Bigg Boss Kannada 11: ದೊಡ್ಮನೆ ಮಂದಿಗೆ ಖಡಕ್ ಟಾಂಗ್ ಕೊಟ್ಟ ಹನುಮಂತ; ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್!!

Bigg Boss Kannada 11 Updates: ವೈಲ್ಡ್‌ ಕಾರ್ಡ್ ಎಂಟ್ರಿಯಾಗಿದ್ದ ಹನುಮಂತ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಸೀಸನ್‌ 11ರ ಫೈನಲ್‌ ತಲುಪಿದ್ದಾನೆ. ಹನುಮಂತನ ಅದ್ಭುತ ಆಟಕ್ಕೆ ಕಿಚ್ಚ ಸುದೀಪ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕಲರ್ಸ್‌ ಕನ್ನಡ ವಾಹಿನಿಯು ತನ್ನ ಪ್ರೋಮೋ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಹನುಮಂತ ಇನ್ನುಳಿದ ಸ್ಪರ್ಧಿಗಳಿಗೆ ಖಡಕ್‌ ಆಗಿ ಟಾಂಗ್‌ ನೀಡಿದ್ದಾರೆ.

Written by - Puttaraj K Alur | Last Updated : Jan 12, 2025, 07:15 PM IST
  • ದೊಡ್ಮನೆ ಮಂದಿಗೆ ಖಡಕ್ ಟಾಂಗ್ ಕೊಟ್ಟ ಹನುಮಂತ
  • ಹನುಮಂತನ ಟಕ್ಕರ್‌ಗೆ ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್
  • ಹನುಮಂತನ ಮಾತು ಕೇಳಿ ಗಹಗಹಸಿ ನಕ್ಕ ಕಿಚ್ಚ ಸುದೀಪ್
Bigg Boss Kannada 11: ದೊಡ್ಮನೆ ಮಂದಿಗೆ ಖಡಕ್ ಟಾಂಗ್ ಕೊಟ್ಟ ಹನುಮಂತ; ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್!! title=
ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್!

Bigg Boss Kannada 11: ಬಿಗ್‌ ಬಾಸ್‌ ನೀಡಿದ ಕಠಿಣ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹನುಮಂತ ಬಿಗ್‌ ಬಾಸ್‌ ಫೈನಲ್‌ ತಲುಪಿದ್ದಾನೆ. ಗ್ರ್ಯಾಂಡ್‌ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಇನ್ನುಳಿದ ಸ್ಪರ್ಧಿಗಳಲ್ಲಿ ಗೆಲುವಿಗಾಗಿ ಹೋರಾಟ ಜೋರಾಗಿದೆ. 'ಬಿಗ್ ಬಾಸ್' ಕನ್ನಡ ಸೀಸನ್ 11 ಶೋ ಇನ್ನೇನು ಎರಡು ವಾರ ಮಾತ್ರ ಪ್ರಸಾರವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಜನವರಿ 26ರಂದು ಬಿಗ್ ಬಾಸ್ ಫಿನಾಲೆ ಮುಗಿಯಲಿದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ 9 ಮಂದಿ ಇದ್ದು, ಇವರಲ್ಲಿ ಯಾರು ವಿನ್ನರ್ ಆಗಲಿದ್ದಾರೆ? ಯಾರು ಹೊರಗೆ ಬರಲಿದ್ದಾರೆ ಅನ್ನೋ ಕುತೂಹಲ ಜಾಸ್ತಿ ಆಗಿದೆ. ಈಗಾಗಲೇ ಮೊದಲ ಸ್ಪರ್ಧಿಯಾಗಿ ಹನುಮಂತ ಬಿಗ್‌ ಬಾಸ್‌ ಫೈನಲ್‌ ತಲುಪಿದ್ದಾನೆ.

ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದ್ದ ಹನುಮಂತ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಸೀಸನ್‌ 11ರ ಫೈನಲ್‌ ತಲುಪಿದ್ದಾನೆ. ಹನುಮಂತನ ಅದ್ಭುತ ಆಟಕ್ಕೆ ಕಿಚ್ಚ ಸುದೀಪ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕಲರ್ಸ್‌ ಕನ್ನಡ ವಾಹಿನಿಯು ತನ್ನ ಪ್ರೋಮೋ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಹನುಮಂತ ಇನ್ನುಳಿದ ಸ್ಪರ್ಧಿಗಳಿಗೆ ಖಡಕ್‌ ಆಗಿ ಟಾಂಗ್‌ ನೀಡಿದ್ದಾರೆ. ಈ ವಿಡಿಯೋದಲ್ಲಿ ಮೊದಲು ಕಾಣಿಸಿಕೊಳ್ಳುವ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಟಾಸ್ಕ್‌ ಜೊತೆಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ. ʼಒಬ್ಬ ವ್ಯಕ್ತಿ ನನ್ನ ಜರ್ನಿಗೆ ಅಡಚಣೆಯಾಗಿದ್ದಾರೆ..? ಅವರು ಯಾರಾಗಿರಬಹುದು..?ʼ ಅಂತಾ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಸ್ಪರ್ಧಿಗಳು ತಮಗೆ ಅಡಚಣೆಯಾಗಿರುವ ವ್ಯಕ್ತಿಗಳ ಮುಖಕ್ಕೆ ಕೆಂಪು ಬಣ್ಣವನ್ನು ಎರಚುತ್ತಾರೆ. ಬಳಿಕ ಅದಕ್ಕೆ ಏನು ಕಾರಣ ಅನ್ನೋದನ್ನ ಉತ್ತರಿಸುತ್ತಾರೆ. 

ಇದನ್ನೂ ಓದಿ: ಚೈತ್ರಾ ಕುಂದಾಪುರ ಎಲಿಮಿನೇಟ್‌ ಬೆನ್ನಲ್ಲೇ... ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ವಿಜೇತರ ಹೆಸರು ವಿಕಿಪೀಡಿಯಾದಲ್ಲಿ ರಿವೀಲ್‌: ತ್ರಿವಿಕ್ರಮ್‌ 2ನೇ ಸ್ಥಾನ... ಇವರಿಗೆ ವಿನ್ನರ್‌ ಪಟ್ಟ

ಈ ಪೈಕಿ ಭವ್ಯಾ ಗೌಡ ಅವರು ಮೊದಲು ತ್ರಿವಿಕ್ರಮ್‌ಗೆ ಕೆಂಪು ಬಣ್ಣವನ್ನು ಎರಚುತ್ತಾರೆ. ಇದಕ್ಕೆ ಕಾರಣವನ್ನು ವಿವರಿಸುವ ಅವರು, ʼತ್ರಿವಿಕ್ರಮ್‌ ಬಳಸುವ ಸ್ಟ್ರ್ಯಾಟಜಿ ಆಗಲಿ, ಮಾತನಾಡುವ ರೀತಿ ಆಗಲಿ, ಅದು ಎಲ್ಲೋ ನನ್ನ ಆಟಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅವರು ಮುಂದಕ್ಕೆ ಹೋಗುತ್ತಿದ್ದಾರೆ ಅಂತಾ ಅನಿಸುತ್ತಿದೆʼ ಎಂದು ಹೇಳುತ್ತಾರೆ. ಭವ್ಯಾಗೌಡರ ಆರೋಪಕ್ಕೆ ತಿರುಗೇಟು ನೀಡುವ ತ್ರಿವಿಕ್ರಮ್‌, ʼಮಾರಿಹಣ್ಣ ಶುರುವಾಗಿದೆ ಅಣ್ಣ, ಅದರ ಬಣ್ಣ ಕಾಣಿಸುತ್ತಿದೆʼ ಎಂದು ಹೇಳುತ್ತಾರೆ. ಬಹುತೇಕ ಸ್ಪರ್ಧಿಗಳು ಫೈನಲ್‌ ತಲುಪಿರುವ ಹನುಮಂತನ ಹೆಸರನ್ನು ತೆಗೆದುಕೊಳ್ಳುತ್ತಾರೆ. ಈ ಪೈಕಿ ಗೌತಮಿ ಜಾಧವ್‌, ʼಗೆಲುವು ಅಂತಾ ನೋಡಿದಾಗ ಹನುಮಂತ ಅಡ್ಡಿಯಾಗಿದ್ದಾನೆʼ ಅಂತಾ ಅನಿಸುತ್ತಿದೆ ಎಂದು ಹೇಳುತ್ತಾರೆ. 

ಚೈತ್ರಾ ಕುಂದಾಪುರ ಮಾತನಾಡಿ, ʼವೈಲ್ಡ್‌ ಕಾರ್ಡ್‌ ಎಂಟ್ರಿಯಲ್ಲಿ ಬಂದು, ಆಗಾಗ ಸ್ವೀಚ್‌ ಆಫ್‌ ಆಗ್ತಾನೆ ಅಂತಾ ಹೇಳಿ, ಇಡೀ ಮನೆಯನ್ನೇ ಸ್ವೀಚ್‌ ಆಫ್‌ ಮಾಡ್ತಾ ಇದ್ದಾರೆʼ ಅಂತಾ ಹೇಳುತ್ತಾರೆ. ತ್ರಿವಿಕ್ರಮ್‌ ಮಾತನಾಡಿ, ʼಹನುಮಂತ ಎಲ್ಲರಿಗೂ ಹಲ್ವಾ ತಿನ್ನಿಸುತ್ತಿದ್ದಾನೆʼ ಅಂತಾ ಹೇಳುತ್ತಾರೆ. ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹನುಮಂತ, ʼಸರ್..‌ ನಾನು ಆಟ ಶುರು ಮಾಡಿ ಬಹಳ ದಿನ ಆಯ್ತು.. ಇವರಿಗೆ ಇವತ್ತು ಗೊತ್ತಾಗಿದೆ ಸರ್...‌ʼ ಅಂತಾ ಹೇಳುತ್ತಾನೆ. ಹನುಮಂತನ ಉತ್ತರವನ್ನು ಕೇಳಿ ಕಿಚ್ಚ ಸುದೀಪ್‌ ಅವರು ಗಹಗಹಿಸಿ ನಗುತ್ತಾರೆ. ಈ ರೀತಿ ಹನುಮಂತ ದೊಡ್ಮನೆ ಮಂದಿಗೆ ಸರಿಯಾಗಿ ಟಕ್ಕರ್‌ ನೀಡಿದ್ದಾನೆ...

ಇದನ್ನೂ ಓದಿ: IAS ಆಗುವ ಕನಸು ಕಂಡಿದ್ದ ಈಕೆ ಇಂದು ಇಂಡಸ್ಟ್ರೀಯನ್ನೇ ಆಳುತ್ತಿರುವ ಸ್ಟಾರ್‌ ನಟಿ! ಯಾರು ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News