ಭಪ್ಪರೇ ಹನುಮ.. ನಿನಗೆ ನೀನೇ ಸಾಟಿ..! ಗದೆ ಹಿಡಿದು ನಿಂತ ರಾಮಧೂತ.. ವಿಡಿಯೋ ವೈರಲ್‌..

Monkey in Hanuman temple : ಕೋತಿ ಎಲ್ಲಿಂದ ಬಂತು... ಹೇಗೆ ಬಂತು..? ಅಂತ ಯಾರಿಗೂ ಗೊತ್ತಿಲ್ಲ.. ಆದರೆ ರಾಮಭಕ್ತ ಹನುಮಂತನ ಬಳಿ ಕುಳಿತಿದೆ. ಅಲ್ಲಿದ್ದವರೆಲ್ಲ ಭಕ್ತಿಯಿಂದ ಕೋತಿಗೆ ಪೂಜೆ ಸಲ್ಲಿಸಿದ್ದಾರೆ.. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..

Written by - Krishna N K | Last Updated : Dec 4, 2024, 08:07 PM IST
    • ಕೋತಿ ಎಲ್ಲಿಂದ ಬಂತು... ಹೇಗೆ ಬಂತು..? ಅಂತ ಯಾರಿಗೂ ಗೊತ್ತಿಲ್ಲ..
    • ಆಂಜನೇಯ ಸ್ವಾಮಿಗೆ ರಾಮ ಅಂದ್ರೆ ಎಷ್ಟು ಇಷ್ಟ ಅಂತ ಹೇಳಬೇಕಿಲ್ಲ.
    • ಹನುಮಂತ ಯಾವ ರೂಪದಲ್ಲಾದರೂ ಬರುತ್ತಾನೆ ಎಂಬ ನಂಬಿಕೆಯಿದೆ.
ಭಪ್ಪರೇ ಹನುಮ.. ನಿನಗೆ ನೀನೇ ಸಾಟಿ..! ಗದೆ ಹಿಡಿದು ನಿಂತ ರಾಮಧೂತ.. ವಿಡಿಯೋ ವೈರಲ್‌.. title=

Monkey with gada video : ಆಂಜನೇಯ ಸ್ವಾಮಿಗೆ ರಾಮ ಅಂದ್ರೆ ಎಷ್ಟು ಇಷ್ಟ ಅಂತ ಹೇಳಬೇಕಿಲ್ಲ. ಹನುಮಂತ.. ಸದಾ ಶ್ರೀರಾಮನ ಜಪದಲ್ಲಿ ತಲ್ಲಿನನಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಸೀತಾರಾಮರ ದೇವಸ್ಥಾನ ಮತ್ತು ರಾಮನಾಮ ಸ್ಮರಣೆ ಇರುವ ಕಡೆ ಹನುಮಂತ ಖಂಡಿತ ಇರುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅಷ್ಟೇ ಏಕೆ.. ರಾಮ ಚರಿತ ಮಾನಸ ಅಥವಾ ಶ್ರೀ ರಾಮಾಯಣ ಪಠಣ ಮಾಡುವ ಸ್ಥಳದಲ್ಲಿ.. ಹನುಮಂತನಿಗೆ ಪೀಠವನ್ನು ಏರ್ಪಡಿಸಲಾಗುತ್ತದೆ. ಹನುಮಂತ ಯಾವ ರೂಪದಲ್ಲಾದರೂ ಬರುತ್ತಾನೆ. 

ಆಂಜನೇಯ ಸ್ವಾಮಿ ರಾಮಯ್ಯನನ್ನು ಹೃದಯದಲ್ಲಿ ಇಟ್ಟುಕೊಂಡ ಮಹಾನ್ ಭಕ್ತ. ಹನುಮಂತನನ್ನು ಚಿರಂಜೀವಿ ಎಂದೂ ಕರೆಯುತ್ತಾರೆ. ಹಾಗಾಗಿಯೇ ಪ್ರತಿ ಹಳ್ಳಿಯಲ್ಲೂ.. ಎಲ್ಲೆಲ್ಲೂ.. ಹನುಮಂತನ ದೇವಾಲಯಗಳು ಇರುವುದು ಖಚಿತ. ಹನುಮನನ್ನು ಪೂಜಿಸುವವರಿಗೆ ಭೂತ, ಪ್ರೇತ, ಪಿಶಾಚ ಬಾಧೆಗಳು ಮತ್ತು ಗ್ರಹ ಬಾಧೆಗಳಿರುವುದಿಲ್ಲ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ:"ಮಹಾಭಾರತ"ದಲ್ಲಿ ಪರೀಕ್ಷಿತು ರಾಜನಿಗೆ ಕಚ್ಚಿದ ಅಪರೂಪದ "ನಾಗರ ಹಾವು" ಪತ್ತೆ..! ವಿಸ್ಮಯಕಾರಿ ವಿಡಿಯೋ ವೈರಲ್‌

ಅದಕ್ಕಾಗಿಯೇ ಅನೇಕ ಜನರು ಹನುಮಾನ್ ಮತ್ತು ರಾಮನನ್ನು ಪೂಜಿಸುತ್ತಾರೆ. ಅದೇ ರೀತಿಯಲ್ಲಿ, ಕೆಲವರು ಹನುಮಂತನ ಅವತಾರ, ವಾನರಗಳನ್ನು ಪೂಜಿಸುತ್ತಾರೆ. ಮನೆ, ದೇವಸ್ಥಾನಗಳ ಬಳಿ ಮಂಗಗಳು ಕಂಡರೆ ಅವುಗಳಿಗೆ ಏನಾದರೂ ತಿನ್ನಲು ಕೊಡುತ್ತಾರೆ. ಸಧ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಕೋತಿ ಹನುಮಂತನ ದೇವಸ್ಥಾನಕ್ಕೆ ಬಂದು, ಕೈಯಲ್ಲಿ ಗದೆ ಹಿಡಿದು ನಿಂತಿರುವ ದೃಶ್ಯ ಭಕ್ತರನ್ನು ಅಚ್ಚರಿಗೊಳಿಸಿದೆ.. 

ಹನುಮಂತನ ಮಂದಿರಕ್ಕೆ ಕೋತಿ ಎಲ್ಲಿಂದ ಬಂತು? ಹೇಗೆ ಬಂತು ಅಂತ ಗೊತ್ತಿಲ್ಲ.. ಅದೂ ಅಲ್ಲದೆ.. ಗದೆ ಹಿಡಿದು.. ಸ್ವಾಮಿಯ ಪ್ರತಿಮೆಯ ಬಳಿ ಕುಳಿತಿದ್ದು ಅಚ್ಚರಿ ಮೂಡಿಸುತ್ತದೆ.. ಅಲ್ಲಿದ್ದ ಭಕ್ತರು ಹನುಮಂತನೇ ಕೋತಿಯ ರೂಪದಲ್ಲಿ ಬಂದಿದ್ದಾನೆ ಎಂದು ನಂಬಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.. ಇದೀಗ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಇದನ್ನೂ ಓದಿ:ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್‌ ಮಾಡ್ತೀನಿ.. "4" ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಹೇಳಿ.. ನೋಡೋಣ.. 

ಪೂಜೆಯ ನಂತರ ಕೋತಿ ಅಲ್ಲಿಂದ ಹೊರಟು ಹೋಗಿದೆ ಎನ್ನಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಆಂಜನೇಯ ಸ್ವಾಮಿ ವಾನರ ರೂಪದಲ್ಲಿ ಬಂದು ದರ್ಶನ ನೀಡಿದ್ದಾನೆ ಅಂತ ಹೇಳುತ್ತಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News