ನವದೆಹಲಿ: ಹಲವಾರು ವರ್ಷಗಳಿಂದ ಭೂಪ್ರದೇಶ ಹೊರತಾಗಿ ಇರುವ ಜೀವಿಗಳ ಅಸ್ತಿತ್ವ ಬಗ್ಗೆ ವೈಜ್ಞಾನಿಕ ವಲಯದಲ್ಲಿ ಈ ವಿಷಯ ನಿರಂತರವಾಗಿ ಚರ್ಚೆಯಲ್ಲಿದೆ. ಕೆಲವರು ಇದರ ಅಸ್ತಿತ್ವದ ಬಗ್ಗೆ ನಂಬಿಕೆ ಹೊಂದಿದ್ದರೆ ಇನ್ನು ಕೆಲವರು ಅದನ್ನು ತಿರಸ್ಕರಿಸುತ್ತಾರೆ.
ಈಗ ಈ ಹಾರುವ ತಟ್ಟೆಗಳ ವಿಷಯದ ಬಗ್ಗೆ ಮತ್ತೆ ಜೀವ ಬಂದಿದೆ. ಈ ಹಿಂದೆ ಬಹುತೇಕರಿಗೆ ಈ ವಿಷಯದ ಕುರಿತಾಗಿ ಎದ್ದಿದ್ದ ಚರ್ಚೆಗೆ ಧೃಡವಾದ ಸಾಕ್ಷಿಯ ಕೊರತೆ ಇತ್ತು. ಆದರೆ ಈಗ ಇತ್ತೀಚೆಗಿನ ವರದಿಯ ಪ್ರಕಾರ ಗೂಗಲ್ ನಕ್ಷೆ ಮತ್ತು ಗೂಗಲ್ ಅರ್ಥ್ ನ ಫೋಟೋಗಳಲ್ಲಿ ಈ ಹಾರುವ ತಟ್ಟೆಗಳ ವಿಷಯ ಹರಿದಾಡುತ್ತಿದೆ.ಅಲ್ಲದೆ ಇದು ಹಲವು ಸಂಶಯಗಳಿಗೂ ಕೂಡಾ ಎಡೆ ಮಾಡಿಕೊಟ್ಟಿದೆ. ಈ ರೀತಿಯ ಚಿತ್ರಗಳು ಹೆಚ್ಚಾಗಿ ಆಷ್ಟ್ರೇಲಿಯಾ 30°30'38.44"S 115°22'56.03"E.ಭಾಗದಲ್ಲಿ ತ್ರಿಕೋಣ ರೀತಿಯ ಹೊಳೆಯುವ ವಸ್ತುಗಳು ಕಂಡು ಬಂದಿವೆ.
ಈ ರೀತಿಯ ತ್ರಿಕೋಣ ಆಕಾರದ ವಸ್ತು ಮೊದಲ ಬಾರಿಗೆ 2007ರಲ್ಲಿ ಕಂಡು ಬಂದಿತ್ತು ಎಂದು ಇದರ ಉತ್ಸುಕರು ತಿಳಿಸಿದ್ದಾರೆ.ಬಹುತೇಕರು ಇದನ್ನು ಭೂ ಪ್ರದೇಶದ ಮೇಲೆ ಹಾರುತ್ತಿರುವ 'ಹಾರುವ ತಟ್ಟೆಯ ತ್ರಿಕೋಣ' ವೆಂದೆ ಭಾವಿಸಿದ್ದಾರೆ.ಆದರೆ ಇದನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದಾಗ ಇದು ಎಲಿಯನ್ ಗೆ ಯಾವುದೇ ರೀತಿಯ ಸಾಮ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.
2011ರಲ್ಲಿ ನಾಸಾದ ಹಳೆಯ ವಿಡಿಯೋವೊಂದರಲ್ಲಿ ಬಿಳಿಯ ಆಕಾರದ ವಸ್ತುವೊಂದು ನಾಸಾದ ಕ್ರಾಫ್ಟ್ ಹತ್ತಿರ ಹಾರಾಡುತ್ತಿರುವ ದೃಶ್ಯ ಅದರಲ್ಲಿ ಸೆರೆಯಾಗಿತ್ತು,ಕೆಲವರು ಇದನ್ನು ಎಲಿಯನ್ ಕ್ರಾಫ್ಟ್ ಎಂದು ಸಹ ಹೇಳಿದ್ದ ಸಂಗತಿ ಬಹಳ ಸುದ್ದಿ ಮಾಡಿತ್ತು. ಈಗ ಅದೇ ವಿಡಿಯೋವನ್ನು ಮರುಪರಿಷ್ಕರಿಸಿ 'ಯುಎಫ್ಓ ಟುಡೇ' ಎನ್ನುವ ಚಾನಲ್ ನಲ್ಲಿ ಇದನ್ನು ಅಪ್ಲೋಡ್ ಮಾಡಲಾಗಿದೆ.ಇದಕ್ಕೆ ಅದು 'ಯುಎಫ್ಓ ಪ್ಹೆನೋಮೇನಾ' ಎಂದು ಕರೆಯಲಾಗಿದೆ.