ಬೆಂಗಳೂರು : ವಾಟ್ಸಾಪ್ ವಿಂಡೋಸ್ ಗಾಗಿ ಹೊಚ್ಚ ಹೊಸ ಅಪ್ಲಿಕೇಶನ್ ಅನ್ನು ಆರಂಭಿಸಿದೆ. ಡೆಸ್ಕ್‌ಟಾಪ್ ಬಳಕೆದಾರರು ಇನ್ನು ಮುಂದೆ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು ಮತ್ತು ಸಿಂಕ್ ಮಾಡಲು ತಮ್ಮ ಪ್ರೈಮರಿ ಸ್ಮಾರ್ಟ್‌ಫೋನ್ ಅನ್ನು ಲಿಂಕ್ ಮಾಡುವ ಅಗತ್ಯವಿಲ್ಲ. ಬದಲಾಗಿ ಡೆಸ್ಕ್‌ಟಾಪ್ ಬಳಕೆದಾರರು ವಾಟ್ಸಾಪ್ ನ ವೆಬ್ ಆಧಾರಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಕು ಅಥವಾ ಇಂಟರ್ನೆಟ್ ಬ್ರೌಸರ್ ಮೂಲಕ WhatsAppಗೆ ಅಕ್ಸೆಸ್ ಪಡೆಯಬೇಕು. ಇದು ಫೋನ್ ಅಪ್ಲಿಕೇಶನ್‌ನ ಮೇಲೆ ಅವಲಂಬಿತವಾಗದೆ ಸ್ವತಂತ್ರ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತದೆ.
ವಾಟ್ಸಾಪ್ ನ ಹೊಸ ನೇಟಿವ್ ಅಪ್ಲಿಕೇಶನ್ 'ಹೆಚ್ಚಿದ ವಿಶ್ವಾಸಾರ್ಹತೆ ಮತ್ತು ವೇಗ' ಒದಗಿಸುತ್ತದೆ. ಇದನ್ನ ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಮ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಫೋನ್ ಆಫ್‌ಲೈನ್‌ನಲ್ಲಿದ್ದಾಗಲೂ ನೋಟಿಫಿಕೇಶನ್ ಮತ್ತು ಸಂದೇಶಗಳನ್ನು ಸ್ವೀಕರಿಸಲು ಅಪ್ಲಿಕೇಶನ್ ಅನುಮತಿಸುತ್ತದೆ.
ಇದನ್ನೂ ಓದಿ : ಬರಲಿದೆ ಅತಿ ಕಡಿಮೆ ಬೆಲೆಯ 5G ಫೋನ್.. ಲಾಂಚ್ ಡೇಟ್, ವೈಶಿಷ್ಟ್ಯ, ಬೆಲೆ ಬಗ್ಗೆ ಕಂಪ್ಲೀಟ್ ಡಿಟೇಲ್ಸ್
ಅಪ್ಲಿಕೇಶನ್ ಡೌನ್‌ಲೋಡ್‌ಗೆ ಲಭ್ಯವಿದೆಯೇ? :
ಹೊಸ ಡೆಸ್ಕ್‌ಟಾಪ್ ಅಪ್ಲಿಕೇಶನ್ ವಿಂಡೋಸ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇದನ್ನು ಮೈಕ್ರೋಸಾಫ್ಟ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. .
1. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ WhatsApp ತೆರೆಯಿರಿ.
2. ಇಲ್ಲಿ Androidನಲ್ಲಿ More ಆಯ್ಕೆ ಅಥವಾ iPhone ನಲ್ಲಿ Settings ಮೇಲೆ ಟ್ಯಾಪ್ ಮಾಡಿ.
3. ನಂತರ ಲಿಂಕ್ಡ್ ಡಿವೈಸಸ್ ಮೇಲೆ ಟ್ಯಾಪ್ ಮಾಡಿ.
4.WhatsApp ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಗೋಚರಿಸುವ QR ಕೋಡ್‌ನಲ್ಲಿ ನಿಮ್ಮ ಫೋನ್‌ನ ಕ್ಯಾಮರಾವನ್ನು ಪಾಯಿಂಟ್ ಮಾಡಿ.
ಮ್ಯಾಕ್ ಆಪರೇಟಿಂಗ್ ಸಿಸ್ಟಮ್‌ಗೆ ಸ್ಥಳೀಯವಾದ ವಾಟ್ಸಾಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಆಸಕ್ತರು ಆರಂಭಿಕ ಅಕ್ಸೆಸ್ ಗಾಗಿ ವಾಟ್ಸಾಪ್ ಬೀಟಾ ಪ್ರೋಗ್ರಾಂ ಅನ್ನು ಡೌನ್‌ಲೋಡ್ ಮಾಡಬಹುದು. ಹೊಸ ಅಪ್ಲಿಕೇಶನ್ ಕ್ಲೀನರ್ ಇಂಟರ್ಫೇಸ್ ಅನ್ನು ನೀಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗೆ ಬಹುತೇಕ ಹೋಲುತ್ತದೆ. ಅಪ್ಲಿಕೇಶನ್‌ನೊಂದಿಗೆ ಬರುವ ಏಕೈಕ ಪ್ರಮುಖ ಬದಲಾವಣೆಯೆಂದರೆ ಇನ್ನು ಮುಂದೆ ವಾಟ್ಸಾಪ್ ನೋಟಿಫಿಕೇಶನ್ ತ್ತು ಸಂದೇಶಗಳನ್ನು ಸ್ವೀಕರಿಸಲು ಫೋನ್ ಅನ್ನು ಇಂಟರ್ನೆಟ್‌ಗೆ ಸಂಪರ್ಕಿಸುವ ಅಗತ್ಯವಿಲ್ಲ.
ಇದನ್ನೂ ಓದಿ : ಭಾರತದಲ್ಲಿ ಈ ದಿನದಿಂದ 5G ಸೇವೆ ಲಭ್ಯ .! ಎಷ್ಟಿರಲಿದೆ ಗೊತ್ತಾ ಸ್ಪೀಡ್?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ