ಮ್ಯೂಚಲ್‌ ಫಂಡ್‌ಗಳಲ್ಲಿ ಪ್ರತಿತಿಂಗಳು 5-10 ಸಾವಿರವನ್ನ 5-10 ವರ್ಷ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ಸ್‌ ಸಿಗುತ್ತೆ?

Mutual funds investment SIP calculator: ಪ್ರತಿದಿನವೂ ಷೇರು ಮಾರುಕಟ್ಟೆ ಕುಸಿತದಿಂದ ಕೈಸುಟ್ಟುಕೊಳ್ಳುತ್ತಿರುವ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಕರಡಿ ಕುಣಿತದ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ಅನೇಕ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಮ್ಯೂಚುವಲ್‌ ಫಂಡ್‌ಗಳಲ್ಲಿ SIP ಮಾಡಲು ಮುಂದಾಗುತ್ತಿದ್ದಾರೆ.

Written by - Puttaraj K Alur | Last Updated : Feb 18, 2025, 05:58 PM IST
  • ಷೇರು ಮಾರುಕಟ್ಟೆ ನಿರಂತರ ಕುಸಿತದಿಂದ ಕಂಗಾಲಾಗಿರುವ ಹೂಡಿಕೆದಾರರು
  • ಷೇರುಗಳ ಬದಲಿಗೆ ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿರುವ ಜನರು
  • ಪ್ರತಿ ತಿಂಗಳು ನೀವು 10 ಸಾವಿರ SIP ಮಾಡಿದ್ರೆ ಎಷ್ಟು ಹಣ ಸಿಗುತ್ತದೆ ಗೊತ್ತಾ?
ಮ್ಯೂಚಲ್‌ ಫಂಡ್‌ಗಳಲ್ಲಿ ಪ್ರತಿತಿಂಗಳು 5-10 ಸಾವಿರವನ್ನ 5-10 ವರ್ಷ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ಸ್‌ ಸಿಗುತ್ತೆ?  title=
SIP ಹೂಡಿಕೆಯಲ್ಲಿ ಅಪಾರ ಲಾಭ!

Mutual funds investment: ಭಾರತೀಯ ಷೇರು ಮಾರುಕಟ್ಟೆಯು ನಿರಂತರವಾಗಿ ಕುಸಿತ ಕಾಣುತ್ತಿದೆ. ಇದರ ಪರಿಣಾಮ ಹೂಡಿಕೆದಾರರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಪ್ರತಿಯೊಬ್ಬ ಹೂಡಿಕೆದಾರರ ಪೋರ್ಟ್‌ಫೋಲಿಯೋ ಶೇ.30-50ರಷ್ಟು ಕುಸಿತ ಕಂಡಿದೆ. ಲಕ್ಷದಿಂದ ಹಿಡಿದು ಕೋಟಿಗಟ್ಟಲೇ ಷೇರುಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ದಿಕ್ಕು ತೋಚದಂತಾಗಿದೆ. ಪ್ರತಿದಿನವೂ ಮಾರುಕಟ್ಟೆ ಕುಸಿತ ಕಾಣುತ್ತಿರುವ ಕಾರಣ ಹೂಡಿಕೆದಾರರ Blood Pleasure ಸಹ ಏರಿಳಿತವಾಗುತ್ತಿದೆ. 

ಆಲ್‌ ಟೈಮ್‌ ಹೈನಿಂದ NSEಯ ಸೂಚ್ಯಂಕ ನಿಫ್ಟಿ50 ಬರೋಬ್ಬರಿ 3,284 ಪಾಯಿಂಟ್ಸ್‌ಗಳಷ್ಟು ಕುಸಿದರೆ, BSE ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 9,886 ಪಾಯಿಂಟ್ಸ್‌ಗಳಷ್ಟು ಕುಸಿತ ಕಂಡಿದೆ. ಪ್ರತಿದಿನವೂ ಷೇರು ಮಾರುಕಟ್ಟೆ ಕುಸಿತದಿಂದ ಕೈಸುಟ್ಟುಕೊಳ್ಳುತ್ತಿರುವ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಕರಡಿ ಕುಣಿತದ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ಅನೇಕ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಮ್ಯೂಚುವಲ್‌ ಫಂಡ್‌ಗಳಲ್ಲಿ SIP ಮಾಡಲು ಮುಂದಾಗುತ್ತಿದ್ದಾರೆ. ಇದೀಗ ಮಾರುಕಟ್ಟೆ ಕುಸಿತ ಕಂಡಿದ್ದು ಅತ್ಯುತ್ತಮ ರಿಟರ್ನ್ಸ್‌ ನೀಡುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಭರ್ಜರಿ ಲಾಭ ಗಳಿಸಬಹುದು. 

ಇದನ್ನೂ ಓದಿ: ಆಪಲ್‌ನ ಮೊದಲ ಫೋಲ್ಡೇಬಲ್ ಐಫೋನ್ ರಿಲೀಸ್ ಡೇಟ್ ಅನೌನ್ಸ್! ।

ಇದೀಗ ಹೂಡಿಕೆದಾರರಿಗೆ ಕಾಡುವ ಪ್ರಶ್ನೆ ಅಂದರೆ, ʼನಾವು ಪ್ರತಿ ತಿಂಗಳು ಹತ್ತು ಸಾವಿರ ರೂ.ವನ್ನು 5-10 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ಸ್‌ ಬರುತ್ತದೆ ಅನ್ನೋದು. ಈ ಪ್ರಶ್ನೆಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. SIP ಕ್ಯಾಲ್ಕುಲೇಟರ್ ಪ್ರಕಾರ, ನೀವು ಪ್ರತಿ ತಿಂಗಳು ಒಂದಷ್ಟು ಹಣ ಉಳಿತಾಯ ಮಾಡಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ರೆ ಅತ್ಯುತ್ತಮ ರಿಟರ್ನ್ಸ್‌ ಗ್ಯಾರಂಟಿ ಎಂದು ಹೇಳುತ್ತದೆ. ಹೀಗಾಗಿ ನಿಮಗಾಗಿ ಇಂದು ನಾವು ಉಪಯುಕ್ತ ಮಾಹಿತಿ ನೀಡಲಿದ್ದೇವೆ. ಇಲ್ಲಿ 5-10 ಅಥವಾ 20 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ ಎಷ್ಟು ಲಾಭ ಸಿಗುತ್ತದೆ ಅನ್ನೋದರ ಮಾಹಿತಿ ನೀಡಲಾಗಿದೆ ನೋಡಿ.

ಎಷ್ಟು ವರ್ಷ? ಹೂಡಿಕೆ ಮೊತ್ತ ಎಷ್ಟು ಪರ್ಸೆಂಟ್‌ ರಿಟರ್ನ್ಸ್ ಸಿಗುವ ಒಟ್ಟು ರಿಟರ್ನ್ಸ್
5 ವರ್ಷ 5,000 12%

₹4,12,432

10 ವರ್ಷ 5,000 15% ₹13,93,286
15 ವರ್ಷ 5,000 20% ₹56,71,475
20 ವರ್ಷ 5,000 25% ₹3,42,95,476
25 ವರ್ಷ 5,000 30% ₹33,77,92,493

 

ಎಷ್ಟು ವರ್ಷ? ಹೂಡಿಕೆ ಮೊತ್ತ ಎಷ್ಟು ಪರ್ಸೆಂಟ್‌ ರಿಟರ್ನ್ಸ್ ಸಿಗುವ ಒಟ್ಟು ರಿಟರ್ನ್ಸ್
5 ವರ್ಷ 10,000 12% ₹ 8,24,864
10 ವರ್ಷ 10,000 15% ₹27,86,573
15 ವರ್ಷ 10,000 20% ₹1,13,42,949
20 ವರ್ಷ 10,000 25% ₹6,85,90,952
25 ವರ್ಷ 10,000 30% ₹67,55,84,985

ಇದನ್ನೂ ಓದಿ: ದೇಶದ ರೈತರಿಗೆ ದೊಡ್ಡ ಗಿಫ್ಟ್‌ ನೀಡಿದ ಪ್ರಧಾನಿ ಮೋದಿ ಸರ್ಕಾರ; ಮುಂದಿನ ಹಣಕಾಸು ವರ್ಷದವರೆಗೆ ಈ ಯೋಜನೆ ವಿಸ್ತರಣೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News