Success Story: ಒಂದು ಕಾಲದಲ್ಲಿ ಟೇಲರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ.. ಇಂದು 15000 ಕೋಟಿಯ ಒಡೆಯ!

ಒಬ್ಬ ಸಾಮಾನ್ಯ ಟೇಲರ್‌ ಅಂಗಡಿಯವನ ಮಗ 15000 ಕೋಟಿಯ ಒಡೆಯ ಆಗಿದ್ದೇ ರೋಚಕ. ತನ್ನ ತಂದೆಗೆ ಸಹಾಯ ಮಾಡಿಕೊಂಡು ಇದ್ದ ರಜಾಕ್‌ ಇರ್ಫಾನ್‌ ಇಂದು ದೇಶದ ಶ್ರೀಮಂತ ಉದ್ಯಮಿ.   

Written by - Chetana Devarmani | Last Updated : Dec 3, 2024, 05:38 PM IST
  • ಇರ್ಫಾನ್‌ ರಜಾಕ್‌ ಅವರ ಯಶಸ್ಸಿನ ಕಥೆ
  • ಪ್ರೆಸ್ಟೀಜ್‌ ಎ‌ಸ್ಟೇಟ್ಸ್‌ ಪ್ರಾಜೆಕ್ಟ್
  • ಬೆಂಗಳೂರಿನ ಪ್ರೆಸ್ಟೀಜ್‌ ಕಂಪನಿಯ ಮಾಹಿತಿ
Success Story: ಒಂದು ಕಾಲದಲ್ಲಿ ಟೇಲರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ.. ಇಂದು 15000 ಕೋಟಿಯ ಒಡೆಯ!  title=

ಬೆಂಗಳೂರು: ಒಬ್ಬ ಸಾಮಾನ್ಯ ಟೇಲರ್‌ ಅಂಗಡಿಯವನ ಮಗ 15000 ಕೋಟಿಯ ಒಡೆಯ ಆಗಿದ್ದೇ ರೋಚಕ. ತನ್ನ ತಂದೆಗೆ ಸಹಾಯ ಮಾಡಿಕೊಂಡು ಇದ್ದ ರಜಾಕ್‌ ಇರ್ಫಾನ್‌ ಇಂದು ದೇಶದ ಶ್ರೀಮಂತ ಉದ್ಯಮಿ. 

ನಾವು ಇಂದು ನಮ್ಮ ದೇಶದ  ಪ್ರತಿಷ್ಠಿತ ರಿಯಲ್ ಎಸ್ಟೇಟ್‌ ಕಂಪನಿಗಳಲ್ಲಿ ಒಂದಾದ ಪ್ರೆಸ್ಟೀಜ್‌ ಎ‌ಸ್ಟೇಟ್ಸ್‌ ಪ್ರಾಜೆಕ್ಟ್ ಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಇರ್ಫಾನ್‌ ರಜಾಕ್‌ ಬಗ್ಗೆ 
ಮಾತನಾಡುತ್ತಿದ್ದೇವೆ.  

ರಿಯಲ್‌ ಎಸ್ಟೇಟ್‌ ಕ್ಷೇತ್ರದ ಬಹುದೊಡ್ಡ ಹೆಸರು ಇರ್ಫಾನ್‌ ರಜಾಕ್‌. ಇವರು ಮೊದಲು ಕುಟುಂಬದ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು. ಇಂದು ಭಾರತದ ಟಾಪ್‌ ಬಿಲ್ಡರ್‌ ಹಾಗೂ ಡೆವಲಪರ್ಸ್‌ಗಳಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. ಪ್ರೆಸ್ಟೀಜ್‌ ಗ್ರೂಪ್‌ ಮೂಲಕ ಹೆಸರಾಂತ ಉದ್ಯಮಿಯಾಗಿದ್ದಾರೆ. ಫೋರ್ಬ್ಸ್‌ ಪ್ರಕಾರ, ಇರ್ಫಾನ್‌ ರಜಾಕ್ ಸುಮಾರು 15,000 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಉದ್ಯಮಿ.

ಇದನ್ನೂ ಓದಿ: ಮುಖೇಶ್ ಮತ್ತು ಅನಿಲ್ ಅಂಬಾನಿ ಇಬ್ಬರೂ ಕೋಟಿಗಳ ಒಡೆಯರೇ! ಇಬ್ಬರ ಪೈಕಿ ತಾಯಿಯನ್ನು ತನ್ನೊಂದಿಗೆ ಇರಿಸಿಕೊಂಡ ನಿಜವಾದ ಸಿರಿವಂತ ಯಾರು ?

ಇರ್ಫಾನ್‌ ರಜಾಕ್ ಅವರಿಗೆ ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟರ್ಡ್ ಸರ್ವೇಯರ್ಸ್ (FRICS) ಫೆಲೋಶಿಪ್ ಗೌರವ, ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಪ್ರಶಸ್ತಿ, ರಿಯಲ್ ಎಸ್ಟೇಟ್ ಪ್ರೊಫೆಷನಲ್ ಕನ್ಸ್ಟ್ರಕ್ಷನ್ ಸೋರ್ಸ್ ಇಂಡಿಯಾದಿಂದ ಕಮರ್ಷಿಯಲ್ ಮಾಸ್ಟರ್ ಬಿಲ್ಡರ್ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಇರ್ಫಾನ್‌ ರಜಾಕ್‌ ಅವರ ಯಶಸ್ಸಿನ ಕಥೆ ಸಾಕಷ್ಟು ಕೂತೂಹಲಕಾರಿ ಆಗಿದೆ. ಅವರು ಅಂದು ಒಂದು ಸಣ್ಣ ಅಂಗಡಿಯಲ್ಲಿ ಕೆಲಸವನ್ನು ಆರಂಭಿಸಿ ಇಂದು ಭಾರತದ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗುರುತಿಸಿಕೊಳುವಂತೆ ಬೆಳೆದಿದ್ದಾರೆ. 

ವ್ಯಾಪಾರ ಕುಟುಂಬದಲ್ಲಿ ಜನಿಸಿದ ಇರ್ಫಾನ್‌ ರಜಾಕ್‌ ಅವರ ತಂದೆ ರಝಾಕ್‌ ಸತ್ತಾರ್ ಅವರು 1950 ರ ದಶಕದಲ್ಲಿ ಬೆಂಗಳೂರಿನ ಸಣ್ಣ ಬಟ್ಟೆ ಮತ್ತು ಟೇಲರಿಂಗ್‌ ಅಂಗಡಿಯನ್ನು ನಡೆಸುತ್ತಿದ್ದರು. ಇರ್ಫಾನ್‌ ಅವರು ಕೂಡ ತನ್ನ ತಂದೆಗೆ ಸಹಾಯ ಮಾಡುತ್ತಿದ್ದರು, ನಂತರ ಅವರ ತಂದೆ ಪ್ರೆಸ್ಟೇಜ್‌  ಗ್ರೂಪ್‌ ಸ್ಥಾಪಿಸಿದರು. 

ಆ ಸಂಸ್ಥೆಯು ನಿಧಾನವಾಗಿ ಸೀಮಿತ ವ್ಯಾಪ್ತಿಯಲ್ಲಿ ನಡೆಯುತ್ತಿತ್ತು. ಆದರೆ ರಜಾಕ್‌ ತಂದೆಯ ಸಾಮ್ರಾಜ್ಯವನ್ನು ಮತ್ತಷ್ಟೂ ವಿಸ್ತರಿಸಿದರು. ಪ್ರೆಸ್ಟೀಜ್‌ ಪ್ರಾಜೆಕ್ಟ್ ಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ದರು. ಅಷ್ಟೇ ಅಲ್ಲ ತನ್ನ ಸಂಸ್ಥೆಯನ್ನು ಮಾರುಕಟ್ಟೆಯಲ್ಲಿ ಪ್ರಮುಖ ಕಂನಿಯಾನ್ನಾಗಿ ಮಾಡಿದ್ದಾರೆ.ಪ್ರಸ್ತುತ ವಸತಿ,ವಾಣಿಜ್ಯ ,ಚಿಲ್ಲರೆ ಮತ್ತು ಆತಿಥ್ಯ ಸೇರಿದಂತೆ ವಿವಿಧ ವಲಯಗಳಲ್ಲಿ 54 ಯೋಜನೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News