ಚುನಾವಣಾ ಆಯೋಗವು ಗುರುವಾರ ಟಿಆರ್ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿದೆ.
ಟಿಆರ್ಎಸ್ಗೆ ಬರೆದ ಪತ್ರದಲ್ಲಿಚುನಾವಣಾ ಆಯೋಗವು 'ಉಲ್ಲೇಖಿಸಲಾದ ವಿಷಯದ ಬಗ್ಗೆ 05-10-2022 ರಂದು ನಿಮ್ಮ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ್ ರಾಷ್ಟ್ರ ಸಮಿತಿಗೆ ಬದಲಾಯಿಸಲು ಆಯೋಗವು ಒಪ್ಪಿಕೊಂಡಿದೆ' ಎಂದು ಅದು ಹೇಳಿದೆ.
Asaduddin Owaisi Statement: ವೋಟ್ ಬ್ಯಾಂಕ್ ರಾಜಕಾರಣದ ಹಿನ್ನೆಲೆ ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕೃತವಾಗಿ 'ಹೈದ್ರಾಬಾದ್ ವಿಮೋಚನಾ ದಿನಾಚರಣೆ ಆಚರಿಸುತ್ತಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಸಭೆ ಮಧ್ಯಾಹ್ನ 3ಕ್ಕೆ ನಡೆಯಲಿರುವ ಮಹತ್ವದ ಮೀಟಿಂಗ್ ಸಿಪಿಐ, ಸಿಪಿಐ(ಎಂ) ಎಎಪಿ, ತೆಲುಗುದೇಶಂ, ಟಿಆರ್ಎಸ್ ಜೆಡಿಎಸ್, ಅಖಾಲಿದಳ ಸೇರಿ 22 ಪಕ್ಷಗಳ ನಾಯಕರುಭಾಗಿ ಶರದ್ ಪವಾರ್, ಚಂದ್ರಶೇಖರ್ ರಾವ್, ಕೇಜ್ರಿವಾಲ್ ಸಹ ಭಾಗಿ
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಚಿವ ಕೆ.ಟಿ. ರಾಮರಾವ್ ಅವರು ಶುಕ್ರವಾರ ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನಾ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ರಾಜಕೀಯ ಪಕ್ಷಗಳ ಆಸ್ತಿಗಳ ಕುರಿತು ಎಡಿಆರ್ ವರದಿ ಬಹಿರಂಗವಾಗಿದೆ. ದೇಶದ 7 ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿವೆ.
ತೆಲಂಗಾಣ ರಾಷ್ಟ್ರೀಯ ಸಮಿತಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೇಯರ್ ಹುದ್ದೆಗೇರಲು ಅಸದುದ್ದೀನ್ ಒವೈಸಿ ಅವರ ಎಐಎಂಐಎಂ (AIMIM) ಪಕ್ಷದ ಬೆಂಬಲ ಪಡೆಯಲೇಬೇಕಾಗಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿಗೆ ಎಐಎಂಐಎಂ ಬೆಂಬಲ ನೀಡದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ.
ಮಹಿಳಾ ಅರಣ್ಯಾಧಿಕಾರಿ (ಎಫ್ಆರ್ಒ) ಮೇಲೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ಸಿರ್ಪುರ ಶಾಸಕ ಕೊನೆರು ಕೊನಪ್ಪ ಅವರ ಸಹೋದರ ಕೊನೇರು ಕೃಷ್ಣ ರಾವ್ ಅಧಿಕಾರಿಣಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೃಷ್ಣ ರಾವ್ ಇತ್ತೀಚೆಗೆ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲಾ ಪರಿಷತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಲೋಕಸಭಾ ಚುನಾವಣೆ ಏಳನೇ ಹಂತ ಬಾಕಿ ಇರುವಾಗಲೇ ಟಿಆರ್ಎಸ್ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ತೃತೀಯ ರಂಗದ ರಚನೆಯ ಸಾಧ್ಯತೆ ವಿಚಾರವಾಗಿ ಚರ್ಚಿಸಲು ಸೋಮವಾರದಂದು ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ನೂತನ ರಾಜ್ಯ ರಚಿಸಿ, ಆಡಳಿತಕ್ಕೆ ಬಂದ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತು. ಹೀಗಾಗಿ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದರು.
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ತೆಲಂಗಾಣ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯನ್ನು ತೊರೆದಿರುವ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇದೇ ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅವರು ಈಗ ಟಿಆರೆಸ್ಸ್ ತೊರೆದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಮತ್ತು ಸಚಿವ ಕೆ.ಟಿ ರಾಮರಾವ್ 2019ರ ಲೋಕಸಭೆ ಚುನಾವಣೆಗಯಲ್ಲಿ ಟಿಆರ್ಎಸ್ ಪಕ್ಷವು ಎಂದಿಗೂ ಕೂಡ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.