"ಮಹಾಭಾರತ"ದಲ್ಲಿ ಪರೀಕ್ಷಿತು ರಾಜನಿಗೆ ಕಚ್ಚಿದ ಅಪರೂಪದ "ನಾಗರ ಹಾವು" ಪತ್ತೆ..! ವಿಸ್ಮಯಕಾರಿ ವಿಡಿಯೋ ವೈರಲ್‌

Takshak Nag video : ಮಹಾಭಾರತದಲ್ಲಿ ಪರೀಕ್ಷಿತು ರಾಜನಿಗೆ ಕಚ್ಚಿದ ಹಾವಿನ ಬಗ್ಗೆ ನಿಮಗೆ ಗೊತ್ತಾ..? ಆ ಹಾವಿನ ಹೆಸರು ತಕ್ಷಕ್ ನಾಗ್. ಇದೀಗ ಈ ಅಪರೂಪದ ಹಾವು ಜಾರ್ಖಂಡ್‌ನ ರಾಂಚಿಯಲ್ಲಿ ಕಾಣಿಸಿಕೊಂಡಿದೆ. ಸದ್ಯ ಈ ಹಾವಿನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.  

Written by - Krishna N K | Last Updated : Dec 4, 2024, 07:04 PM IST
    • ಜಾರ್ಖಂಡ್ ನಲ್ಲಿ ಅಪರೂಪದ ಹಾವು ಕಾಣಿಸಿಕೊಂಡಿದೆ.
    • ಮಹಾಭಾರತದಲ್ಲಿ ಉಲ್ಲೇಖಿಸಲಾದ ತಕ್ಷಕ ನಾಗ
    • ತಕ್ಷಕ ನಾಗ ಕಲಿಯುಗದಲ್ಲಿ ಪ್ರತ್ಯಕ್ಷವಾಗಿದ್ದು ಅಚ್ಚರಿ ಮೂಡಿಸಿದೆ.
"ಮಹಾಭಾರತ"ದಲ್ಲಿ ಪರೀಕ್ಷಿತು ರಾಜನಿಗೆ ಕಚ್ಚಿದ ಅಪರೂಪದ "ನಾಗರ ಹಾವು" ಪತ್ತೆ..! ವಿಸ್ಮಯಕಾರಿ ವಿಡಿಯೋ ವೈರಲ್‌ title=

Takshak Nag viral video : ಜಾರ್ಖಂಡ್ ನಲ್ಲಿ ಅಪರೂಪದ ಹಾವು ಕಾಣಿಸಿಕೊಂಡಿದೆ. ಮಹಾಭಾರತದಲ್ಲಿ ಉಲ್ಲೇಖಿಸಲಾದ ತಕ್ಷಕ ನಾಗ ಕಲಿಯುಗದಲ್ಲಿ ಪ್ರತ್ಯಕ್ಷವಾಗಿದ್ದು ಅಚ್ಚರಿ ಮೂಡಿಸಿದೆ. ರಾಂಚಿಯ ಸರ್ಕಾರಿ ಕಚೇರಿಯಲ್ಲಿ ಕಂಡು ಬಂದ ಈ ಹಾವನ್ನು ನೋಡಿ ಅಧಿಕಾರಿಗಳು ಭಯಗೊಂಡಿದ್ದಾರೆ. ಕೂಡಲೇ ಉರಗ ರಕ್ಷಕರಿಗೆ ಕರೆ ಮಾಡಿ ರಕ್ಷಿಸುವ ಕೆಲಸ ಮಾಡಲಾಗಿದೆ.

ಜಾರ್ಖಂಡ್‌ನಲ್ಲಿ ಇಂತಹ ಹಾವು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಉರಗ ರಕ್ಷಕ ತಿಳಿಸಿದ್ದಾರೆ. ಈ ಹಾವು ತುಂಬಾ ವಿಷಕಾರಿ ಎಂದು ತಿಳಿದು ಬಂದಿದೆ. ಸಧ್ಯ ರಕ್ಷಿಸಲ್ಪಟ್ಟ ಹಾವಿನ ವಯಸ್ಸು 12 ವರ್ಷ ಎಂದು ತಿಳಿದು ಬಂದಿದೆ. ತಕ್ಷಕ್‌ ನಾಗು ಕಾಣಿಸಿಕೊಂಡಿದ್ದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್‌ ಮಾಡ್ತೀನಿ.. "4" ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಹೇಳಿ.. ನೋಡೋಣ.. 

ಹಾವಿನ ದೇಹವು ಆಭರಣಗಳಂತೆ ಪ್ರಕಾಶಮಾನವಾಗಿ ಹೊಳೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಸಧ್ಯ ತಕ್ಷಕ್‌ ವಿಡಿಯೋ ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಅದೇ ಸಮಯಕ್ಕೆ ಈ ಅಪರೂಪದ ನಾಗನ ಚರಿತ್ರೆಯನ್ನು ತಿಳಿದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ..  

ದ್ವಾಪರ ಯುಗದ ಅಂತ್ಯದಲ್ಲಿ ಭಾರತವನ್ನು ಪರೀಕ್ಷಿತು ಎಂಬ ರಾಜನು ಆಳಿದನು. ನಂತರ ಮಹಾಭಾರತದಲ್ಲಿ ಹಾವು ಕಚ್ಚಿ ಸತ್ತರು ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ತಕ್ಷಕ ನಾಗ ವಂಶದವನೆಂದು ಹೇಳಲಾಗುತ್ತದೆ. ಈ ಹಾವು ನೂರಾರು ವರ್ಷ ಬದುಕುತ್ತದೆ. ಹೆಚ್ಚಾಗಿ ಮರಗಳ ಮೇಲೆ ವಾಸಿಸುತ್ತದೆ. ಇದು ಗಾಳಿಯಲ್ಲಿ ನೂರು ಅಡಿ ಎತ್ತರಕ್ಕೆ ಹಾರುತ್ತದೆ ಎಂದು ಹೇಳಲಾಗುತ್ತದೆ. ಇದು ಹೆಚ್ಚಾಗಿ ದಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News