ಬರ್ತ್‌ಡೇ ವಿಶ್‌ ಮಾಡಿ ಶೀಘ್ರವೇ ಭೇಟಿ ಮಾಡ್ತಿನಿ ಎಂದ ಪ್ರಥಮ್;‌ ಈ ಗುಳ್ಳೆ ನರಿನ ಮಾತ್ರ ನಂಬಬೇಡಿ ಎಂದ ಫ್ಯಾನ್ಸ್!

Darshan Birthday: ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಪ್ರಥಮ್‌ಗೆ ನಟ ದರ್ಶನ್ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿ ಟ್ರೋಲ್‌ ಮಾಡುತ್ತಿದ್ದಾರೆ. ʼಈ ಗುಳ್ಳೆ ನರಿನ ಮಾತ್ರ ನಂಬಬೇಡಿ ದರ್ಶನ್ ಸಾರ್...ʼ ಎಂದು ಕಾಮೆಂಟ್‌ ಮಾಡಿದ್ದಾರೆ. ʼಪ್ರಥಮ್‌ ನೀನು ಊಸರವಳ್ಳಿʼ ಎಂದು ಕೆಲವರು ಆರೋಪಿಸಿದ್ದಾರೆ.

Written by - Puttaraj K Alur | Last Updated : Feb 17, 2025, 06:57 PM IST
  • ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
  • ಬಾಕ್ಸ್‌ ಆಫೀಸ್‌ ಸುಲ್ತಾನನಿಗೆ ಶುಭಕೋರಿದ ಒಳ್ಳೆ ಹುಡುಗ ಪ್ರಥಮ್‌
  • ಈ ಗುಳ್ಳೆ ನರಿನ ಮಾತ್ರ ನಂಬಬೇಡಿ ದರ್ಶನ್ ಸಾರ್ ಎಂದ ಫ್ಯಾನ್ಸ್‌
ಬರ್ತ್‌ಡೇ ವಿಶ್‌ ಮಾಡಿ ಶೀಘ್ರವೇ ಭೇಟಿ ಮಾಡ್ತಿನಿ ಎಂದ ಪ್ರಥಮ್;‌ ಈ ಗುಳ್ಳೆ ನರಿನ ಮಾತ್ರ ನಂಬಬೇಡಿ ಎಂದ ಫ್ಯಾನ್ಸ್! title=
ದರ್ಶನ್‌ಗೆ ಶುಭ ಕೋರಿದ ಪ್ರಥಮ್!!

Darshan Thoogudeepa Birthday Celebration: ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಸದ್ಯ ಬೇಲ್‌ ಮೇಲೆ ಹೊರಗಿರುವ ʼದಾಸʼನ ಬರ್ತ್‌ಡೇಯನ್ನ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಸ್ಯಾಂಡಲ್‌ವುಡ್‌ ಬಾಕ್ಸ್‌ಆಫೀಸ್‌ ಸುಲ್ತಾನ ಎಲ್ಲಾ ಆರೋಪಗಳಿಂದಲೂ ಮುಕ್ತವಾಗಿ ಸಿನಿಮಾಗಳನ್ನು ಮಾಡಲಿ ಎಂದು ಶುಭ ಹಾರೈಸುತ್ತಿದ್ದಾರೆ. 

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಟ ದರ್ಶನ್ ಅವರ 48ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ದರ್ಶನ್‌ ಅವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರಥಮ್‌, ದರ್ಶನ್‌ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ದರ್ಶನ್‌ ಜೈಲುಪಾಲಾದಾಗ ದರ್ಶನ್‌ ಅಭಿಮಾನಿಗಳ ವರ್ತನೆಗೆ ಪ್ರಥಮ್‌ ಬೇಸರ ಹೊರಹಾಕಿದ್ದರು. ಹೀಗಾಗಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗಿತ್ತು.

ಇದನ್ನೂ ಓದಿ: 'ನಾನು ಗೋಮಾಂಸ ತಿನ್ನುವ ಏಕೈಕ ಹಿಂದೂ..' ಪ್ರಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ!

ತಮ್ಮ ನೆಚ್ಚಿನ ನಟ ದರ್ಶನ್‌ ಬಗ್ಗೆ ಪ್ರಥಮ್‌ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಟ ದರ್ಶನ್‌ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರಥಮ್‌ vs ದರ್ಶನ್‌ ಫ್ಯಾನ್ಸ್‌ ವಾರ್‌ ಕೂಡ ನಡೆದಿತ್ತು. ಇದೀಗ ʼದಚ್ಚುʼ ಹುಟ್ಟುಹಬ್ಬಕ್ಕೆ ಪ್ರಥಮ್‌ ವಿಶ್‌ ಮಾಡಿದ್ದು ಹಿಂದಿನ ಘಟನೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಥಮ್‌, ʼComplete ಆಗಿ ಓದಿ!🤗 Actually ಮೊದ್ಲು ನಾವು ಹೀಗಿದ್ವಿ...!ʼ ಎಂದು ದರ್ಶನ್‌ ಜೊತೆಗಿರುವ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಮುಂದುವರೆದು, ʼಹಾಳಾದ್ social media ಬಂದು ನಾನ್ ಹೇಳಿದ್ದನ್ನ ಕೆಲವೇ ಕೆಲವು uneducatedಗಳು ಬೇರೆ ರೀತಿ ತಿರುಚಿ ಸ್ವಲ್ಪ ಗೊಂದಲ ಸೃಷ್ಟಿ ಮಾಡಿದ್ದಾರೆ! ಶೀಘ್ರದಲ್ಲೇ ನಿಮ್ಮನ್ನ ಭೇಟಿ ಮಾಡ್ತೀನಿ; ಅಲ್ಲೀತನಕ ಈ ಗೊಂದಲ ಇದ್ದೀದ್ದೆ🤔😪😅ʼ ಎಂದು ಹೇಳಿದ್ದಾರೆ. 

ಇದನ್ನೂ ಓದಿ: "ಕಪಟಿ" - ಡಾರ್ಕ್ ವೆಬ್‌ನಲ್ಲಿ ರೋಮಾಂಚನಕಾರಿ ಸವಾರಿ : ಬಹು ನಿರೀಕ್ಷಿತ ಈ ಚಿತ್ರ ಮಾರ್ಚ್ 7 ರಂದು ಬಿಡುಗಡೆ

ʼಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು Darshan Thoogudeepa Srinivas sir.. ಅಂದಹಾಗೆ ಒಂದು ಮಾತು.... ನನ್ನ ಪಾಡಿಗೆ ನಾನಿದ್ದಾಗ ಯಾರಾದ್ರೂ stage ಮೇಲೆ counter ಕೊಟ್ಟಾಗ ನಾನು ಸ್ವಲ್ಪ class ತಗೊಂಡು ಬಿಸಿ ಮುಟ್ಟಿಸಿರ್ತೀನಿ ಅಷ್ಟೇ; Otherwise ನಿಮ್ಮ ಬಗ್ಗೆ ಗೌರವ ಇದೆ! ಯಾರದೋ ಮಾತು ಕೇಳಿ ಅಥವಾ edited video ನೋಡಿ ಬೇಸರವಾಗಬೇಡಿ... ಶೀಘ್ರದಲ್ಲೇ ನಿಮ್ಮನ್ನ ಭೇಟಿ ಮಾಡ್ತೀನಿ ದರ್ಶನ್ ಸರ್ʼ ಎಂದು ಪ್ರಥಮ್‌ ಬರದುಕೊಂಡಿದ್ದಾರೆ. 

ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಪ್ರಥಮ್‌ಗೆ ನಟ ದರ್ಶನ್‌ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿ ಟ್ರೋಲ್‌ ಮಾಡುತ್ತಿದ್ದಾರೆ. ʼಈ ಗುಳ್ಳೆ ನರಿನ ಮಾತ್ರ ನಂಬಬೇಡಿ ದರ್ಶನ್ ಸಾರ್...ʼ ಎಂದು ಕಾಮೆಂಟ್‌ ಮಾಡಿದ್ದಾರೆ. ʼಪ್ರಥಮ್‌ ನೀನು ಊಸರವಳ್ಳಿʼ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News