ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ

 ಪ್ರತಿವರ್ಷ ಚೀನಾದಲ್ಲಿ ವೈಭವದಿಂದ ಆಚರಿಸಲಾಗುತ್ತಿದ್ದ ಕಾರ್ಮಿಕ ದಿನಾಚರಣೆ ಈ ಬಾರಿ ಕೊರೊನಾ ನಿರ್ಬಂಧದ ಹಿನ್ನಲೆಯಲ್ಲಿ ಸಪ್ಪೆಯಂತಾಗಿದೆ.

Written by - Zee Kannada News Desk | Last Updated : May 1, 2022, 04:36 PM IST
  • ಶಾಂಘೈನಲ್ಲಿ ಈಗ ಕೊರೊನಾ ಸಾವಿನ ಸಂಖ್ಯೆ 400 ಕ್ಕೆ ಏರಿದೆ, ಶನಿವಾರದಂದು 7,872 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.
  • ಇನ್ನೊಂದೆಡೆಗೆ ಕಳೆದ ಒಂಬತ್ತು ದಿನಗಳಲ್ಲಿ ಬೀಜಿಂಗ್ ನಲ್ಲಿಯೂ ಕೂಡ ಪ್ರಕರಣಗಳ ಸಂಖ್ಯೆ ತೀವ್ರಗೊಂಡಿವೆ.
 ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ  title=

ನವದೆಹಲಿ: ಪ್ರತಿವರ್ಷ ಚೀನಾದಲ್ಲಿ ವೈಭವದಿಂದ ಆಚರಿಸಲಾಗುತ್ತಿದ್ದ ಕಾರ್ಮಿಕ ದಿನಾಚರಣೆ ಈ ಬಾರಿ ಕೊರೊನಾ ನಿರ್ಬಂಧದ ಹಿನ್ನಲೆಯಲ್ಲಿ ಸಪ್ಪೆಯಂತಾಗಿದೆ.ಹೀಗಾಗಿ ಬೀಜಿಂಗ್ ನಲ್ಲಿರುವ ಬಹುತೇಕ ರೆಸ್ಟೋರೆಂಟ್ ಸ್ಥಗಿತಗೊಂಡಿದ್ದು, ಹೋಮ್ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನೊಂದೆಡೆಗೆ ಉದ್ಯಾನವನಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಶೇ 50 ರ ಸಾಮರ್ಥ್ಯದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತಿದೆ.

ಇದನ್ನೂ ಓದಿ: Shocking Video: ಎರಡು ಅಪಾಯಕಾರಿ ಹೆಬ್ಬಾವುಗಳನ್ನು ಭುಜದ ಮೇಲೆ ಹೊತ್ತು ಡಾನ್ಸ್ ಮಾಡಿದ ವ್ಯಕ್ತಿ, ಮುಂದೇನಾಯ್ತು?

ಸ್ಥಳೀಯ ಸರ್ಕಾರಗಳು ಗಡಿಯಾಚೆಗಿನ ಪ್ರಯಾಣಕ್ಕೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಈಗ ಬಹುತೇಕ ಜನರು ಮನೆಯಲ್ಲಿ ಉಳಿದುಕೊಂಡಿದ್ದಾರೆ.ಹೀಗಾಗಿ ಸಾರ್ವಜನಿಕ ಸಾರಿಗೆ ಬಹುತೇಕ ಸ್ಥಗಿತಗೊಂಡಂತಾಗಿದೆ.ಜಾಗತಿಕವಾಗಿ ಬಹುತೇಕ ದೇಶಗಳು ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಸಂದರ್ಭದಲ್ಲಿ ಚೀನಾ ದೇಶ ಮಾತ್ರ ಕಟ್ಟುನಿಟ್ಟಿನ ಕಾನೂನು ಜಾರಿಗೆ ಮುಂದಾಗಿದೆ."ಚೀನಾದ ಅತಿದೊಡ್ಡ ನಗರ ಶಾಂಘೈನ ಹೆಚ್ಚಿನ ಭಾಗದಲ್ಲಿ ಪ್ರಮುಖವಾಗಿ ಹಣಕಾಸು, ಉತ್ಪಾದನೆ ಮತ್ತು ಹಡಗು ಕೇಂದ್ರ ಲಾಕ್‌ಡೌನ್ ಆಗಿರುತ್ತದೆ, ಹೀಗಾಗಿ ಇದು ಜನ ಜೀವನಕ್ಕೆ ಅಡ್ಡಿಯುಂಟಾಗಿದೆ. ಇದರಿಂದ ದೇಶಿಯ ಆರ್ಥಿಕತೆಗೆ ತೀವ್ರತರನಾದ ಪೆಟ್ಟು ಬಿಳಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಟ್ವಿಟರ್ ನಂತರ ಕೋಕಾ-ಕೋಲಾ ಖರೀದಿಗೆ ಮುಂದಾದ ಎಲೋನ್ ಮಸ್ಕ್!

ಶಾಂಘೈನಲ್ಲಿ ಈಗ ಕೊರೊನಾ ಸಾವಿನ ಸಂಖ್ಯೆ 400 ಕ್ಕೆ ಏರಿದೆ, ಶನಿವಾರದಂದು 7,872 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.ಇನ್ನೊಂದೆಡೆಗೆ ಕಳೆದ ಒಂಬತ್ತು ದಿನಗಳಲ್ಲಿ ಬೀಜಿಂಗ್ ನಲ್ಲಿಯೂ ಕೂಡ ಪ್ರಕರಣಗಳ ಸಂಖ್ಯೆ ತೀವ್ರಗೊಂಡಿವೆ. ಹಾಗಾಗಿ ಈಗ ಕೊರೊನಾ ಪ್ರಸರಣವನ್ನು ತಡೆಯಲು ಶಾಂಘೈನಂತೆಯೇ ಅದು ನಿರ್ಬಂಧಗಳನ್ನು ಹೇರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News