Which blood type gets most mosquito bites: ಮಳೆಗಾಲ ಮತ್ತು ಚಳಿಗಾಲದಲ್ಲಿ ಸುತ್ತಮುತ್ತಲ ಪರಿಸರ ಅನೈರ್ಮಲ್ಯವಾಗಿದ್ದರೆ ಸೊಳ್ಳೆಗಳು ಹೆಚ್ಚು ಬೆಳೆಯುತ್ತವೆ. ಆದರೆ ಕೆಲವರಿಗಂತೂ ಸೊಳ್ಳೆಗಳು ಮಿತಿಮೀರಿ ಕಚ್ಚುತ್ತವೆ. ಇನ್ನೂ ಕೆಲವರಿಗೆ ಕಚ್ಚೋದೇ ಇಲ್ಲ. ಅದ್ಯಾಕೆ ಹಾಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.
ಸೊಳ್ಳೆ ಕಡಿತದಿಂದ ಮನುಷ್ಯರಿಗೆ ಹಲವಾರು ರೋಗಗಳು ಬರುತ್ತವೆ. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಆದರೆ ಕೆಲವೊಂದು ರಕ್ತದ ಗುಂಪಿನ ಜನರನ್ನು ಮಾತ್ರ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ. ಈ ಬಗ್ಗೆ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಒ ಮತ್ತು ಎ ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಕಚ್ಚುವುದು ಹೆಚ್ಚು ಇತರ ರಕ್ತದ ಗುಂಪುಗಳ ಜನರನ್ನು ಕಚ್ಚುವುದು ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಸೊಳ್ಳೆಗಳಲ್ಲಿ ಹೆಣ್ಣು ಸೊಳ್ಳೆ ಮಾತ್ರ ಮನುಷ್ಯರನ್ನು ಕಚ್ಚುತ್ತದೆ. ಮನುಷ್ಯರ ರಕ್ತ ಅವುಗಳ ಆಹಾರವಲ್ಲ. ಅವುಗಳ ಹೆಚ್ಚಿನ ಸಂತಾನೋತ್ಪತ್ತಿ ಉತ್ಪಾದನೆ ಎಂದರೆ ಅವರು ಮೊಟ್ಟೆಗಳಿಗೆ ಬೇಕಾಗಿ ಮಾನವ ರಕ್ತವನ್ನು ಕುಡಿಯುತ್ತವೆ. ಹೆಣ್ಣು ಸೊಳ್ಳೆ 200 ರಿಂದ 300 ಮೊಟ್ಟೆಗಳನ್ನು ಇಡುತ್ತದೆ.
ಇದನ್ನೂ ಓದಿ: Causes Of Cancer: ದೇಹದಲ್ಲಿ ಈ ವಿಟಮಿನ್ ಕೊರತೆಯಿಂದ ಕ್ಯಾನ್ಸರ್ ಬರುವುದು ಖಚಿತ..!
ನಾವು ಸೇವಿಸುವ ವಸ್ತುಗಳು ನಮ್ಮ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದರಿಂದ ಸೊಳ್ಳೆಗಳು ಕಡಿಮೆ ಅಥವಾ ಹೆಚ್ಚು ಆಕರ್ಷಿತವಾಗುತ್ತವೆ. ಸಕ್ಕರೆ ಆಲ್ಕೋಹಾಲ್ ಹೆಚ್ಚು ಸೇವಿಸಿದರೆ ಕ್ರಿಮಿಕೀಟಗಳನ್ನು ಪ್ರಚೋದಿಸಲು ದೇಹದಿಂದ ಒಂದು ರೀತಿಯ ಸುಗಂಧ ಬಿಡುಗಡೆಯಾಗುತ್ತದೆ. ಕೆಲವು ಆಹಾರಗಳು ದೇಹದ ಉಷ್ಣತೆಯ ಮೇಲೆಯೇ ಪರಿಣಾಮ ಬೀರುತ್ತವೆ. ಇವುಗಳೂ ಕೂಡ ಸೊಳ್ಳೆಗಳ ಆಕರ್ಷಣೆಯನ್ನುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ