ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ - ಭಾರತ್ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ ಹತ್ತಿರದ ಚನ್ನಮ್ಮನ ಕಿತ್ತೂರು, ನಂದಗಡ, ರಾಜಹಂಸಗಡ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ತಾಣಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಈ ಭಾಗದ ಜನರ ಧೈರ್ಯ, ಕಾರ್ಯಕ್ಷಮತೆ, ಹಾಗೂ ನೈಸರ್ಗಿಕ ಸಂಪತ್ತುಗಳ ಕುರಿತು ಜಾಗೃತಿ ಮೂಡಿಸಬೇಕು.
Malpe Beach: ಮಲ್ಪೆ ಬೀಚ್ನಲ್ಲಿ ಯಾವುದೇ ಅಪಾಯ ಸಂಭವಿಸದಂತೆ ತಡೆಯಲು ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ಸದ್ಯಕ್ಕೆ ತಡೆ ಬೇಲಿಯನ್ನು ನಿರ್ಮಿಸಲಾಗಿದೆ. ಸಮುದ್ರ ಪ್ರಸಿದ್ಧ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಬಲೆಯನ್ನು ದಾಟಿ ಹೋಗದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ತಾಲ್ಲೂಕಿನ ಸಂಗನಕಲ್ಲಿನ ಸಣ್ಣ ರಾಚಮ್ಮ ಗುಡ್ಡದಲ್ಲಿರುವ ಶಿಲಾಯುಗದ ರೇಖಾಚಿತ್ರಗಳ ಹತ್ತಿರದಲ್ಲಿನ ಬಂಡೆಯನ್ನು ಯಾರೋ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದು, ಈ ಕುರಿತು ಬಳ್ಳಾರಿಯ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ 40 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 1 ವರ್ಷದಲ್ಲಿ 2.5 ಲಕ್ಷ ದಷ್ಟು ಮಂದಿ ಹಿಮಾಚ್ಛಾದಿತ ಬೆಟ್ಟದ ಚೆಲುವನ್ನು ಕಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಡಾಂಬರೀಕರಣ ಮಾಡಿಸುವ ಉದ್ದೇಶದಿಂದ ಡಿ.18ರಿಂದ 20ರವರೆಗೆ ಮೂರು ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
Glass Sky Walk Bridge: ಪಶ್ಚಿಮ ಘಟ್ಟದ ಕಾಡು ಮತ್ತು ಬೆಟ್ಟಗಳ ಅದ್ಭುತ ನೋಟವೇ ರೋಮಾಂಚಕ ಸುತ್ತಲೂ ಹಸಿರಿರಲು.. ಬೆಟ್ಟ ಗುಡ್ಡದ ಇಕ್ಕೆಲಗಳು ಕೈ ಬೀಸಿ ಕರೆಯುತ್ತಿರಲು.. ಮುಗಿಲು ಕೈಗೆ ಸಿಗುವಂತಿರಲು.. ಗಾಜಿನ ಮೇಲೆ ಹೆಜ್ಜೆ ಹಾಕಿ ಪ್ರಕೃತಿಯ ಸವಿಯುತ್ತಿರಲು.. ಇದೇ ಅಲ್ವಾ ಸ್ವರ್ಗ..
ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸಿಗರಿಂದ ಜೋಗ ಜಲಪಾತ ತುಂಬಿ ತುಳುಕುತ್ತಿದೆ. ಶನಿವಾರದಿಂದ ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.