ಪ್ರಯಾಣಿಕರಿಗೆ ಆಟೋ ದರ ಏರಿಕೆ ಬಿಸಿ: ಪ್ರತಿ ಕಿಲೋ ಮೀಟರ್ ಗೆ 5 ರೂಪಾಯಿ ಹೆಚ್ಚಳ ಸಾಧ್ಯತೆ!

Auto Rickshaw Price Hike: ಪೆಟ್ರೋಲ್ ಮತ್ತು ಗ್ಯಾಸ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಏರಿಸಲು ಮುಂದಾಗಿವೆ. ಇಂದು ಆಟೋ ಚಾಲಕರ ಸಂಘದ ಸಭೆಯಿದ್ದು ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ.

Written by - Yashaswini V | Last Updated : Dec 23, 2024, 12:11 PM IST
  • ಮತ್ತೆ ಏರಿಕೆಯಾಗುತ್ತಾ ಆಟೋ ದರ..!?
  • ಪ್ರತಿ ಒಂದು ಕಿ.ಮೀಟರ್ ಗೆ 5 ರೂಪಾಯಿ ಏರಿಕೆ ಸಾಧ್ಯತೆ
  • ಹೊಸ ವರ್ಷಕ್ಕೆ ಆಟೋ ದರ ಏರಿಕೆ ಶಾಕ್ ತಟ್ಟುವ ಆತಂಕ
ಪ್ರಯಾಣಿಕರಿಗೆ ಆಟೋ ದರ ಏರಿಕೆ ಬಿಸಿ: ಪ್ರತಿ ಕಿಲೋ ಮೀಟರ್ ಗೆ 5 ರೂಪಾಯಿ ಹೆಚ್ಚಳ ಸಾಧ್ಯತೆ! title=

Auto Rickshaw Price Hike: ಪೆಟ್ರೋಲ್ ಮತ್ತು ಗ್ಯಾಸ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಏರಿಸಲು ಮುಂದಾಗಿವೆ. ಇಂದು ಆಟೋ ಚಾಲಕರ ಸಂಘದ ಸಭೆಯಿದ್ದು ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ. ಪರಿಣಾಮವಾಗಿ ಹೊಸ ವರ್ಷಕ್ಕೆ ಪ್ರಯಾಣಿಕರು ಆಟೋ ದರ ಏರಿಕೆಯ ಬಿಸಿಯನ್ನು ಅನುಭವಿಸಬೇಕಾದ ಸಂಭವ ಹೆಚ್ಚಾಗಿದೆ.

ಆಟೋ ಚಾಲಕರು ಪ್ರತಿ 1 ಕಿಲೋ ಮೀಟರ್ ದೂರಕ್ಕೆ 15 ರೂಪಾಯಿ ಮತ್ತು ಪ್ರತಿ 2 ಕಿಲೋ ಮೀಟರ್ ದೂರಕ್ಕೆ 30 ರೂಪಾಯಿ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿವೆ. 

ಇದನ್ನೂ ಓದಿ- Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...!

ಆಟೋ ಚಾಲಕರು ಪ್ರತಿ ಒಂದು ಕಿಲೋ ಮೀಟರ್ ದೂರಕ್ಕೆ 15 ರೂಪಾಯಿ ಮತ್ತು 2 ಕಿಲೋ ಮೀಟರ್ ದೂರಕ್ಕೆ 30 ರೂಪಾಯಿ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದರೂ ಗ್ರಾಹಕರ ದೃಷ್ಟಿಯಿಂದಲೂ ಸಭೆಯಲ್ಲಿ ಚರ್ಚೆಯಾಗಲಿದ್ದು ಪ್ರತಿ ಒಂದು ಕಿಲೋ ಮೀಟರ್ ಗೆ 5 ರೂಪಾಯಿ ಹೆಚ್ಚಳ ಆಗುವ ಸಾಧ್ಯತೆಗಳಿವೆ.

ಈ ನಡುವೆ ಓಲಾ, ಉಬರ್ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳಿಂದ ದರ ಏರಿಕೆಗೆ ವಿರೋಧ ವ್ಯಕ್ತವಾಗಿದ್ದು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಆಗುವ ತನಕ ಆಟೋ ದರ ಏರಿಕೆ ಮಾಡದಿರಲು ಕೆಲ ಆಟೋ ಸಂಘಟನೆಗಳ ನಿರ್ಧಾರ ಕೈಗೊಂಡಿವೆ. 

ಇದನ್ನೂ ಓದಿ- BPL Card: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್!

ಗಮನಾರ್ಹವಾಗಿ, ಇಂದು ಜಯನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಆಟೋ ಚಾಲಕರ ಸಂಘಟನೆಗಳ ಮಹತ್ವದ ಸಭೆ ನಡೆಯಬೇಕಿತ್ತು. ಈ ಸಭೆಯಲ್ಲಿ ಆಟೋ ದರ ಏರಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಂದು ಉಪ ಪೊಲೀಸ್ ಆಯುಕ್ತರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆಟೋ ದರ ಏರಿಕೆಯ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ ನಡೆಯಬೇಕಿದ್ದ ಸಭೆ ರದ್ದಾಗಿದೆ. ಹೀಗಾಗಿ ಸಭೆಯ ಮತ್ತೊಂದು ದಿನಾಂಕ ಶೀಘ್ರದಲ್ಲೇ ತಿಳಿಸುತ್ತೇವೆಂದು RTO ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News