Mahakumbh 2025: ಈ ವರ್ಷ ಪ್ರಯಾಗರಾಜ್ನಲ್ಲಿ ಮಹಾಕುಂಭ ಜಾತ್ರೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ಈ ಲೇಖನದಲ್ಲಿ ಕುಂಭಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಥೆಯನ್ನು ನಿಮಗೆ ಹೇಳಲಿದ್ದೇವೆ.
Miracle cure : ಪೋಷಕರ ಮೂಢನಂಬಿಕೆಯಿಂದಾಗಿ ಉತ್ತರಾಖಂಡದ ಹರಿದ್ವಾರದಲ್ಲಿ ಐದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದ್ದು ಈ ಕುರಿತ ವಿಡಿಯೋ ವೈರಲ್ ಆಗಿದೆ. ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐಆರ್ಸಿಟಿಸಿಯ ಈ ಪ್ರವಾಸದ ಪ್ಯಾಕೇಜ್ ಸಮಯದಲ್ಲಿ, ನೀವು 11 ರಾತ್ರಿಗಳು ಮತ್ತು 12 ದಿನಗಳ ಸೇವೆಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ, ಚಾರ್ ಧಾಮ್ನ ಹೊರತಾಗಿ, ಯಾತ್ರಿಗಳಿಗೆ ಉಪಹಾರ ಮತ್ತು ರಾತ್ರಿಯ ಭೋಜನವನ್ನು ನೀಡಲಾಗುವುದು. ಜೊತೆಗೆ ಇತರ ಅನೇಕ ಸ್ಥಳಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯೂ ಇರಲಿದೆ. ಆದಾಗ್ಯೂ, ನೀವು ಸ್ವಂತವಾಗಿ ಮಾಡಬೇಕಾದ ಕೆಲವು ವೆಚ್ಚಗಳಿವೆ. ಈ ಪ್ರವಾಸದ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿ.
Makar Sankranti 2022: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರದಲ್ಲಿ (Haridwar) ಭಕ್ತರು ಗಂಗಾಸ್ನಾನ ಮಾಡುವಂತಿಲ್ಲ. ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರೋನ್ ಪ್ರಕರಣಗಳ ಹಿನ್ನೆಲೆ ಜಿಲ್ಲಾಡಳಿತ ಗಂಗಾ ಸ್ನಾನದ ಮೇಲೆ ನಿಷೇಧ ವಿಧಿಸಿದೆ.
Haridwar Kumbh Mela 2021: ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ದೇವಿ ಗಂಗೆಯ ಆಶಿರ್ವಾದ ಒಂದು ಅವಿರತ ಧಾರೆ, ದೇವಿ ಗಂಗೆಯ ಆಶಿರ್ವಾದ ಪಡೆದುಹೋದರೆ ಕೊರೊನಾ ಹರಡುವುದಿಲ್ಲ. ಇದಕ್ಕಾಗಿ ನಾವು ಹರಿದ್ವಾರದಲ್ಲಿ 16ಕ್ಕೂ ಹೆಚ್ಚು ಘಾಟ್ ಗಳನ್ನು ನಿರ್ಮಿಸಿದ್ದೇವೆ.
ಉತ್ತರಾಖಂಡ್ ದ ಹರಿದ್ವಾರದಲ್ಲಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳೆರಡೂ ಏಪ್ರಿಲ್ 9 ರಿಂದ 15 ರವರೆಗೆ ಮುಚ್ಚಲ್ಪಡುತ್ತದೆ.ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಹರಿದ್ವಾರವು ಮಹಾಕುಂಭ ತೀರ್ಥಯಾತ್ರೆ ನಡೆಸಲು ಸಜ್ಜಾಗಿದ್ದು, ಲಕ್ಷಾಂತರ ಜನರು ಈ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಆದರೆ ವರದಿಗಳ ಪ್ರಕಾರ, ಮಾರ್ಚ್ ಮೊದಲ ವಾರಕ್ಕೆ ಹೋಲಿಸಿದರೆ ಹರಿದ್ವಾರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ವಾರದಲ್ಲಿ ಶೇಕಡಾ 250 ರಷ್ಟು ಹೆಚ್ಚಾಗಿದೆ. ಶುಕ್ರವಾರ (ಮಾರ್ಚ್ 26) ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣವು ಮಾರ್ಚ್ ಮೊದಲ ದಿನಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಕರೋನಾ ಸೋಂಕಿನ ದೃಷ್ಟಿಯಿಂದ ಹರಿದ್ವಾರ ಮಹಾಕುಂಭ 2021 (Haridwar Mahakumbh 2021) ಅನ್ನು ಮೂರೂವರೆ ತಿಂಗಳಿಂದ ಒಂದೂವರೆ ತಿಂಗಳುಗಳಿಗೆ ಇಳಿಸಲಾಗಿದೆ. ಈಗ ಜನಸಂದಣಿಯನ್ನು ಕಡಿಮೆ ಮಾಡಲು ಆಡಳಿತವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹರಿದ್ವಾರ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಜನವರಿ 14 ರಿಂದ ಹರಿದ್ವಾರದಲ್ಲಿ ಕುಂಭಮೇಳ 2021 ಪ್ರಾರಂಭವಾಗಲಿದೆ. ನೀವು ಹರಿದ್ವಾರಕ್ಕೆ ಹೋಗುತ್ತಿದ್ದರೆ ಈ ಪ್ರಸಿದ್ಧ ದೇವಾಲಯಗಳನ್ನು ಭೇಟಿ ಮಾಡಲು ಮರೆಯಬೇಡಿ. ಈ ದೇವಾಲಯಗಳಿಗೆ ಕೇವಲ ಒಂದು ಭಾರಿ ಭೇಟಿ ನೀಡುವುದರಿಂದ ಭಕ್ತರ ಎಲ್ಲಾ ಆಸೆಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ.
ಮಂಗಳವಾರ ಹರಿದ್ವಾರದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ (ಡಬ್ಲ್ಯುಐಹೆಚ್ಜಿ) ತಜ್ಞರು ತಿಳಿಸಿದ್ದಾರೆ. ಸುಮಾರು 40 ವರ್ಷಗಳ ನಂತರ ಹರಿದ್ವಾರದಿಂದ ಇಂತಹ ಭೂಕಂಪನ ಚಟುವಟಿಕೆ ವರದಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಮೇ 31, 2020) ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, 'ಹಾಲಿವುಡ್ನಿಂದ ಹರಿದ್ವಾರದವರೆಗಿನ ಜನರು ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಯೋಗದ ಬಗ್ಗೆ ಗಂಭೀರ ಗಮನ ಹರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.