ಈ ರೀತಿ ಅರ್ಜಿ ಸಲ್ಲಿಸಿದರೆ ಸುಲಭವಾಗಿ ಕೈ ಸೇರುತ್ತದೆ ಪಾಸ್ ಪೋರ್ಟ್

ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.  ಪಾಸ್ ಪೋರ್ಟ್ ಪಡೆಯುವ ಸುಲಭ ವಿಧಾನದ ಬಗ್ಗೆ ನಾವಿಲ್ಲಿ ಮೈತಿ ನೀಡುತ್ತಿದ್ದೇವೆ. ಹಂತ ಹಂತವಾಗಿ ಹೇಳಲಿದ್ದೇವೆ.

Written by - Ranjitha R K | Last Updated : Dec 2, 2022, 12:08 PM IST
  • ವಿದೇಶ ಪ್ರವಾಸ ಮಾಡಬೇಕಾದರೆ ಅತಿ ಮುಖ್ಯವಾಗಿ ನಿಮ್ಮ ಬಳಿ ಪಾಸ್ ಪೋರ್ಟ್ ಇರಬೇಕು.
  • ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಬೆಳೆಸುವುದು ಸಾಧ್ಯವಿಲ್ಲ.
  • ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ರೀತಿ ಅರ್ಜಿ ಸಲ್ಲಿಸಿದರೆ ಸುಲಭವಾಗಿ ಕೈ ಸೇರುತ್ತದೆ ಪಾಸ್ ಪೋರ್ಟ್  title=
Passport online application process

ಬೆಂಗಳೂರು : ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರಯಾಣ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ವಿದೇಶ ಪ್ರವಾಸ ಮಾಡಬೇಕಾದರೆ ಅತಿ ಮುಖ್ಯವಾಗಿ ನಿಮ್ಮ ಬಳಿ ಪಾಸ್ ಪೋರ್ಟ್ ಇರಬೇಕು. ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಬೆಳೆಸುವುದು ಸಾಧ್ಯವಿಲ್ಲ. ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಇನ್ನು ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್‌ ಅಗತ್ಯವಾಗಿರುತ್ತದೆ. ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಹೊಸ ಪಾಸ್‌ಪೋರ್ಟ್‌ ಗಾಗಿ ಪ್ರತಿ ನಿತ್ಯ ಸಾವಿರಾರು ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಪಾಸ್ ಪೋರ್ಟ್ ಪಡೆಯುವ ಸುಲಭ ವಿಧಾನದ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. 

ಪಾಸ್‌ಪೋರ್ಟ್‌ ಗಾಗಿ ಆನ್‌ಲೈನ್‌ನಲ್ಲಿ  ಅರ್ಜಿ ಸಲ್ಲಿಕೆ : 
ಪಾಸ್‌ಪೋರ್ಟ್ ಪಡೆಯಬೇಕಾದರೆ ಆನ್‌ಲೈನ್‌ನಲ್ಲಿ ಸಹ ಅರ್ಜಿ ಸಲ್ಲಿಸಬಹುದು. ಭಾರತೀಯ ಪ್ರಜೆಯಾಗಿದ್ದು, ಭಾರತದ ಪಾಸ್‌ಪೋರ್ಟ್ ಪಡೆಯಲು ಬಯಸುವುದಾದರೆ, ಈ ಕೆಳಗಿನ ಪ್ರಕ್ರಿಯೆಯ ಅಡಿಯಲ್ಲಿ ಆನ್‌ಲೈನ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : Gold Price Today : ಗಗನ ಮುಖಿಯಾಯಿತು ಚಿನ್ನ ಬೆಳ್ಳಿ.! ಖರೀದಿ ಬಲು ಕಷ್ಟ

ಈ ಹಂತಗಳನ್ನು ಅನುಸರಿಸಿ : 
- ಮೊದಲಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿ. 
-ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ ಲಾಗಿನ್ ಮಾಡಿ.
-"Apply for Background Verification for GEP ಲಿಂಕ್ ಅನ್ನು ಕ್ಲಿಕ್ ಮಾಡಿ.
-ಅರ್ಜಿಯಲ್ಲಿ ಕೋರಿದ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ. 
- ಇದರ ನಂತರ, Pay and Schedule Appointment" ಲಿಂಕ್ ಅನ್ನು ಕ್ಲಿಕ್ ಮಾಡಿ.
- ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಬಯಸುವ ಸ್ಥಳವನ್ನು ಆಯ್ಕೆಮಾಡಿ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರು ಡಿಎ ಮುಂದಿನ ವರ್ಷ ಹೆಚ್ಚಳ : ಸಂಬಳ ಎಷ್ಟು ಹೆಚ್ಚಾಗುತ್ತದೆ?

- ಅಪಾಯಿಂಟ್‌ಮೆಂಟ್ ಬುಕಿಂಗ್‌ಗಾಗಿ ಆನ್‌ಲೈನ್ ಪಾವತಿ ಮಾಡಿ.
- "Print Application Receipt" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ. 
- ಮೊಬೈಲ್ ನಲ್ಲಿ ಕೂಡಾ ಅಪಾಯಿಂಟ್ ಮೆಂಟ್ ಮೆಸೇಜ್ ಬರುತ್ತದೆ. ಆ ಮೆಸೇಜ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.
-ಈಗ ನಿಮ್ಮ ಮೂಲ ದಾಖಲೆಗಳೊಂದಿಗೆ ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಿದ ಸ್ಥಳದ ಪಾಸ್‌ಪೋರ್ಟ್ ಸೇವಾ ಕೇಂದ್ರ  / ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಗುರುತನ್ನು ಪರಿಶೀಲಿಸಲಾಗುತ್ತದೆ.
-ಇದಾದ ಬಳಿಕ ಪೊಲೀಸ್ ವೆರಿಫಿಕೇಶನ್ ನಡೆಯಲಿದ್ದು, ಅಲ್ಲಿ ಎಲ್ಲವೂ ಸರಿಯಾಗಿದ್ದರೆ ಕೆಲವೇ ದಿನಗಳಲ್ಲಿ ಪಾಸ್ ಪೋರ್ಟ್ ನಿಮ್ಮ ಮನೆಗೆ ಬರಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News