Apple iPhone 16: ಐಫೋನ್ 16 ಬಗ್ಗೆ ಮಹತ್ವದ ಮಾಹಿತಿ ಸೋರಿಕೆ, ಏನೆಂದು ತಿಳಿಯಿರಿ

Apple iPhone 16 ಸರಣಿಯ ಐಫೋನ್‍ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್‌ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್‌ಸೆಟ್‌ಗೆ ಹೋಲಿಸಿದರೆ ದೊಡ್ಡ ಅಪ್‌ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.

Written by - Puttaraj K Alur | Last Updated : Oct 17, 2023, 12:33 PM IST
  • ಮುಂದಿನ ವರ್ಷ ಆ್ಯಪಲ್ ತನ್ನ iPhone 16 ಸರಣಿಯಲ್ಲಿ ಹೊಸ ಬದಲಾವಣೆ ಮಾಡಲಿದೆ
  • iPhone 16 ಸರಣಿಯ 4 ಮಾದರಿಗಳಲ್ಲಿಯೂ A18 ಬಯೋನಿಕ್ ಚಿಪ್‌ಸೆಟ್
  • ಆ್ಯಪಲ್ ಇತ್ತೀಚಿನ ವರ್ಷಗಳಲ್ಲಿ ತನ್ನ ಐಫೋನ್ ಮಾದರಿಗಳಲ್ಲಿ ಚಿಪ್‌ಗಳನ್ನು ವೈವಿಧ್ಯಗೊಳಿಸಿದೆ
Apple iPhone 16: ಐಫೋನ್ 16 ಬಗ್ಗೆ ಮಹತ್ವದ ಮಾಹಿತಿ ಸೋರಿಕೆ, ಏನೆಂದು ತಿಳಿಯಿರಿ  title=
A18 ಬಯೋನಿಕ್ ಚಿಪ್‌ಸೆಟ್

ನವದೆಹಲಿ: ಪ್ರತಿಷ್ಠಿತ Apple ಕಂಪನಿಯು iPhone 15 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಫೋನ್‌ನ ಎಲ್ಲಾ ಮಾದರಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದಾಗಿ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ಆದರೆ ಮುಂದಿನ ವರ್ಷ ಆ್ಯಪಲ್ ತನ್ನ iPhone 16 ಸರಣಿಯಲ್ಲಿ ಯಾವ ಹೊಸ ಬದಲಾವಣೆ ಮಾಡುತ್ತದೆ ಅಂತಾ ಎಲ್ಲರೂ ಕಾಯುತ್ತಿದ್ದಾರೆ. ಇದರ ಬಗ್ಗೆ ಹೊಸ ಮಾಹಿತಿ ಸೋರಿಕೆಯಾಗಿದ್ದು, ಇದರಲ್ಲಿ ಐಫೋನ್ 16 ಸರಣಿಯ ಬಗ್ಗೆ ಚರ್ಚೆ ನಡೆಯುತ್ತಿದೆ. Apple iPhone 16 ಸರಣಿಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ವದಂತಿ ಮತ್ತು ಮಾಹಿತಿ ಸೋರಿಯಾಗಿದೆ.  A18 ಬಯೋನಿಕ್ ಚಿಪ್‌ಸೆಟ್ ಎಲ್ಲಾ 4 ಮಾದರಿಗಳಲ್ಲಿದೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್‌ಸೆಟ್‌ಗೆ ಹೋಲಿಸಿದರೆ ದೊಡ್ಡ ಅಪ್‌ಗ್ರೇಡ್ ಆಗಿರುತ್ತದೆ.

Apple iPhone 16 ಮಾದರಿಗಳು

ಆ್ಯಪಲ್ ಪೂರೈಕೆ ಸರಪಳಿ ಮೂಲಗಳ ಆಧಾರದ ಮೇಲೆ, ಕ್ಯುಪರ್ಟಿನೊ ಮೂಲದ ಕಂಪನಿಯ ಟಾಪ್ 2024ರ ಐಫೋನ್‌ಗಳು A18 ಸರಣಿಯ SoC ಅನ್ನು ಬಳಸುತ್ತವೆ ಎಂದು ವಿಶ್ಲೇಷಕ ಜೆಫ್ ಪೂ ವರದಿ ಮಾಡಿದ್ದಾರೆ. ಈ ಹೊಸ ಚಿಪ್‌ಸೆಟ್ ಎಂದರೆ iPhone 16 ಸರಣಿಯ ಎಲ್ಲಾ ಮಾದರಿಗಳು iPhone 16, iPhone 16 Plus, iPhone 16 Pro ಮತ್ತು iPhone 16 Pro Maxನಂತಹ ಒಂದೇ ಪ್ರೊಸೆಸರ್‍ನಿಂದ ಕಾರ್ಯನಿರ್ವಹಿಸುತ್ತವೆ.   

ಇದನ್ನೂ ಓದಿ: ಸಜ್ಜನ್ ಜಿಂದಾಲ್ ನೇತೃತ್ವದಲ್ಲಿ ಐಕೆಎಫ್ ಪುನಾರಚನೆ: ಎಂ ಬಿ ಪಾಟೀಲ

ಆ್ಯಪಲ್ ಇತ್ತೀಚಿನ ವರ್ಷಗಳಲ್ಲಿ ತನ್ನ ಐಫೋನ್ ಮಾದರಿಗಳಲ್ಲಿ ಚಿಪ್‌ಗಳನ್ನು ವೈವಿಧ್ಯಗೊಳಿಸಿದೆ, ಪ್ರೊ ಮಾದರಿಗಳಲ್ಲಿ ಇತ್ತೀಚಿನ ಚಿಪ್‌ಗಳು, ಬೇಸ್ ಮತ್ತು ಪ್ಲಸ್ ಮಾದರಿಗಳಲ್ಲಿ ಕಳೆದ ವರ್ಷದ ಚಿಪ್‌ಗಳಿವೆ. ಆದರೆ 2024ರಲ್ಲಿ ಆ್ಯಪಲ್ ಇದನ್ನು ಕೊನೆಗೊಳಿಸಲಿದೆ. ಎಲ್ಲಾ 4 ಐಫೋನ್ ಮಾದರಿಗಳು A18 ಬಯೋನಿಕ್ ಚಿಪ್‌ಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ.

ಐಫೋನ್ 16 ಮತ್ತು ಐಫೋನ್ 16+ A18 ಬಯೋನಿಕ್ SoCನ್ನು ಹೊಂದಿರುತ್ತದೆ ಎಂದು ಹೆಸರಾಂತ ವಿಶ್ಲೇಷಕರು ಹೇಳಿದ್ದಾರೆ. ಆದರೆ iPhone 16 Pro ಮತ್ತು iPhone 16 Pro Max A18 Pro SoCಯೊಂದಿಗೆ ಸಜ್ಜುಗೊಂಡಿದೆ. ಇತ್ತೀಚೆಗೆ ವಿಶ್ಲೇಷಕರು ಹೊಸ ಐಫೋನ್ 16 ಪ್ರೊ ಸರಣಿಯು ವೇಗವಾದ ವೈ-ಫೈ 7 ಸ್ಟ್ಯಾಂಡರ್ಡ್ ಮತ್ತು ಹೊಸ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಮತ್ತೆ ನಿರಂತರ ಬೆಲೆ ಇಳಿಕೆಯತ್ತ ಬಂಗಾರ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News