China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌

ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ

Written by - Zee Kannada News Desk | Last Updated : Apr 6, 2022, 03:53 PM IST
  • ಚೀನಾದಲ್ಲಿ ಮತ್ತೆ ಕೊರೊನಾ ಹೆಚ್ಚಳ
  • ಶಾಂಘೈನಲ್ಲಿ ಸೂಪರ್​ಮಾರ್ಕೆಟ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಬಂದ್
  • ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆ
China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌  title=
China Corona

ನವದೆಹಲಿ: ಚೀನಾದಲ್ಲಿ (China)ಕೊರೊನಾ ಅಬ್ಬರ  ಮತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಈ ಹಿನ್ನೆಲೆ ಚೀನಾದಲ್ಲಿ ಲಾಕ್​ಡೌನ್ (Lockdown)ಘೋಷಿಸಲಾಗಿದ್ದು, ಸೂಪರ್‌ಮಾರ್ಕೆಟ್‌ಗಳನ್ನು ಸಹ ಮುಚ್ಚಲಾಗಿದೆ. ಸದ್ಯ ಲಾಕ್‌ಡೌನ್‌ ಪರಿಣಾಮವಾಗಿ ಚೀನಾದ ಪ್ರಮುಖ ಹಣಕಾಸು ಕೇಂದ್ರವಾದ ಶಾಂಘೈನಲ್ಲಿ (Shanghai) 26 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳು ಆಹಾರವನ್ನು ಸಂಗ್ರಹಿಸಲು ಪರದಾಡುತ್ತಿದ್ದಾರೆ. 

ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: Corona 4th Wave: ಶಾಂಘೈನಲ್ಲಿ ಕೊರೊನಾ 4ನೇ ಅಲೆಯ ಅಬ್ಬರ: 24 ಗಂಟೆಯಲ್ಲಿ 1,366 ಕೇಸ್‌ ದಾಖಲು

ಸೂಪರ್​ಮಾರ್ಕೆಟ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನೂ ಬಂದ್ ಮಾಡಿರುವುದರಿಂದ ಜನರು ತಮ್ಮ ಮನೆಗಳಿಗೆ ಆಹಾರ ಮತ್ತು ದಿನನಿತ್ಯದ ವಸ್ತುಗಳನ್ನು ಸಾಗಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ.  ಶಾಂಘೈ ನಗರದಲ್ಲಿನ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ 11,000 ರೈಡರ್‌ಗಳು ಪ್ರತಿದಿನ ಕೋವಿಡ್ ನೆಗೆಟಿವ್ ನ್ಯೂಕ್ಲಿಯಿಕ್ ಆಸಿಡ್ ಮತ್ತು ಆಂಟಿಜೆನ್ ಪರೀಕ್ಷೆಗಳನ್ನು ಮಾಡಿಸಿಕೊಂಡರೆ ಕೆಲಸಕ್ಕೆ ಹೋಗಬಹುದು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!

ಶಾಂಘೈನಲ್ಲಿ 16,766 ಹೊಸ ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ಚೀನಾದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News