Rakhi Sawant: ರಾಖಿ ಸಾವಂತ್ ಇದುವರೆಗೆ ಎರಡು ಬಾರಿ ಮದುವೆಯಾಗಿದ್ದಾರೆ ಆದರೆ ಅವರ ಎರಡೂ ಮದುವೆಗಳು ನೋವಿನಿಂದ ಮುರಿದುಬಿದ್ದವು. ಸದ್ಯ ರಾಖಿ ಸಾವಂತ್ ಮೂರನೇ ಮದುವೆಯ ಸುದ್ದಿ ಹೊರಬೀಳುತ್ತಿದೆ. ಸದ್ಯದಲ್ಲೇ ಮೂರನೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಈ ಬಾರಿ ರಾಖಿ ಸಾವಂತ್ ಮದುವೆಯಾಗುವುದು ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ. ರಾಖಿ ತನ್ನ ಇತ್ತೀಚಿನ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಉತ್ತಮ ಮದುವೆ ಪ್ರಸ್ತಾಪಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡುವಾಗ, ರಾಖಿ ಸಾವಂತ್ ತಾನು ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. "ನನಗೆ ಪಾಕಿಸ್ತಾನದಿಂದ ಹಲವು ಮದುವೆ ಪ್ರಸ್ತಾವನೆಗಳು ಬರುತ್ತಿವೆ. ಹೀಗಾಗಿ ನಾನು ಖಂಡಿತವಾಗಿಯೂ ಪಾಕಿಸ್ತಾನದಲ್ಲಿ ಮದುವೆಯಾಗಲು ಯೋಚಿಸುತ್ತೇನೆ. ಅನೇಕ ಪಾಕಿಸ್ತಾನಿ ಮತ್ತು ಭಾರತೀಯ ಜೋಡಿಗಳು ಮದುವೆಯಾಗಿ ಅಮೆರಿಕ ಮತ್ತು ದುಬೈನಲ್ಲಿ ನೆಲೆಸಿದ್ದು, ಉತ್ತಮ ಜೀವನ ನಡೆಸುತ್ತಿದ್ದಾರೆ" ಎಂದು ರಾಖಿ ಹೇಳಿದ್ದಾರೆ.
ಅಲ್ಲದೇ "ಈ ರೀತಿಯ ವಿವಾಹವು ಎರಡು ದೇಶಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಭಾರತೀಯರು ಮತ್ತು ಪಾಕಿಸ್ತಾನಿಗಳು ಪರಸ್ಪರ ಒಪ್ಪಿಗೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾನು ಪಾಕಿಸ್ತಾನಿ ಜನರನ್ನು ಇಷ್ಟಪಡುತ್ತೇನೆ ಮತ್ತು ನನಗೆ ಅಲ್ಲಿ ಅಭಿಮಾನಿಗಳೂ ಇದ್ದಾರೆ. ನಾನು ಪಾಕಿಸ್ತಾನದ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತೇನೆ" ಎಂದಿದ್ದಾರೆ..
ತನ್ನ ಪ್ರೇಮಿ ದೋಡಿ ಖಾನ್ ಬಗ್ಗೆ ಮಾತನಾಡಿ.."ಅವನು ನಟ ಮತ್ತು ಪೊಲೀಸ್ ಅಧಿಕಾರಿ. ಮದುವೆ ಪಾಕಿಸ್ತಾನದಲ್ಲಿ ನಡೆಯಲಿದೆ. ಆರತಕ್ಷತೆ ಭಾರತದಲ್ಲಿ ಇರುತ್ತದೆ ಮತ್ತು ನಮ್ಮ ಹನಿಮೂನ್ಗಾಗಿ ನಾವು ಸ್ವಿಟ್ಜರ್ಲೆಂಡ್ ಅಥವಾ ನೆದರ್ಲ್ಯಾಂಡ್ಗೆ ಹೋಗುತ್ತೇವೆ. ನಾವು ದುಬೈನಲ್ಲಿ ನೆಲೆಸುತ್ತೇವೆ." ಎಂದು ನಟಿ ಹೇಳಿದ್ದಾರೆ..
ಮಾಹಿತಿ ಪ್ರಕಾರ, ರಾಖಿ ಸಾವಂತ್ ಈ ಹಿಂದೆ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ.. ಆದರೆ ಎರಡೂ ಮದುವೆಗೂ ಆಕೆಗೆ ದುಃಖವನ್ನೇ ತಂದಿವೆ ಎಂದು ಹೇಳಲಾಗಿದೆ.. ರಾಖಿಯ ಮೊದಲ ಮದುವೆ ರಿತೇಶ್ ಸಿಂಗ್ ಜೊತೆ. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ... ಇದಾದ ನಂತರ, ರಾಖಿ ಸಾವಂತ್ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ನಂತರ ರಾಖಿ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದಿಲ್ ತನ್ನನ್ನು ಥಳಿಸಿ ಹಣವನ್ನೂ ತೆಗೆದುಕೊಳ್ಳುತ್ತಿದ್ದ ಎಂದು ರಾಖಿ ಹೇಳಿದ್ದಾರೆ. ರಾಖಿ ಆದಿಲ್ನನ್ನು ಜೈಲಿಗೆ ಕಳುಹಿಸಿದರು. ಸದ್ಯ ಆದಿಲ್ ಸೋಮಿ ಖಾನ್ ಅವರನ್ನು ವಿವಾಹವಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.