Reliance Jio: ಬಹುಶಃ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮಾಡಿದಷ್ಟು ಪ್ರಯೋಗವನ್ನು ಬೇರಾವ ಸಂಸ್ಥೆಯೂ ಮಾಡಿಲ್ಲ. ಗ್ರಾಹಕರನ್ನು ಸೆಳೆಯಲು ರಿಲಯನ್ಸ್ ಜಿಯೋ ಕೊಟ್ಟಷ್ಟು ಪ್ಲಾನ್ ಗಳನ್ನು ಬೇರೆಯಾವುದೇ ಕಂಪನಿ ಕೊಟ್ಟಿಲ್ಲ. ಹೀಗೆ ಮಾಡಿ ಟೆಲಿಕಾಂ ಮಾರುಕಟ್ಟೆಯ ಸುಲ್ತಾನ್ ಆಗಿದ್ದರೂ ಗ್ರಾಹಕರನ್ನು ಸೆಳೆಯಲು ಆಗಾಗ್ಗೆ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿಲ್ಲ. ಜಿಯೋ ಇದೀಗ ಗ 49 ರೂಪಾಯಿ ಮೌಲ್ಯದ ಹೊಸ ರಿಚಾರ್ಜ್ ಬಿಡುಗಡೆ ಮಾಡಲಾಗಿದೆ.
ಸದ್ಯದ ಮಾಹಿತಿಗಳ ಪ್ರಕಾರ, ರಿಲಯೆನ್ಸ್ ಜಿಯೋ ಸಂಸ್ಥೆಯು 490 ಮಿಲಿಯನ್ ಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಎಲ್ಲರಿಗೂ ಸುಲಭದಲ್ಲಿ ಸಿಗುವಂತಹ ಇಂಟರ್ನೆಟ್ ಸೇವೆಯನ್ನು ಪರಿಚಯಿಸುತ್ತಿದೆ. ಅದು ಬಜೆಟ್ ಸ್ನೇಹಿಯಾಗಿರಬೇಕು ಎನ್ನುವ ಕಾರಣಕ್ಕಾಗಿ ಕೇವಲ 49 ರುಪಾಯಿ ಮೌಲ್ಯದ ರಿಚಾರ್ಜ್ ಸೇವೆಯನ್ನು ಬಿಡುಗಡೆ ಮಾಡಿ ಅದರಲ್ಲಿ ಅನಿಯಮಿತ ಡೇಟಾವನ್ನು ಕೂಡ ಕೊಡುತ್ತಿದೆ.
ಇದನ್ನೂ ಓದಿ- ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಅತ್ಯಂತ ಕಡಿಮೆ ಬೆಲೆಯಲ್ಲಿ 3 ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ
ಹೊಸದಾಗಿ ಪರಿಚಯಿಸಲಾಗುತ್ತಿರುವ 49 ರೂಪಾಯಿ ಮೌಲ್ಯದ ರಿಲಯನ್ಸ್ ಜಿಯೋ ಪ್ಲಾನ್ ವಿಶೇಷವಾಗಿ ಈಗಾಗಲೇ ಇರುವ ದೈನಂದಿನ ಡೇಟಾವನ್ನು ಮುಗಿಸಿ ಹೆಚ್ಚುವರಿ ಡೇಟಾದ ಅಗತ್ಯ ಇರುವ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಹಾಗಾಗಿ ಈ 49 ರೂಪಾಯಿಗಳ ರಿಚಾರ್ಜ್ ಯೋಜನೆ ಎಲ್ಲಾ ಡೇಟಾ ಪ್ಯಾಕ್‌ಗಳ ವರ್ಗದ ವ್ಯಾಪ್ತಿಯಲ್ಲಿ ಸಿಗುತ್ತವೆ. ಆದರೆ ಈ ಯೋಜನೆಯಲ್ಲಿ ಫೋನ್ ಕಾಲ್ ಮತ್ತು SMS ಸೌಲಭ್ಯಗಳು ಇರುವುದಿಲ್ಲ.
2024ರ ಜುಲೈ ತಿಂಗಳಲ್ಲಿ ರಿಲಯೆನ್ಸ್ ಜಿಯೋ ಕೆಲವು ರಿಚಾರ್ಜ್ ಯೋಜನೆಗಳ ದರವನ್ನು ಹೆಚ್ಚಳ ಮಾಡಿತ್ತು. ಹಾಗೆಯೇ ಕೆಲವು ಅಗ್ಗದ ಆಯ್ಕೆಗಳನ್ನು ಸ್ಥಗಿತಗೊಳಿಸಿತ್ತು. ಇದರಿಂದ ಕಂಪನಿಗೆ ಹೊಸದಾಗಿ ಗ್ರಾಹಕರಾಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಇಲ್ಲಿಂದ ಹೊರಹೋಗುವವರೂ ಹೆಚ್ಚಾದರು. ಅದಕ್ಕಾಗಿ ಈಗ 49 ರೂಪಾಯಿ ರಿಚಾರ್ಜ್ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ- ಬಿಎಸ್‌ಎನ್‌ಎಲ್ ನ್ಯೂ ಇಯರ್ ಆಫರ್‌ನಲ್ಲಿ ಸಿಗ್ತಿದೆ ತಿಂಗಳ ಪೂರ್ತಿ 'ಫ್ರೀ ಇಂಟರ್ನೆಟ್'... ಹೇಗ್ ಗೊತ್ತಾ..!
ರಿಲಯನ್ಸ್ ಜಿಯೋ ಈಗ 49 ರೂಪಾಯಿ ಮೌಲ್ಯದ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿರುವುದರಿಂದ ಇತರೆ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, Vi ಮತ್ತು BSNL ನಂತಹ ಪ್ರತಿಸ್ಪರ್ಧಿಗಳು ಒತ್ತಡಕ್ಕೆ ಸಿಲುಕಿವೆ. ಒಂದೊಮ್ಮೆ ಏರ್‌ಟೆಲ್, Vi ಮತ್ತು BSNL ಸಂಸ್ಥೆಗಳೂ ಪೈಪೋಟಿಗಿಳಿದರೆ ಅದರಿಂದ ಗ್ರಾಹಕನಿಗೆ ಲಾಭ ಆಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.