Gopichand starrer Vishwam: ಗೋಪಿಚಂದ್ ಮತ್ತು ಕಾವ್ಯಾ ಥಾಪರ್ ನಟಿಸಿರುವ ತೆಲುಗಿನ ಆಕ್ಷನ್- ರೊಮ್ಯಾಂಟಿಕ್ ಚಿತ್ರ "ವಿಶ್ವಂ" ಅಮೆಜಾನ್ ಪ್ರೈಮ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡುಗರ ಮೆಚ್ಚುಗೆ ಪಡೆಯುತ್ತಿದೆ. ಡೈನಾಮಿಕ್ ಡೈರೆಕ್ಟರ್ ಶ್ರೀನು ವೈಟ್ಲ ನಿರ್ದೇಶಿಸಿದ, ಆಕ್ಷನ್ ಮತ್ತು ಕಾಮಿಡಿ ಎಂಟರ್ಟ್ರೇನರ್ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಚಿತ್ರಾಲಯಂ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿವೆ.
ಟಿಜಿ ವಿಶ್ವ ಪ್ರಸಾದ್ ಮತ್ತು ವೇಣು ದೊಣೆಪುಡಿ ನಿರ್ಮಿಸಿದ ಈ ಚಿತ್ರವು ಶ್ರೀನು ವೈಟ್ಲ ಅವರ ಸ್ಟ್ರಾಂಗ್ ಕಂಬ್ಯಾಕ್ ಎಂದೇ ಹೇಳಲಾಗುತ್ತಿದೆ. ಸದ್ಯ ಪ್ರೈಂ ಒಟಿಟಿಯಲ್ಲಿ ವೀಕ್ಷಕರಿಂದ ಹೆಚ್ಚೆಚ್ಚು ವೀಕ್ಷಣೆ ಪಡೆದ ಈ ಸಿನಿಮಾ, ಬೇರೆ ಸಿನಿಮಾಗಳಿಗೂ ಪೈಪೋಟಿ ನೀಡುತ್ತಿದೆ. "ವಿಶ್ವಂ" ಆರ್ಮಿ ಹಿನ್ನೆಲೆಯಲ್ಲಿ ಮೂಡಿಬಂದ ಸಿನಿಮಾ. ಆಕ್ಷನ್- ಪ್ಯಾಕ್ಡ್ ಚಿತ್ರದಲ್ಲಿ ಗೋಪಿಚಂದ್ ಅಷ್ಟೇ ರಗಡ್ ಆಗಿಯೇ ಕಂಡಿದ್ದಾರೆ.
ಮಗುವಿಗೆ ಜನ್ಮ ನೀಡಲು ತಾಯಿಯೊಬ್ಬಳು ತನ್ನ ಪ್ರಾಣವನ್ನು ತ್ಯಾಗ ಮಾಡುವ ಸುತ್ತ ಸುತ್ತುತ್ತದೆ. ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರಿಂದ ನಾಯಕ ಹೇಗೆ ಆ ತಾಯಿಯನ್ನು ರಕ್ಷಿಸುತ್ತಾನೆ ಎಂಬುದೇ ಈ ಚಿತ್ರದ ಕಥೆ. ಚಿತ್ರದಲ್ಲಿ ಹಿರಿಯ ನಟರಾದ ನರೇಶ್, ಪೃಥ್ವಿ, ವೆನ್ನೆಲಾ ಕಿಶೋರ್ ಮತ್ತು ಗಣೇಶ್ ಸಹ ನಟಿಸಿದ್ದಾರೆ. ಒಟ್ಟಾರೆ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ ಇದಾಗಿದ್ದು, ಚಿತ್ರದ ಹಾಡುಗಳೂ ಸಹ ಯೂಟ್ಯೂಬ್‌ನಲ್ಲಿ ಮೆಚ್ಚುಗೆ ಪಡೆದಿವೆ.
2024ರ ಅಕ್ಟೋಬರ್ 11ರಂದು ಬಿಡುಗಡೆ ಆದ ವಿಶ್ವಂ ಸಿನಿಮಾವನ್ನು ಶ್ರೀನು ವೈಟ್ಲಾ ನಿರ್ದೇಶನ ಮಾಡಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿ ಹೆಸರುವಾಸಿಯಾದ ಪೀಪಲ್ ಮೀಡಿಯಾ ಫ್ಯಾಕ್ಟರಿ, ವಿಶ್ವಂ ಚಿತ್ರವನ್ನು ನಿರ್ಮಾಣ ಮಾಡಿ, ಮತ್ತೊಂದು ಜಯವನ್ನು ತನ್ನ ಬತ್ತಳಿಕೆಗೆ ದಾಖಲಿಸಿಕೊಂಡಿದೆ.
ಇದೀಗ "ವಿಶ್ವಂ" ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಕರನ್ನು ರಂಜಿಸುತ್ತಿದೆ. ಇತರ ದೊಡ್ಡ ಚಲನಚಿತ್ರಗಳೊಂದಿಗೆ ಸ್ಪರ್ಧಿಸುತ್ತಿದೆ. ಚಿತ್ರಕ್ಕೆ ಚೇತನ್ ಭಾರದ್ವಾಜ್ ಮತ್ತು ಬೀಮ್ಸ್ ಸಂಗೀತ ನೀಡಿದ್ದು, ಕೆವಿ ಗುಹಾನ್ ಛಾಯಾಗ್ರಹಣವಿದೆ. ಒಟ್ಟಾರೆ ಈ ವಾರಾಂತ್ಯದ ಕುಟುಂಬ ವೀಕ್ಷಣೆಗೆ, "ವಿಶ್ವಂ" ಅತ್ಯುತ್ತಮ ಆಯ್ಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.