ಐಷಾರಾಮಿ ಕಾರು ಮಾರಿಸಿ ಕೊಡುವುದಾಗಿ ಪಡೆದು ವಂಚನೆ: ಖತರ್ನಾಕ್ ಕಿಲಾಡಿಯ ಬಂಧನ

Crime News : ಐಷಾರಾಮಿ ಕಾರುಗಳನ್ನ ಮಾರಾಟ ಮಾಡಿಸಿ ಕೊಡುವುದಾಗಿ ಪಡೆದು ಕಾರು ಮಾಲೀಕರಿಗೆ ವಂಚಿಸುತ್ತಿದ್ದ ಆರೋಪಿಯನ್ನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೈಯದ್  ಜಿಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. 

Written by - VISHWANATH HARIHARA | Edited by - Zee Kannada News Desk | Last Updated : Dec 26, 2022, 08:09 PM IST
  • ಐಷಾರಾಮಿ ಕಾರು ಮಾರಿಸಿ ಕೊಡುವುದಾಗಿ ಪಡೆದು ವಂಚನೆ
  • ಕಾರು ಮಾಲೀಕರಿಗೆ ವಂಚಿಸುತ್ತಿದ್ದ ಆರೋಪಿ
  • ಸೈಯದ್ ಜಿಮ್ರಾನ್ ಬಂಧಿತ ಆರೋಪಿ
ಐಷಾರಾಮಿ ಕಾರು ಮಾರಿಸಿ ಕೊಡುವುದಾಗಿ ಪಡೆದು ವಂಚನೆ: ಖತರ್ನಾಕ್ ಕಿಲಾಡಿಯ ಬಂಧನ   title=

ಬೆಂಗಳೂರು : ಐಷಾರಾಮಿ ಕಾರುಗಳನ್ನ ಮಾರಾಟ ಮಾಡಿಸಿ ಕೊಡುವುದಾಗಿ ಪಡೆದು ಕಾರು ಮಾಲೀಕರಿಗೆ ವಂಚಿಸುತ್ತಿದ್ದ ಆರೋಪಿಯನ್ನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೈಯದ್  ಜಿಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. ಈತ ಉದ್ಯಮಿಗಳು, ವ್ಯಾಪಾರಿಗಳನ್ನ ಪರಿಚಯ ಮಾಡಿಕೊಂಡು ಮಾರಾಟಕ್ಕಿಟ್ಟಿರುವ ಐಷಾರಾಮಿ ಕಾರುಗಳನ್ನ ಮುಂಗಡ ಹಣ ನೀಡಿ  ಪಡೆಯುತ್ತಿದ್ದ. ನಂತರ ಮಾಲೀಕರಿಗೆ ಗೊತ್ತಿಲ್ಲದಂತೆ ಕಾರುಗಳನ್ನು ಅನ್ಯ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡಿ ಹಣ ನೀಡದೇ ವಂಚಿಸುತ್ತಿದ್ದ.

ಇದನ್ನೂ ಓದಿ : ಸರ್ ಕೊಲೆ ಮಾಡ್ತಾರೆ ಬದುಕಿಸಿ: ಪೊಲೀಸರಿಗೆ ಗೋಗರೆದು ಶರಣಾದ ರೌಡಿ ಶೀಟರ್ ಸ್ಟಾರ್ ನವೀನ್

ಹೀಗೆಯೇ ಉದ್ಯಮಿ ರಾಜು ಎಂಬುವವರ ರೇಂಜ್ ರೋವರ್ ಕಾರನ್ನ 18 ಲಕ್ಷಕ್ಕೆ ಖರೀದಿಸಿದ್ದ ಈತ  ನಂತರ ಉಳಿದ ಹಣ ನೀಡದೆ ಸತಾಯಿಸುತ್ತಿದ್ದ. ಹಣ ನೀಡುವಂತೆ  ರಾಜು ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ. ಇದರಿಂದ ನೊಂದ ರಾಜು  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆಗಿರುವ ಮೋಸದ ಬಗ್ಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆರೋಪಿ ಸೈಯ್ಯದ್ ಜಿಬ್ರಾನ್ ನನ್ನ ಬಂಧಿಸಿದ್ದಾರೆ. 

ಸದ್ಯ ವಿಚಾರಣೆ ವೇಳೆ ಆರೋಪಿಯಿಂದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತನಿಂದ  ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಆಸ್ಟಿನ್ ಮಾರ್ಟಿನ್ ಹಾಗೂ ಇನೋವಾ ಸೇರಿದಂತೆ 10 ಕೋಟಿ ಮೌಲ್ಯದ 9 ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಪೊಲೀಸರು ಸಹ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇಂತಹ ವ್ಯಕ್ತಿಗಳ ಬಗ್ಗೆ ತಿಳಿದು ಸಾರ್ವಜನಿಕರು ವ್ಯವಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ವಿಪಕ್ಷದ ಆಮಿಷಕ್ಕೆ ಬಲಿಯಾಗಿ ಡಿ.ಕೆಂಪಣ್ಣರಿಂದ ಸರ್ಕಾರದ ವಿರುದ್ಧ ವಿನಾಕಾರಣ ಆರೋಪ: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News