Phone Charging Tips: ಇದು ಸ್ಮಾರ್ಟ್ಫೋನ್ ಯುಗ. ಈಗ ಯಾರ ಕೈಯಲ್ಲಿ ನೋಡಿದ್ರೂ ಮೊಬೈಲ್ ಗಳದ್ದೇ ಹಾವಳಿ. ಸ್ಮಾರ್ಟ್ಫೋನ್ ಉಪಯೋಗಿಸಲು ಬ್ಯಾಟರಿ ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿ ಫೋನ್ನ ಬ್ಯಾಟರಿ ಸ್ವಲ್ಪ ಕಡಿಮೆಯಾದರೂ ಸಾಕು ಜನ ತಕ್ಷಣ ಅದನ್ನು ಚಾರ್ಜಿಂಗ್ಗೆ ಹಾಕುತ್ತಾರೆ. ಇನ್ನೂ ಕೆಲವರು ಬ್ಯಾಟರಿ ಸದಾ 100% ಇರಬೇಕು ಎಂದು ಫೋನ್ ಜೊತೆಗೆ ಪವರ್ ಬ್ಯಾಂಕ್ ಅನ್ನು ಸಹ ಜೊತೆಯಲ್ಲಿಯೇ ಹೊತ್ತಾಡುತ್ತಿರುತ್ತಾರೆ. ಇನ್ನೂ ಕೆಲವರಂತೂ ತುಂಬಾ ಹೊತ್ತು ಮೊಬೈಲ್ ಫೋನ್ ಚಾರ್ಜ್ ಮಾಡಿದರೆ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ ಎಂದು ಭಾವಿಸಿ ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್ ಗೆ ಇಡುತ್ತಾರೆ. ಮೊಬೈಲ್ ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡುವ ಅಭ್ಯಾಸ ನಿಮಗೂ ಇದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.
ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತಾ? ಖಂಡಿತಾ ಇಲ್ಲ, ನಿಮಗೆಲ್ಲರಿಗೂ ತಿಳಿದಿರುವಂತೆ ರಾತ್ರಿಯಿಡೀ ಫೋನ್ ಅನ್ನು ಚಾರ್ಜ್ನಲ್ಲಿ ಇಡುವುದರಿಂದ ಇದು ಬ್ಯಾಟರಿಯ ಕ್ಷಮತೆಗೆ ಹಾನಿಕಾರಕವಾಗಿದೆ. ನೀವು ಸದಾ ಈ ರೀಟಿ ಮಾಡುವುದರಿಂದ ಅದು ಫೋನ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಕುರಿತಂತೆ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳ ಅಭಿಪ್ರಾಯವೇನು? ಮುಂದೆ ಓದಿ...
ಇದನ್ನೂ ಓದಿ- ಸ್ಮಾರ್ಟ್ಫೋನ್ಗಳಲ್ಲಿ ಜನ ಹೆಚ್ಚಾಗಿ ಏನ್ ವೀಕ್ಷಿಸ್ತಾರಂತೆ ಗೊತ್ತಾ?
ರಾತ್ರಿಯಿಡೀ ಸ್ಮಾರ್ಟ್ಫೋನ್ ಚಾರ್ಜ್ ಮಾಡುವ ಬಗ್ಗೆ ಆಪಲ್ ಕಂಪನಿ ಹೇಳಿದ್ದೇನು?
ಆಪಲ್ ಫೋನ್ ತಯಾರಾಕರ ಪ್ರಕಾರ, ನಿಮ್ಮ ಐಫೋನ್ ದೀರ್ಘಕಾಲದವರೆಗೆ ಇಲ್ಲವೇ ರಾತ್ರಿ ಪೂರ್ತಿ ಚಾರ್ಜಿಂಗ್ ಹಾಕುವುದರಿಂದ ಫೋನಿನ ಬ್ಯಾಟರಿ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂದು USA Today ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- ಇವೇ ನೋಡಿ ಸ್ಮಾರ್ಟ್ಫೋನ್ನಲ್ಲಿ ಹುಡುಗಿಯರು ಅತಿ ಹೆಚ್ಚು ಬಳಸುವ ಆಪ್ಗಳು
ರಾತ್ರಿ ಪೂರ್ತಿ ಫೋನ್ ಚಾರ್ಜ್ ಹಾಕುವ ಬಗ್ಗೆ ಸ್ಯಾಮ್ಸಂಗ್ ಸೇರಿದಂತೆ ಇತರ ಫೋನ್ ತಯಾರಾಕ ಕಂಪನಿಗಳ ಅಭಿಪ್ರಾಯವೇನು?
ಸ್ಯಾಮ್ಸಂಗ್ ಸೇರಿದಂತೆ ಇತರ ಆಂಡ್ರಾಯ್ಡ್ ಫೋನ್ಗಳ ತಯಾರಾಕರ ಪ್ರಕಾರ, ದೀರ್ಘ ಸಮಯದವರೆಗೆ ಫೋನ್ ಅನ್ನು ಚಾರ್ಜರ್ಗೆ ಸಂಪರ್ಕಿಸುವುದರಿಂದ ಅದರ ಸಾಮರ್ಥ್ಯವು ಸುಮಾರು 30% ರಿಂದ 70% ವರೆಗೆ ಇಳಿಕೆಯಾಗುತ್ತದೆ. ಇದರಿಂದ ಫೋನ್ ಬ್ಯಾಟರಿ ಬೇಗ ಹಾಳಾಗುತ್ತದೆ ಎನ್ನಲಾಗಿದೆ.
ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರ ಪರಿಣಾಮ?
* ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರಿಂದ ಫೋನ್ ಬಹಳ ಬೇಗ ಹೀಟ್ ಆಗುತ್ತದೆ.
* ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ.
* ಕೆಲವೊಮ್ಮೆ ಇದು ಫೋನ್ ಸ್ಫೋಟಕ್ಕೂ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.