Benefits Of Rice Water: ಅಕ್ಕಿ ತೊಳೆದ ನೀರು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಮಾತ್ರವಲ್ಲ, ಇದನ್ನು ಗೃಹೋಪಯೋಗಿ ಕೆಲಸಗಳಿಗಾಗಿಯೂ ಬಳಸಬಹುದು.
ಅಕ್ಕಿ ತೊಳೆದ ನೀರನ್ನು ವ್ಯರ್ಥ ಮಾಡದೆ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...
ಕಾಲಿಗೆ ಶಕ್ತಿ:
ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅಕ್ಕಿ ತೊಳೆದ ನೀರನ್ನು ಸ್ವಲ್ಪ ಬಿಸಿ ಮಾಡಿ ಮಕ್ಕಳ ಸೊಂಟದ ಭಾಗದಿಂದ ಆ ನೀರನ್ನು ಸುರಿದರೆ ಕಾಲುಗಳಿಗೆ ಶಕ್ತಿ ಬರುತ್ತದೆ.
ಫೇಸ್ ಟೋನರ್:
ಅಕ್ಕಿ ತೊಳೆದ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಮುಖದಲ್ಲಿ ರಂಧ್ರಗಳನ್ನು ಬಿಗಿಗೊಳಿಸಿ, ಕಾಂತಿಯುತ ಚರ್ಮವನ್ನು ನೀಡುವಲ್ಲಿ ಪರಿಣಾಮಕಾರಿ ಆಗಿದೆ.
ಕೂದಲಿನ ಆರೈಕೆ:
ಅಕ್ಕಿ ತೊಳೆದ ನೀರಿನಿಂದ ಹೇರ್ ವಾಶ್ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ದೊರೆಯುತ್ತದೆ. ಮಾತ್ರವಲ್ಲ, ಕಾಂತಿಯುತವಾದ ಸುಂದರ ಕೇಶರಾಶಿ ಹೊಂದಲು ಇದು ಪರಿಣಾಮಕಾರಿ ಆಗಿದೆ.
ನೈಸರ್ಗಿಕ ಗೊಬ್ಬರ:
ಅಕ್ಕಿ ತೊಳೆದ ನೀರು ಪೋಷಕಾಂಶಗಳಿಂದ ತುಂಬಿದ್ದು ಇದನ್ನು ಗಿಡಕ್ಕೆ ಹಾಕುವುದಿಂದ ಸಸ್ಯವು ಸೊಂಪಾಗಿ ಬೆಳೆಯುತ್ತದೆ.
ಬಟ್ಟೆಗಳಿಗೆ ಬಳಸಬಹುದು:
ಅಕ್ಕಿ ತೊಳೆದ ನೀರಿನಲ್ಲಿ ನೈಸರ್ಗಿಕ ಪಿಷ್ಟವಿರುತ್ತೆ. ಕಾಟನ್ ಬಟ್ಟೆಗಳನ್ನು ಈ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ವಾಶ್ ಮಾಡುವುದರಿಂದ ಬಟ್ಟೆಗಳಿಗೆ ಗರಿಗರಿಯಾದ ಲುಕ್ ದೊರೆಯುತ್ತದೆ.
ಇದನ್ನೂ ಓದಿ- ರಾತ್ರಿಯಿಡೀ ಚೆನ್ನಾಗಿ ಮಲಗಿದ್ದರೂ ಸಹ ಹಗಲಿನಲ್ಲಿ ನಿದ್ದೆ ಬರ್ತಿದ್ಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಇದರ ಕೊರತೆ ಇದೆ
ಜಿಡ್ಡಿನ ಪಾತ್ರೆ ಸ್ವಚ್ಛಗೊಳಿಸಲು:
ಅಕ್ಕಿ ತೊಳೆದ ನೀರನ್ನು ಸ್ವಲ್ಪ ಬಿಸಿ ಮಾಡಿ ಜಿಡ್ಡಿನಿಂದ ಕಲೆಗಟ್ಟಿರುವ ಪಾತ್ರೆ ತೊಳೆಯುವುದರಿಂದ ಪಾತ್ರೆಯಲ್ಲಿ ಜಿಡ್ಡು ಮಾಯವಾಗಿ ಫಳಫಳ ಹೊಳೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.