12ನೇ ತರಗತಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಯುಜಿಸಿ ಭರ್ಜರಿ ಉಡುಗೊರೆ ನೀಡಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈಗ ತಮ್ಮ ಆಯ್ಕೆಯ ಯಾವುದೇ ಯುಜಿ ಕೋರ್ಸ್ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಯಾವುದೇ ವಿಜ್ಞಾನ ಸಂಬಂಧಿತ ಕೋರ್ಸ್ಗೆ ಪ್ರವೇಶ ಪಡೆಯುವ ಮೂಲಕ ಪದವಿಯನ್ನು ಪಡೆಯಬಹುದು.
ಈ ಷರತ್ತನ್ನು ಪೂರೈಸಬೇಕು :
ಇದಕ್ಕಾಗಿ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರವೇಶ ಪರೀಕ್ಷೆ ಅಥವಾ ನಿಗದಿತ ಕೋರ್ಸ್ಗಳಿಗಾಗಿ ಆ ವಿಶ್ವವಿದ್ಯಾಲಯ ನಡೆಸವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳು 12ನೇ ಅಥವಾ ಪಿಯುಸಿಯಲ್ಲಿ ತೆಗೆದುಕೊಂಡ ವಿಷಯವನ್ನು ಹೊರತುಪಡಿಸಿ ಬೇರೆ ಯಾವ ವಿಷಯವನ್ನಾದರೂ ಆರಿಸಿಕೊಂಡು ಸ್ನಾತಕೋತ್ತರ ಪದವಿ ಪಡೆಯಬಹುದು.
ಇದನ್ನೂ ಓದಿ : KSRP Constable Recruitment 2024: ಪೊಲೀಸ್ ಇಲಾಖೆಯ 2400 KSRP ಕಾನ್ಸ್ಟೇಬಲ್ ನೇಮಕಕ್ಕೆ ಸರ್ಕಾರ ಆದೇಶ
ಯುಜಿಸಿ ನಿರ್ಧಾರ :
ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಶಿಫಾರಸ್ಸಿನ ಅಡಿಯಲ್ಲಿ ಅಧ್ಯಯನಗಳನ್ನು ಹೊಂದಿಕೊಳ್ಳುವಂತೆ ಮಾಡುವ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳ ಕರಡನ್ನು ಸಿದ್ಧಪಡಿಸಿದೆ. ಇಲ್ಲಿಯವರೆಗೆ, ಸೈನ್ಸ್ ಸ್ಟ್ರೀಮ್ನಿಂದ ಉತ್ತೀರ್ಣರಾದ ವಿದ್ಯಾರ್ಥಿಗಳು ಪದವಿ ಮಟ್ಟದಲ್ಲಿ ಕಲೆ ಅಥವಾ ವಾಣಿಜ್ಯ ಸ್ಟ್ರೀಮ್ನ ಯಾವುದೇ ಕೋರ್ಸ್ಗೆ ಪ್ರವೇಶ ತೆಗೆದುಕೊಳ್ಳಬಹುದಿತ್ತು. ಆದರೆ ಕಲಾ ವಿದ್ಯಾರ್ಥಿಗಳು ಯುಜಿ ವಾಣಿಜ್ಯ ಅಥವಾ ವಿಜ್ಞಾನ ಸ್ಟ್ರೀಮ್ಗೆ ಪ್ರವೇಶ ಪಡೆಯಲು ಅರ್ಹರಾಗಿರಲಿಲ್ಲ.
ಆರ್ಟ್ಸ್ ಸ್ಟ್ರೀಮ್ನ ವಿದ್ಯಾರ್ಥಿಗಳೂ ಮಾಡಬಹುದು ಬಿಟೆಕ್ :
ಈಗ ಆರ್ಟ್ಸ್ ಸ್ಟ್ರೀಮ್ನಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಬಿಎಸ್ಸಿ ಅಥವಾ ಬಿಟೆಕ್ನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಮುಂತಾದ ವಿಷಯಗಳೊಂದಿಗೆ ನಾಲ್ಕು ವರ್ಷಗಳ ಬಿಎಸ್ಸಿ ಹಾನರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಈಗ ಎಂಟೆಕ್-ಎಂಇ ಮಾಡಬಹುದು.ಇದುವರೆಗೆ ಬಿ.ಟೆಕ್-ಬಿಇ ಮಾಡುತ್ತಿರುವವರಿಗೆ ಮಾತ್ರ ಎಂಟೆಕ್-ಎಂಇಗೆ ಪ್ರವೇಶ ನೀಡಲಾಗುತ್ತಿತ್ತು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಯುಜಿಸಿ ಚೇರ್ಮನ್ ಪ್ರೊ.ಎಂ.ಜಗದೀಶ್ ಕುಮಾರ್ ಪ್ರಕಾರ, ಕಾಲೇಜುಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಂದರೆ ಜುಲೈ-ಆಗಸ್ಟ್ ನಲ್ಲಿ ಮತ್ತು ಎರಡನೇ ಸೆಶನ್ ಗೆ ಜನವರಿ-ಫೆಬ್ರವರಿಯಲ್ಲಿ ಪ್ರವೇಶ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.