಾಸ್‌ ಮನೆಗೆ ಸುದೀಪ್‌ ಪುತ್ರಿ: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿಯು ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಹಾಡು ಹಾಡುವ ಮೂಲಕ ಗಮನ ಸೆಳೆದರು. ಇದೇ ವೇಳೆ ಕಿಚ್ಚ ಸುದೀಪ್‌ಗೆ ಅವರಿಗೆ ತಾಯಿ ಸರೋಜಾ ಸಂಜೀವ್‌ ಅವರ ನೆನಪು ಮಾಡಿಕೊಡಲಾಯಿತು. ಅಮ್ಮನ ನೆನಪಿನಿಂದ ಕಿಚ್ಚ ಭಾವುಕರಾದರು. 

  • 22:23 PM

    ಕಿಚ್ಚನ ಸಾಧನೆಗೆ ಯೋಗರಾಜ್‌ ಭಟ್‌ ಮೆಚ್ಚುಗೆ: ಕಳೆದ 11 ವರ್ಷಗಳಿಂದಲೂ ಬಿಗ್‌ ಬಾಸ್‌ ನಡೆಸಿಕೊಂಡು ಬರುತ್ತಿರುವ ಕಿಚ್ಚ ಸುದೀಪ್‌ ಸಾಧನೆಗೆ ಸ್ಯಾಂಡಲ್‌ವುಡ್‌ ಸ್ಟಾರ್‌ ಡೈರೆಕ್ಟರ್‌ ಯೋಗರಾಜ್‌ ಭಟ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್‌ ಬಾಸ್‌ ವೇದಿಕೆ ಮೇಲೆ ಮಾತನಾಡಿದ ಅವರು, ʼ11 ವರ್ಷಗಳ ನಂತರವೂ ಈ ಕಾರ್ಯಕ್ರಮ ನಿನ್ನೆ ಮೊನ್ನೆಯಷ್ಟೇ ಪ್ರಾರಂಭವಾದಂತೆ ಭಾಸವಾಗುತ್ತಿದೆʼ ಎಂದು ಹೇಳಿದ್ದಾರೆ. ʼಈ ಶೋವನ್ನು ಇಷ್ಟು ವರ್ಷಗಳ ಕಾಲ ಒಬ್ಬರೇ ವ್ಯಕ್ತಿ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯದ ವಿಷಯವಲ್ಲ. ಕಿಚ್ಚ ಸುದೀಪ್‌ ಅವರ ಸಾಧನೆ ದೊಡ್ಡದು. ನಾವು ಅವರ ಈ ಸಾಧನೆಗೆ ಹ್ಯಾಟ್ಸ್‌ಅಫ್‌ ಹೇಳಬೇಕುʼ ಅಂತಾ ಹೇಳಿದ್ದಾರೆ. 

  • 22:11 PM

    ಬಿಗ್‌ ಬಾಸ್‌ ವೇದಿಕೆಯಲ್ಲಿ ಯೋಗರಾಜ್‌ ಭಟ್:‌ ʼಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಶನಿವಾರ ಭವ್ಯಾ ಗೌಡ ದೊಡ್ಮನೆಯಿಂದ ಔಟ್‌ ಆಗಿದ್ದರೆ, ಇಂದು ಉಗ್ರಂ ಮಂಜು ಮತ್ತು ಮೋಕ್ಷಿತಾ ಪೈ ಹೊರಬಂದಿದ್ದಾರೆ. ಸದ್ಯ ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಇದ್ದಾರೆ. ಈ ಮೂವರ ಪೈಕಿ ಟ್ರೋಫಿ ಯಾರಿಗೆ ಒಲಿಯುತ್ತದೆ ಅನ್ನೋ ಕುತೂಹಲ ಮೂಡಿದೆ. ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆಯ ಫೈನಲ್‌ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್ ಸಾಕ್ಷಿಯಾಗಿದ್ದಾರೆ.   
     

  • 22:03 PM

    ವೇದಿಕೆಗೆ ಮೂವರು ಸ್ಪರ್ಧಿಗಳು: ಉಗ್ರ ಮಂಜು ಮತ್ತು ಮೋಕ್ಷಿತಾ ಪೈ ಬಿಗ್‌ ಬಾಸ್‌ ಮನೆಯಿಂದ ನಿರ್ಗಮಿಸಿದ ಬಳಿಕ ಇನ್ನುಳಿದ ಮೂವರು ಸ್ಪರ್ಧಿಗಳು ಅಂದರೆ ಹನುಮಂತು, ತ್ರಿವಿಕ್ರಮ್‌ ಮತ್ತು ರಜತ್‌ ಅವರನ್ನ ದೊಡ್ಮನೆಯಿಂದ ಕಿಚ್ಚ ಸುದೀಪ್‌ ಅವರೇ ವೇದಿಕೆ ಮೇಲೆ ಕರೆತರುವುದಾಗಿ ಹೇಳಿದ್ದಾರೆ. ಈ ಮೂವರು ಸ್ಪರ್ಧಿಗಳ ಪೈಕಿ ಒಬ್ಬರು ಔಟ್‌ ಆಗಲಿದ್ದು, ಇನ್ನುಳಿದ ಇಬ್ಬರಲ್ಲಿ ಒಬ್ಬರು ವಿನ್ನರ್‌ ಇನ್ನೊಬ್ಬರು ರನ್ನರ್‌ ಅಫ್‌ ಆಗಲಿದ್ದಾರೆ. 

  • 21:58 PM

    ಕಿಚ್ಚ ಸುದೀಪ್‌ಗೆ ಬಿಗ್‌ ಬಾಸ್‌ ಗಿಫ್ಟ್!‌: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಕಿಚ್ಚ ಸುದೀಪ್‌ ಅವರಿಗೆ ಈ ಬಿಗ್‌ ಬಾಸ್‌ ಕೊನೆಯ ಶೋ ಆಗಲಿದೆ. ಸತತ 11 ಸೀಸನ್‌ ನಿರೂಪನೆ ಮಾಡುವ ಮೂಲಕ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದು ಅವರ ಕೊನೆಯ ಶೋ ಆಗಿರುವುದರಿಂದ ಬಿಗ್‌ ಬಾಸ್‌ ಕಡೆಯಿಂದ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್‌ ಸಿಕ್ಕಿದೆ. ಈ ಗಿಫ್ಟ್‌ ಕಂಡು ಕಿಚ್ಚ ಅವರು ವೇದಿಕೆ ಮೇಲೆಯೇ ಭಾವುಕರಾಗಿದ್ದಾರೆ. 

  • 21:48 PM

    ಬಿಗ್‌ ಬಾಸ್‌ ಮನೆಗೆ ಕಿಚ್ಚ ಸುದೀಪ್‌ ತಂದೆ: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೊನೆ ಹಂತಕ್ಕೆ ಬಂದಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. 4ನೇ ರನ್ನರ್‌ ಅಫ್‌ ಆಗಿ ಉಗ್ರ ಮಂಜು, 3ನೇ ರನ್ನರ್‌ ಅಫ್‌ ಆಗಿ ಮೋಕ್ಷಿತಾ ಪೈ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಇದು ಕಿಚ್ಚ ಸುದೀಪ್‌ ಅವರ ಕೊನೆಯ ಬಿಗ್‌ ಬಾಸ್‌ ಶೋ ಆಗಿರಲಿದೆ. ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು 11 ಬಾರಿ ಶೋ ನಡೆಸಿಕೊಡುವ ಮೂಲಕ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದ್ದಾರೆ. ಇದೆಲ್ಲದರ ನಡುವೆ ಇದೇ ಅವರ ಕೊನೆಯ ಬಿಗ್‌ಬಾಸ್ ಶೋ ಅಂತಲೂ ಹೇಳಿದ್ದಾರೆ. ಕಿಚ್ಚ ಅವರ ಕೊನೆಯ ಬಿಗ್‌ ಬಾಸ್‌ ಶೋ ಆಗಿರುವುದರಿಂದ ಈ ವಿಶೇಷ ಕಾರ್ಯಕ್ರಮಕ್ಕೆ ಅವರ ತಂದೆ ಸಂಜೀವ್‌ ಅವರು ಆಗಮಿಸಿದ್ದಾರೆ. ಅವರು ಬಿಗ್‌ ಬಾಸ್‌ ಕಾರ್ಯಕ್ರಮದ ಫೈನಲ್‌ಗೆ ಸಾಕ್ಷಿಯಾಗಿದ್ದಾರೆ.    

  • 21:34 PM

    ಬಿಗ್‌ ಬಾಸ್‌ ಮನೆಯಿಂದ ಮೋಕ್ಷಿತಾ ಪೈ ಔಟ್:‌ ಉಗ್ರಂ ಮಂಜು ಬೆನ್ನಲ್ಲೇ 3ನೇ ರನ್ನರ್‌ ಅಫ್‌ ಆಗಿ ಮೋಕ್ಷಿತಾ ಪೈ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಈ ಬಾರಿ ಮಹಿಳಾ ಸ್ಪರ್ಧಿಯೊಬ್ಬರು ಬಿಗ್‌ ಬಾಸ್‌ ಟ್ರೋಫಿ ಗೆಲ್ಲುತ್ತಾರೆ ಅಂತಾ ಹೇಳಲಾಗಿತ್ತು. ಆದರೆ ಈ ಬಾರಿಯೂ ಆ ಆಸೆ ನೆರವೇರಿಲ್ಲ. ಇದು ಬಿಗ್‌ ಬಾಸ್‌ ವೀಕ್ಷಕರಿಗೆ ಕೊಂಚ ಬೇಸರ ಮೂಡಿಸಿದೆ. ಹನುಮಂತನ ಆಯ್ಕೆ ಮೇರೆಗೆ ಮೋಕ್ಷಿತಾ ಪೈ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಭವ್ಯಾ ಗೌಡ ದೊಡ್ಮನೆಯಿಂದ ನಿರ್ಗಮಿಸಿದರೂ ಮೋಕ್ಷಿತಾ ಪೈ ಸೇಫ್‌ ಆಗುವ ಮೂಲಕ ಫೈನಲ್‌ ತಲುಪಿದ್ದರು. ಆದರೆ ಇಂದು ಅವರು 3ನೇ ರನ್ನರ್‌ ಅಫ್‌ ಆಗಿ ದೊಡ್ಮನೆಯಿಂದ ಔಟ್‌ ಆಗಿದ್ದಾರೆ. 
     

  • 21:05 PM

    ಉಗ್ರಂ ಮಂಜು ಕೈ ತಪ್ಪಿದ ಬಿಗ್ ಬಾಸ್ ಟ್ರೋಫಿ: ಖ್ಯಾತ ನಟ ಉಗ್ರಂ ಮಂಜು ಅವರು ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಶನಿವಾರ ಅತಿಕಡಿಮೆ ಮತಗಳನ್ನು ಪಡೆದುಕೊಂಡಿದ್ದ ಭವ್ಯಾಗೌಡ ಹೊರಬಂದಿದ್ದರು. ಇಂದು 4ನೇ ರನ್ನರ್‌ ಅಫ್‌  ಆಗಿ ಉಗ್ರ ಮಂಜು ಹೊರಬಂದಿದ್ದಾರೆ. ಆರಂಭದಿಂದ ಕೊನೆಯವರೆಗೂ ಸಖತ್ ಪೈಪೋಟಿ ನೀಡಿದ್ದ ಅವರು ಫಿನಾಲೆ ತಲುಪಿದ್ದರು. ಆದರೆ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ನನಸಾಗಲೇ ಇಲ್ಲ. ಕೊನೇ ಹಂತದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ತುಂಬಾ ಬೇಸರವನ್ನು ಉಂಟುಮಾಡಿದೆ.

Trending News