Mahendra Mannooth: ನಟರು ಸಾಮಾನ್ಯವಾಗಿ ಒಂದು ವಿಭಿನ್ನ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಅವ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿರಬೇಕೆಂದು ಅವ್ಯಾಸ ರೂಢಿಸಿಕೊಳ್ಳುತ್ತಾರೆ. ಸಮಾಜಕ್ಕಾಗಿ ಏನನ್ನಾದರು ಮಾಡಬೇಕು ಅಂದುಕೊಳ್ಳುವವರಲ್ಲಿ ನಟ, ನಿರ್ಮಾಪಕ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ಕೂಡ ಒಬ್ಬರು. ಮುನ್ನೋತ್ ಅವರಿಗೆ ಗೋವುಗಳ ಮೇಲೆ ಅಪಾರ ಪ್ರೀತಿ. ಪ್ರತಿ ವರ್ಷವೂ ಮುನ್ನೋತ್ ಅವರ ಕುಟುಂಬ ಗೋಶಾಲೆಗಳ ಉಳಿವಿಗಾಗಿ ತಾವು ದುಡಿದ ಅರ್ಧದಷ್ಟು ಹಣವನ್ನು ಗೋಶಾಲೆಗಳಿಗೆ ದೇಣಿಗೆಯಾಗಿ ನೀಡುತ್ತಾರೆ. ಈ ಮೂಲಕ ಇವರ ಕುಟುಂಬ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.
ಮುನ್ನೊತ್ ಅವರಿಗೆ ಗೋವುಗಳೆಂದರೆ ಅಪಾರ ಪ್ರೀತಿ, ಗೋಶಾಲೆಗಳ ಉಳಿವಿಗಾಗಿ ಮುನ್ನೊತ್ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಹಾಗಂತ ನಟ ಒಬ್ಬರೇ ಈ ಕಾರ್ಯದಲ್ಲಿ ಭಾಗಿಯಾಗಿಲ್ಲಿ ಜೊತೆಗೆ ಅವರ ಕುಟುಂಬ ಕೂಡ ಅವರ ಈ ಕಾರ್ಯಕ್ಕೆ ಸಾಥ್ ಕೊಡುತ್ತಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಗೋಶಾಲೆಗಳಿಗೆ ವಾರ್ಷಿಕವಾಗಿ ಲಕ್ಷಗಟ್ಟಲೆ ದೇಣಿಗೆ ನೀಡುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಮುನ್ನೊತ್ 51 ಲಕ್ಷ ರೂ. ಗಳನ್ನು ಕರ್ನಾಟಕದಲ್ಲಿನ ವಿವಿಧ ಗೋ ಶಾಲೆಗಳಿಗೆ ದೇಣಿಗೆ ನೀಡಿದ್ದಾರೆ. ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ ಹಸುಗಳನ್ನು ಗೋಶಲೆಯ ಆಶ್ರಯಕ್ಕೆ ಕೊಡಲಾಗುತ್ತದೆ, ಇಂತಹ ಹಸುಗಳನ್ನು ನೋಡಿಕೊಳ್ಳುವುದಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಇಂತಹ ಗೋವುಗಳ ಸುರಕ್ಷತೆ ಹಾಗೂ ಆಶ್ರಯಕ್ಕಾಗಿ ಮುನ್ನೋತ್ ಕುಟುಂಬ ತಮ್ಮ ಪೋಷಕರ ಹೆಸರಿನಲ್ಲಿ ತಮ್ಮ ಕೈಯಲ್ಲಾದ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?
ಇತ್ತೀಚೆಗೆ ದಿನ್ನೆಪಾಳ್ಯದ ಕನಕಪುರ ರಸ್ತೆಯಲ್ಲಿರುವ ಅಮೃತಧಾರಾ ಗೋಶಾಲೆಗೆ ಕುಟುಂಬ ಸಮೇತ ಬಂದಿದ್ದ ಮುನ್ನೊತ್ ಇಪ್ಪತ್ತಕ್ಕೂ ಹೆಚ್ಚು ಗೋಶಾಲೆ ಮುಖ್ಯಸ್ಥರನ್ನು ಆಹ್ವಾನಿಸಿ ಅವರಿಗೆ ಚೆಕ್ ರೂಪದಲ್ಲಿ ಆರ್ಥಿಕ ನೆರವು ನೀಡಿದರು.
ಮಹೇಂದ್ರ ಅವರು ತಮ್ಮ ಪತ್ನಿ ಸುರಕ್ಷಾ ಮತ್ತು ಅವರ ಇಡೀ ಕುಟುಂಬದೊಂದಿಗೆ ಮರವನ್ನು ನೆಟ್ಟು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶೇಷ ಗೋಪೂಜೆ ಕಾರ್ಯಕ್ರಮ ನಡೆಸಿದರು.
ಇದೇ ಸಂದರ್ಭದಲ್ಲಿ ಮಹೇಂದ್ರ ಮನ್ನೂತ್ ಮಾತನಾಡಿ, ನಮ್ಮ ತಂದೆ-ತಾಯಿಯ ಋಣ ತೀರಿಸುವುದು ಅಸಾಧ್ಯವಾದರೂ, ಜೀವನದುದ್ದಕ್ಕೂ ಪಂಚಾಮೃತವನ್ನು ನೀಡುವ ಗೋವಿನ ಋಣವನ್ನು ನಾವು ಖಂಡಿತವಾಗಿಯೂ ತೀರಿಸಬಹುದು, ಗೋವು ನಮ್ಮ ಸನಾತನ ಪರಂಪರೆಯ ದೈವಿಕ ಸಂಕೇತ ಮಾತ್ರವಲ್ಲ.ಗೋವು ಭಾರತೀಯ ಕೃಷಿ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬ ಭಾರತೀಯರು ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಸಂದೇಶ ಸಾರಿದ್ದಾರೆ.
ತಮ್ಮ ಕ್ರಿಯೆಗಳ ಮೂಲಕ, ಮನ್ನೂತ್ ಕುಟುಂಬವು ಭಾರತದಲ್ಲಿ ಗೋಸಂರಕ್ಷಣೆಯ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಉದಾಹರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ