Protest Against Electricity Bill Increase: ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏಕಾಏಕಿ ವಿದ್ಯುತ್ ಬಿಲ್ ದುಪ್ಪಟ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಕಾಳಮ್ಮ ಬೀದಿ ಅಂಗಡಿ ಮಾಲೀಕರ ವೇದಿಕೆ ವತಿಯಿಂದ ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.. ಈ ಕುರಿತು ಒಂದು ವರದಿ ಇಲ್ಲಿದೆ.....!
ಹೌದು... ರಾಜ್ಯದಲ್ಲಿ ಎರಡನೇ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಮಗೆ ಸಂತೋಷದ ವಿಷಯವಾಗಿದೆ. ಆದರೆ ತಾವುಗಳು ಕೊಟ್ಟ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ಬಡ ಮಧ್ಯಮ ವರ್ಗದ ಜನರಿಗೆ ಸಂತೋಷ ತಂದಿದೆ. ಆದರೆ ಇದ್ದಕ್ಕಿದ್ದಂತೆ ಜೂನ್ ತಿಂಗಳಲ್ಲಿ ವಿದ್ಯುತ್ ಬಿಲ್ ತಾರಕ್ಕೇರಿರುವುದು ಬಹಳ ಆಶ್ಚರ್ಯ ಹಾಗೂ ಗಾಭರಿ ಆಗುವಂಥಹ ವಿಷಯವಾಗಿದೆ ಎಂದು ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ- ಬಸ್ ಗೆ ನಮಸ್ಕರಿಸಿ ಪ್ರಯಾಣ ಬೆಳಸಿದ ಅಜ್ಜಿ..! ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವೆಂದ ಸಿಎಂ ಸಿದ್ದರಾಮಯ್ಯ
ಬಳ್ಳಾರಿ ನಗರದ ಎಲ್ಲಾ ಅಂಗಡಿಗಳು ಮತ್ತು ಮನೆಗಳ ಮಾಲೀಕರು ಹಾಗೂ ಬಾಡಿಗೆದಾರರಿಗೆ ವಿದ್ಯುತ್ ಬಿಲ್ ಏರಿಕೆ ನೋವುಂಟು ಮಾಡಿದೆ. ಇದಕ್ಕೂ ಮುಂಚೆ ವಿದ್ಯುತ್ ಬಿಲ್‌ನಲ್ಲಿ ಫ್ಲ್ಯಾಟ್ ಸಿಸ್ಟಮ್ ಇರುತ್ತಿತ್ತು, ಈಗ ಆ ಫ್ಲ್ಯಾಟ್ ಇಲ್ಲದೇ ಕಮರ್ಷಿಯಲ್‌ಗೆ ರೂ. 8.50 ಮತ್ತು ಗೃಹಕ್ಕೆ ರೂ. 7.00 ಹಾಗೂ ಫ್ಯುಯಲ್ ಅಡ್ಜಸ್ಟ್‌ಮೆಂಟ್ ಚಾರ್ಜೆಸ್ ಇದಕ್ಕೂ ಮುಂಚೆ 0.50 ಪೈಸೆ ಇತ್ತು. ಈಗ ಏಕಾಏಕಿ ರೂ. 2.64 ಪೈಸೆ ಹೆಚ್ಚಳ ಮಾಡಿರುವುದು ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡರು. ಈ ವೇಳೆ ಬಳ್ಳಾರಿ ನಗರದ ಕಾಳಮ್ಮ ಬೀದಿಯ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಬೀದಿಗಿಳಿದ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಏರಿಕೆ ಮಾಡಿರುವ ವಿದ್ಯುತ್ ಬಿಲ್'ನ್ನು ಕಡಿಮೆ ಮಾಡದೆ ಹೋದರೆ ನಾವು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ- ಕಂಡಕ್ಟರ್ ರೂಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ..!
ಒಟ್ಟಾರೆಯಾಗಿ ವಿದ್ಯುತ್ ದರ ಏಕಾಏಕಿ ಹೆಚ್ಚಳವಾಗಿದ್ದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಭರಿಸುವುದು ಬಹಳ ಕಷ್ಟಕರವಾಗಿದೆ. ಸರ್ಕಾರ ಖುದ್ದು ಮುತವರ್ಜಿ ವಹಿಸಿ ಏರಿಕೆಯಾಗಿರುವ ಕಮರ್ಷಿಯಲ್ ಮತ್ತು ಗೃಹ ಬಿಲ್ಲನ್ನು ತಕ್ಷಣವೇ ಹಳೇ ಧರಕ್ಕೆ ಇಳಿಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ