Bigg Boss Kannada 11 Winner Hanumatha: ಕಲರ್ಸ್ ಕನ್ನಡ ವಾಹಿನಿ ಪ್ರಸ್ತುತಪಡಿಸುವ ಕನ್ನಡದ ಅತಿ ಹೆಚ್ಚು ಟಿಆರ್ಪಿ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಮುಕ್ತಾಯಗೊಂಡಿದೆ. ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದ್ದ ಬಿಗ್ ಬಾಸ್ ಸೀಸನ್ 11ರ ಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ತೀವ್ರವಾಗಿತ್ತು. ಇದೀಗ ಆ ಕುತೂಹಲ ತಣಿದಿದ್ದು ತೀವ್ರ ಸ್ಪರ್ಧೆಯಿದ್ದ ಆಟದಲ್ಲಿ ಹಳ್ಳಿ ಹೈದ ಹನುಮಂತ ಬಿಗ್ ಬಾಸ್ ಗೆದ್ದು ಇತಿಹಾಸ ಸೃಷ್ಠಿಸಿದ್ದಾರೆ.
ಈ ಮೊದಲು ಕೂಡ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಹನುಮಂತ ತಮ್ಮ ಹಳ್ಳಿ ಸೊಗಡು ತುಂಬಿದ ಭಾಷೆ ಮತ್ತು ವಿಶಿಷ್ಟ ಮ್ಯಾನರಿಸಂ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಸಲ ಬಿಗ್ ಬಾಸ್ ಸೀಸನ್ 11ರಲ್ಲೂ ಹನುಮಂತ ಗೆಲ್ಲಬಹುದು ಎನ್ನುವ ಅನುಮಾನವನ್ನು ಹುಟ್ಟುಹಾಕಿದ್ದರು. ಅದೇ ರೀತಿ ಭಾನುವಾರ (ಜನವರಿ 26) ನಡೆದ ಫಿನಾಲೆಯಲ್ಲಿ ಹನುಮಂತ ಬಿಗ್ ಬಾಸ್ ಸೀಸನ್ 11ರ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಹನುಮಂತ ಗೆದ್ದ ಹಣ ಎಷ್ಟು?
ಬಿಗ್ ಬಾಸ್ ಸೀಸನ್ 11ರ ಹೀರೊ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಹಿಂದೆ ಅವರು ಭಾಗವಹಿಸಿದ್ದ ರಿಯಾಲಿಟಿ ಶೋಗಳಿಗೆ ಹೋಲಿಸಿಕೊಂಡರೆ ಹನುಮಂತ ಇಷ್ಟು ದೊಡ್ಡ ಮೊತ್ತದ ಬಹುಮಾನ ಗೆದ್ದಿರುವುದು ಇದೇ ಮೊದಲು. ಅವರೇ ಹೇಳಿಕೊಳ್ಳುವ ಪ್ರಕಾರ ಬಡಕುಟುಂಬದಲ್ಲಿ ಹುಟ್ಟಿದ ಅವರು ಇಷ್ಟು ದೊಡ್ಡ ಮೊತ್ತದ ದುಡ್ಡು ನೋಡುತ್ತಿರುವುದು ಕೂಡ ಇದೇ ಮೊದಲು.
ಇದನ್ನೂ ಓದಿ- ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತ 50 ಲಕ್ಷ ಗೆದ್ದರೂ ಕೈಗೆ ಸಿಗುವುದು ಮಾತ್ರ ಇಷ್ಟೇ ದುಡ್ಡು!!
ಗೆದ್ದ ಹಣವನ್ನು ಏನು ಮಾಡುತ್ತಾರೆ ಹನುಮಂತ?
ಬಿಗ್ ಬಾಸ್ ಸೀಸನ್ 11ರ ಕಪ್ ಗೆದ್ದು 50 ಲಕ್ಷ ರೂಪಾಯಿ ಬಹುಮಾನ ಸ್ವೀಕರಿಸಿರುವ ಹನುಮಂತ ಮೊದಲು ಮದುವೆ ಅಗಲಿದ್ದಾರಂತೆ. ಉಳಿದ ಹಣದಲ್ಲಿ ತನ್ನ ಸಮುದಾಯ ಮತ್ತು ಹುಟ್ಟೂರಿಗೆ ನೆರವಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಬಡತನದಲ್ಲಿ ಬೆಂದು ನೊಂದು ಸಾಕಾಗಿದ್ದರೂ ತನಗೆ ಬಹುಮಾನವಾಗಿ ಬಂದ ಹಣದಲ್ಲಿ ಸಮುದಾಯಕ್ಕೆ ಮತ್ತು ಊರಿಗೆ ನೆರವಾಗುತ್ತೇನೆ ಎಂದಿರುವ ಹನುಮಂತ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.