ರಮೇಶ್ ರೆಡ್ಡಿ ಹಳ್ಳಿಯೊಂದರಿಂದ ರಾಜಧಾನಿ ಬೆಂಗಳೂರಿಗೆ 1982ರಲ್ಲಿ ಬಂದುಬಿಡ್ತಾರೆ. ಆಗ ಅವರು ಹತ್ತನೇ ತರಗತಿ ಓದೋ ಹುಡುಗ. ಪ್ರಪಂಚ ಏನು ಅನ್ನೋದು ತಿಳಿದೇ ಇಲ್ಲ. ಹೇಗೋ ಜೀವನ ಸಾಗಿಸಬೇಕು ಅನ್ನೋ ಹಠಕ್ಕೆ ಬಿದ್ದ ರಮೇಶ್ ಅವ್ರು ಗಾರೆ ಕೆಲಸಕ್ಕೆ ಸೇರಿ ದುಡಿದು ಹೊಟ್ಟೆಗೆ ಹಿಟ್ಟು ತುಂಬಿಸಿಕೊಳ್ಳುತ್ತಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ `ಪುನೀತ್' ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.
"ಮರ್ದಿನಿ" ಇದೊಂದು ಮಹಿಳಾ ಪ್ರಧಾನ ಚಿತ್ರ. ರಿತನ್ಯ ಹೂವಣ್ಣ "ಮರ್ದಿನಿ" ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ.
ಕನ್ನಡಿಗರಿಗೆ ನೂರಾರು ಸಿನಿಮಾಗಳನ್ನು ಕಾಣಿಕೆಯಾಗಿ ನೀಡಿ, ಕೋಟಿ ಕೋಟಿ ಅಭಿಮಾನಿಗಳ ಮನರಂಜಿಸಿ, ಕನ್ನಡಿಗರ ಹೃದಯವನ್ನು ಗೆದ್ದಿರುವ ದೊಡ್ಮನೆಯ ಹಿರಿಯ ಪುತ್ರ ಹಾಗೂ ಕನ್ನಡಿಗರ ಪ್ರೀತಿಯ ನಟ ಶಿವಣ್ಣ ಅಭಿನಯದ 'ಬೈರಾಗಿ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಬೈರಾಗಿ' ಎಲ್ಲೆಲ್ಲೂ ದೊಡ್ಡ ಸದ್ದು ಮಾಡುವ ಜೊತೆಗೆ, ಬಾಕ್ಸ್ ಆಫಿಸ್ ಅಲ್ಲೂ ಸದ್ದು ಮಾಡಿತ್ತು. ಇದೀಗ 'ಬೈರಾಗಿ' ಸಿನಿಮಾ ಸಂಬಂಧ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
"ಸಿಕ್ಸರ್" , "ಮೊಗ್ಗಿನ ಮನಸ್ಸು", "ಕೃಷ್ಣನ್ ಲವ್ ಸ್ಟೋರಿ" ಯಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶಿಸಿರುವ "ಲವ್ 360" ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ.ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಕನ್ನಡ ಸಿನಿಮಾಗಳ ಕೆಪಾಸಿಟಿಗೆ ಬಾಲಿವುಡ್ ನಲುಗಿ ಹೋಗುತ್ತಿದೆ. ಸಾಲು ಸಾಲು ಸ್ಯಾಂಡಲ್ವುಡ್ ಸಿನಿಮಾಗಳು ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರುತ್ತಿದ್ದರೆ, ಮತ್ತೊಂದು ಕಡೆ ಬಾಲಿವುಡ್ನ ಸಾಲು ಸಾಲು ಸಿನಿಮಾಗಳು ಫ್ಲಾಪ್ ಲಿಸ್ಟ್ಗೆ ಸೇರುತ್ತಿವೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ತೊಡೆ ತಟ್ಟಿ ನಿಲ್ಲಲು ಸಜ್ಜಾಗಿದೆ.
ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ.ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರವೇ "ಮೇಡ್ ಇನ್ ಬೆಂಗಳೂರು".ಈಗ ಈ ಚಿತ್ರದ "ಬನ್ನಿರೆ ಬೆಂಗಳೂರಿಗೆ" ಎಂಬ ಹಾಡನ್ನು ಖ್ಯಾತ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.