ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದರೇ ಅಮಿತಾಬ್ ಬಚ್ಚನ್ !ಲೈವ್ ಕಾರ್ಯಕ್ರಮದಲ್ಲಿಯೇ ಸೊಸೆ ಐಶ್ವರ್ಯಾ ಬಗ್ಗೆ ಹೀಗಂದ್ದಿದ್ಯಾಕೆ ?

ಅಮಿತಾಬ್ ಬಚ್ಚನ್ ಇಲ್ಲಿ ನೀಡಿರುವ ಉತ್ತರವೇ ಸಂಚಲ ಮೂಡಿಸಿದೆ. ಅಮಿತಾಬ್ ಬಚ್ಚನ್ ನೀಡಿದ ಉತ್ತರ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.

Written by - Ranjitha R K | Last Updated : Feb 5, 2025, 11:53 AM IST
  • ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅಮಿತಾಬ್
  • ಐಶ್ವರ್ಯಾ ಬಗ್ಗೆ ಸ್ಪರ್ಧಿಯಿಂದಲೇ ಮಾತು
  • ಅಮಿತಾಬ್ ಬಚ್ಚನ್ ನೀಡಿದ ಉತ್ತರ ಕೆಲವೇ ಕ್ಷಣಗಳಲ್ಲಿ ವೈರಲ್
ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದರೇ ಅಮಿತಾಬ್ ಬಚ್ಚನ್ !ಲೈವ್ ಕಾರ್ಯಕ್ರಮದಲ್ಲಿಯೇ ಸೊಸೆ ಐಶ್ವರ್ಯಾ ಬಗ್ಗೆ ಹೀಗಂದ್ದಿದ್ಯಾಕೆ ? title=

ಮುಂಬಯಿ : ಬಾಲಿವುಡ್ ನಟಿ ಐಶ್ವರ್ಯಾ ರೈ 1994ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದು,  ವಿಶ್ವದ ಅತ್ಯಂತ ಸುಂದರ ಮಹಿಳೆ ಎನ್ನುವ ಪಟ್ಟವನ್ನು ಅಲಂಕರಿಸಿದವರು. 2007 ರಲ್ಲಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.  2011 ರಲ್ಲಿ ಆರಾಧ್ಯ ಜನನದ ಮೂಲಕ ತಾಯಿಯಾದರು. ಈ ಪರಿವಾರ ಎಲ್ಲರಿಗೂ ಆದರ್ಶ ಎನ್ನುತ್ತಿರುವಾಗಲೇ ಎಲ್ಲವೂ ಸರಿಯಿಲ್ಲ ಎನ್ನುವ ಗಾಳಿ ಬೀಸತೊಡಗಿತು. ಹೌದು, ಐಶ್ವರ್ಯ ಅಭಿಷೇಕ್ ವಿಚ್ಛೇದನ ಎನ್ನುವ ಸುದ್ದಿ ಸುಂಟರಗಾಳಿಯಂತೆ ಹರಿದಾಡಿತ್ತು. 

ಇದೀಗ ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ, ಸ್ಪರ್ಧಿಯೊಬ್ಬರು ಐಶ್ವರ್ಯಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಮಿತಾಬ್ ಬಚ್ಚನ್ ಇಲ್ಲಿ ನೀಡಿರುವ ಉತ್ತರವೇ ಸಂಚಲ ಮೂಡಿಸಿದೆ. ಅಮಿತಾಬ್ ಬಚ್ಚನ್ ನೀಡಿದ ಉತ್ತರ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಪ್ರಪಂಚದಲ್ಲೇ ಅತಿ ಮೋಹಕ ನಟಿ ಈಕೆ.. ಕೊಹ್ಲಿ, ರೋಹಿತ್‌ ಜೊತೆ ಡೇಟಿಂಗ್‌ ವದಂತಿ.. ಮದುವೆಯಾಗಿ ಒಂದೇ ವರ್ಷಕ್ಕೆ ವಿಚ್ಛೇದನ ಪಡೆದು ಸನ್ಯಾಸಿಯಾದ ಚೆಲುವೆ!!

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಸ್ಪರ್ಧಿ ಪ್ರನುಷಾ ಥಾಮ್ಕೆ, ಐಶ್ವರ್ಯಾ ರೈ ಬಚ್ಚನ್ ತುಂಬಾ ಸುಂದರವಾಗಿದ್ದಾರೆ ಎಂದು ಅಮಿತಾಬ್ ಬಾಲಿ ಹೇಳಿದ್ದಾರೆ. ಇದಕ್ಕೆ ಮುಗುಳ್ನಗುತ್ತಾ, ಪ್ರತಿಕ್ರಿಯಿಸಿದ ಬಿಗ್ ಬಿ, 'ಹೌದು, ನಮಗೆ ಗೊತ್ತು'ಎಂದರು.ಇದಾದ ನಂತರ ಮಾತು ಮುಂದುವರೆಸಿದ ಪ್ರನುಷಾ, ಐಶ್ವರ್ಯಾ ಸೌಂದರ್ಯವನ್ನು ಹೊಗಳಲು ಪದಗಳೇ ಸಾಲದು. ನೀವು ಅವರ ಜೊತೆಯೇ  ವಾಸಿಸುತ್ತೀರಿ, ಸೌಂದರ್ಯದ ಬಗ್ಗೆ ಸಲಹೆ ನೀಡಿ ಎಂದು ಕೇಳಿದ್ದಾರೆ.  
 
ಇದಕ್ಕೆ ಉತ್ತರಿಸಿದ ಅಮಿತಾಬ್ ಬಚ್ಚನ್, ಕೆಲವು ವರ್ಷಗಳಲ್ಲಿ ಮುಖದ ಸೌಂದರ್ಯ ಕಡಿಮೆಯಾಗುತ್ತದೆ, ಆದರೆ ಹೃದಯದ ಸೌಂದರ್ಯ ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ. ಸೌಂದರ್ಯದ ಬಗ್ಗೆ ಅಮಿತಾಬ್ ನೀಡಿದ ಈ ಉತ್ತರ  ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು. ಇದೀಗ ಬಿಗ್ ಬಿ ಹೇಳಿಕೆ ಸಾಮಾಜಿಕ ಮಧ್ಯಮ ತುಂಬಾ ಸದ್ದು ಮಾಡುತ್ತಿದೆ. 

ಇದನ್ನೂ ಓದಿ : ಪ್ರಪಂಚದಲ್ಲೇ ಅತಿ ಮೋಹಕ ನಟಿ ಈಕೆ.. ಕೊಹ್ಲಿ, ರೋಹಿತ್‌ ಜೊತೆ ಡೇಟಿಂಗ್‌ ವದಂತಿ.. ಮದುವೆಯಾಗಿ ಒಂದೇ ವರ್ಷಕ್ಕೆ ವಿಚ್ಛೇದನ ಪಡೆದು ಸನ್ಯಾಸಿಯಾದ ಚೆಲುವೆ!!

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆಯಾಗಿ 18 ವರ್ಷಗಳಾಗಿವೆ. ಆದರೆ ಕೆಲವೊಮ್ಮೆ, ಅವರ ಸಂಬಂಧದಲ್ಲಿ ಬಿರುಕು ಮತ್ತು ವಿಚ್ಛೇದನದ ವದಂತಿಗಳು ಹರಡುತ್ತಲೇ ಇರುತ್ತವೆ. ಆದರೆ ಬಚ್ಚನ್ ಕುಟುಂಬವು ಆಗಾಗ ಈ ವದಂತಿಗಳಿಗೆ ಪರೋಕ್ಷವಾಗಿ ಸೂಕ್ತ ಉತ್ತರವನ್ನು ನೀಡುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮಗಳಿಂದ ದೂರವಿಡುವಲ್ಲಿ ಆದ್ಯತೆ ನೀಡುತ್ತದೆ. 
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News