ಪ್ಯಾರಸಿಟಮಾಲ್ ನಿಂದ ಮಹಿಳೆ ಸಾವು..! ನೀವೂ ಈ ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ..? ತಕ್ಷಣ ಈ ವಿಷಯ ತಿಳಿಯಿರಿ..

Paracetamol side effect : ಜನರು ತಲೆನೋವಿನಿಂದ ಹಿಡಿದು ಜ್ವರದವರೆಗೆ ಹೀಗೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಾಗಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬಳಸುತ್ತಾರೆ. ಆದರೆ ಪ್ರತಿದಿನ, ಪ್ರತಿಯೊಂದಕ್ಕೂ ಇದನ್ನು ಬಳಸುವುದು ಅಪಾಯಕಾರಿ ಅಂತ ಅವರಿಗೆ ಗೊತ್ತಿಲ್ಲ.. ಇತ್ತೀಚೆಗಷ್ಟೇ ಪ್ಯಾರಸಿಟಮಾಲ್ ಸೇವನೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾಳೆ.. ಅಸಲಿಗೆ ಏನಾಯ್ತು..? ಬನ್ನಿ ನೋಡೋಣ..

Written by - Krishna N K | Last Updated : Dec 29, 2024, 12:02 PM IST
    • ಜನ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಾಗಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬಳಸುತ್ತಾರೆ.
    • ಪ್ರತಿದಿನ, ಪ್ರತಿಯೊಂದಕ್ಕೂ ಇದನ್ನು ಬಳಸುವುದು ಅಪಾಯಕಾರಿ ಅಂತ ಅವರಿಗೆ ಗೊತ್ತಿಲ್ಲ.
    • ಇತ್ತೀಚೆಗಷ್ಟೇ ಪ್ಯಾರಸಿಟಮಾಲ್ ಸೇವನೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾಳೆ..
ಪ್ಯಾರಸಿಟಮಾಲ್ ನಿಂದ ಮಹಿಳೆ ಸಾವು..! ನೀವೂ ಈ ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ..? ತಕ್ಷಣ ಈ ವಿಷಯ ತಿಳಿಯಿರಿ.. title=

ಲಂಡನ್ : ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರು ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಬ್ರಿಟನ್‌ ನ ವಿಡ್ನೆಸ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಲಾರಾ ಹಿಗ್ಗಿಸನ್ (30) ಎಂದು ಗುರುತಿಸಲಾಗಿದೆ. 

ಲಾರಾ ಏಪ್ರಿಲ್ 5, 2017 ರಂದು 'ನ್ಯುಮೋನಿಯಾ' ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಹೋಗಿದ್ದರು. ಆಗ ಆಕೆಯ ತೂಕ ಕೇವಲ 40 ಕೆಜಿಗಿಂತ ಕಡಿಮೆ ಇತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಲಾರಾ ಅವರನ್ನು ಏಪ್ರಿಲ್ 7, 2017 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಇಂಟ್ರಾವೆನಸ್ ಟ್ಯೂಬ್ ಮೂಲಕ ಮೂರು ಬಾರಿ 1 ಗ್ರಾಂ ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿದರು. ಆದರೆ ಏಪ್ರಿಲ್ 6 ರಂದು ಡೋಸ್ ಹೆಚ್ಚಿಸಿದ ನಂತರ ತೀವ್ರ ಅಸ್ವಸ್ಥರಾದರು.

ಇದನ್ನೂ ಓದಿ:ಮಾರಣಾಂತಿಕ ಅಲರ್ಜಿಯನ್ನುಂಟು ಮಾಡುವ ಭೀತಿ... ಇನ್ಮುಂದೆ ʼLAYSʼ ಮಾರಾಟ ನಿಷೇಧ!?

ಏಪ್ರಿಲ್ 7 ರಂದು, ಪ್ರತಿವಿಷವನ್ನು ನೀಡಲಾಗಿದೆ ಎಂದು ವೈದ್ಯರು ಕಂಡುಕೊಂಡರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೊನೆಯದಾಗಿ ಏಪ್ರಿಲ್ 19 ರಂದು ನಿಧನರಾದರು. ಲಾರಾ ಅವರ ಸಾವಿಗೆ ಕಾರಣವೆಂದರೆ ಸೆಪ್ಸಿಸ್, ಸಿರೋಸಿಸ್ ಮತ್ತು ಪ್ಯಾಂಕ್ರಿಯಾಟೈಟಿಸ್‌ನೊಂದಿಗೆ ಅಂಗಾಂಗ ವೈಫಲ್ಯ ಎಂದು ತಿಳಿದುಬಂದಿದೆ. 

ಲಾರಾ ಚಿಕಿತ್ಸೆ ವೇಳೆ ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆಡಳಿತವು ಕಂಡುಹಿಡಿದಿದೆ. 19 ಏಪ್ರಿಲ್ 2017 ರಂದು ನಡೆದ ಈ ಘಟನೆಯ ವಿವರಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಲಾರಾ ಹಿಗ್ಗಿಸನ್ ಕೇವಲ 5 ಅಡಿ ಎತ್ತರ ಮತ್ತು ಕೇವಲ 40 ಕೆಜಿ ತೂಕವಿತ್ತು, ಇದನ್ನು ಗಣನೆಗೆ ತೆಗೆದುಕೊಳ್ಳದೆ 'ಪ್ಯಾರೆಸಿಟಮಾಲ್' ಮಿತಿಮೀರಿದ ಕಾರಣ ಆಕೆಯ ಸಾವಿಗೆ ಕಾರಣವಾಯಿತು ಎಂದು ವೈದ್ಯಕೀಯ ತಜ್ಞರು ನಂಬಿದ್ದಾರೆ.

ಇದನ್ನೂ ಓದಿ:ಗುಡ್‌ ನ್ಯೂಸ್‌..!! ಕೊನೆಗೂ ಮಾರಕ ಕ್ಯಾನ್ಸರ್‌ಗೆ ಬಂತು ಲಸಿಕೆ.. ಮುಂದಿನ ವರ್ಷ ಉಚಿತ ವಿರತಣೆ

ಪ್ಯಾರಸಿಟಮಾಲ್ ಅಪಾಯಕಾರಿಯೇ? : ಸಾಮಾನ್ಯವಾಗಿ ತಲೆನೋವು ಮತ್ತು ಜ್ವರಕ್ಕೆ ವೈದ್ಯರು ಪ್ಯಾರೆಸಿಟಮಾಲ್ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಆದರೆ ಇವುಗಳ ಅತಿಯಾದ ಅಥವಾ ದೀರ್ಘಾವಧಿಯ ಬಳಕೆಯು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಅಲ್ಲದೆ ಇದು ಥ್ರಂಬೋಸೈಟೋಪೆನಿಯಾ (ಕಡಿಮೆ ಪ್ಲೇಟ್ಲೆಟ್ ಎಣಿಕೆ), ಲ್ಯುಕೋಪೆನಿಯಾ (ಕಡಿಮೆ ಬಿಳಿ ರಕ್ತ ಕಣಗಳ ಎಣಿಕೆ) ನಂತಹ ರಕ್ತದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News