BBMP ಎಲೆಕ್ಷನ್ ನಡೆಯುತ್ತಾ ನಡೆಯಲ್ವಾ ಅನ್ನೋ ಗೊಂದಲ
ಸದ್ಯ ಎಲೆಕ್ಷನ್ ಆದಷ್ಟು ಬೇಗ ನಡೆಯೋದು ಬಹುತೇಕ ಡೌಟ್
ಸದ್ಯ ಕಾಂಗ್ರೆಸ್ ಬಿಬಿಎಂಪಿ ಮರುವಿಂಗಡಣೆಗೆ ಬಿಗ್ ಪ್ಲಾನ್
ಹೀಗೆ ಮಾಡಿದ್ರೆ ಇದರ ಬಗ್ಗೆ ಗಲಾಟೆಯಾಗುವ ಸಾಧ್ಯತೆ
BBMP ದಕ್ಷಿಣ ವಲಯದ ಮಾಜಿ ಅಧ್ಯಕ್ಷ N.R ರಮೇಶ್ ಹೇಳಿಕೆ
ರಾಜ್ಯದಲ್ಲಿ ಬಿಬಿಎಂಪಿಯೊಂದನ್ನು ಹೊರತು ಪಡಿಸಿ ರಾಜ್ಯದ 10 ಮಹಾನಗರಪಾಲಿಕೆಗಳಿಗೆ ನೇಮಕ ಮಾಡಿದ್ದ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಬಿಬಿಎಂಪಿ ಶಾಲಾಕಾಲೇಜುಗಳ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಹಗರಣ ನಡೆದಿದೆ ಎಂಬ ಅರೋಪ ಕೇಳಿ ಬರ್ತಿದೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದ್ದು, ಫಲಿತಾಂಶದಲ್ಲೂ ಹಿಂದುಳಿದಿದೆ, ಇದಕ್ಕೆ ನಕಲಿ ಶಿಕ್ಷಕರ ಹಾವಳಿಯೇ ಕಾರಣ ಎಂಬ ಮಾತು ಕೇಳಿಬರ್ತಿದೆ.
ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.
ಸುಮಾರು 1.6 ಕೋಟಿ ಜನಸಂಖ್ಯೆ ಹೊಂದಿರುವ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಸದಸ್ಯರ ಆಡಳಿತಾವಧಿ ಪೂರ್ಣಗೊಂಡು ಎರಡುವರೆ ವರ್ಷಗಳಾಗಿದ್ದು, ಇದುವರೆಗೂ ಚುನಾವಣೆ ನಡೆಸೋ ಗೋಜಿಗೆ ಬಿಜೆಪಿ ಸರ್ಕಾರ ಹೋಗಿರ್ಲಿಲ್ಲ, ಇತ್ತ ವಾರ್ಡ್ ವಿಂಗಡಣೆ . ಮೀಸಲಾತಿ ಹೆಸರಲ್ಲಿ ಮುಂದಿನ ಬಾರಿ ಮೇಯರ್ ಗದ್ದುಗೆ ಏರ ಬೇಕು ಅಂತ ಪ್ಲಾನ್ ಮಾಡಿದ ಬಿಜೆಪಿಗೆ ಈಗ ಮುಖಭಂಗವಾಗಿದೆ,ಇತ್ತ ಹೊಸ ಸರ್ಕಾರ ಮೀಸಲಾತಿ ಬಗ್ಗೆ ಮರು ಪರಿಶೀಲನೆಗೆ ಸಮಿತಿ ರಚನೆ ಮಾಡಿ ಅದೇಶ ಹೊರಡಿಸಿದೆ.
ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಅವರ ಗ್ಯಾರೆಂಟಿ ಘೋಷಣೆಗಳೂ ಕೂಡ ಪ್ರಮುಖ ಪಾತ್ರ ವಹಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯೊಡತಿಗೆ 2000 ಸಹಾಯಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ಕರೆಂಟ್, ಅನ್ನಭಾಗ್ಯ ಮತ್ತು ಯುವನಿಧಿ ವರ್ಕ್ ಔಟ್ ಆಗಿದೆ. ಆದ್ರೆ, ಈ ಭರವಸೆಗಳನ್ನೆಲ್ಲಾ ಈಡೇರಿಸಬೇಕು ಅಂದ್ರೆ ರಾಜ್ಯದ ಬೊಕ್ಕಸದ ಮೇಲೆ ತೀವ್ರಹೊರೆ ಬೀಳ್ತಿದ್ದು, ಇದನ್ನು ಸರಿದೂಗಿಸೋಕೆ ಕಾಂಗ್ರೆಸ್ ಬಿಬಿಎಂಪಿ ಮೇಲೆ ಕಣ್ಣು ಹಾಕಿದೆ.
ಆ ಮಂತ್ರಿಗೆ, ಈ ಮಂತ್ರಿಗೆ, ಶಾಸಕರಿಗೆ, ಅವರಿಗೆ ಇವರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಬಿಎಂಪಿಯ ಉನ್ನತ ಮಟ್ಟದ ಸಭೆಯಲ್ಲಿ ಖಡಕ್ ಆಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಮುಳುಗಿ ಯುವತಿ ಮೃತಪಟ್ಟ ಹಿನ್ನಲೆ
ಅಂಡರ್ ಪಾಸ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಜಾರಿಗೆ ಮುಂದಾದ ಬಿಬಿಎಂಪಿ
ನಗರದ ಅಂಡರ್ಪಾಸ್ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆಹಾಕಿದ ಪಾಲಿಕೆ
ಅಂಡರ್ಪಾಸ್ಗಳಲ್ಲಿ ಸಿಸಿಟಿವಿ ಮೂಲಕ ನಿಗಾವಹಿಸುವಂತೆ ಡಿಸಿಎಂ ಸೂಚನೆ
ಮಳೆಯ ರೌದ್ರಾವತಾರಕ್ಕೆ ಟೆಕ್ಕಿ ಯುವತಿ ಸಾವು. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಡರ್ ಪಾಸ್ನಲ್ಲಿ ನೀರು ಆರೋಪ. ಮಳೆ ನೀರು ಸರಾಗ ಹೋಗಲು ಕ್ರಮ ಕೈಗೊಳ್ಳದ ಆರೋಪ. ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಬಿಬಿಎಂಪಿ ವಿರುದ್ಧ ಎಫ್ಐಆರ್. ಹಲಸೂರು ಗೇಟ್ ಠಾಣೆಗೆ ದೂರು ನೀಡಿದ ಮೃತಳ ಸಹೋದರ.
ಭಾನುವಾರದ ಬಿರುಮಳೆ BBMP ವ್ಯಾಪ್ತಿಯಲ್ಲಿ ಭಾರೀ ಅನಾಹುತ ಉಂಟಾಗಿದೆ. ಮುಂಗಾರು ಮಳೆಗೆ ಮೊದಲ ಬಲಿಯಾಗಿದೆ. ಕೆ.ಆರ್.ಸರ್ಕಲ್ ಅಂಡರ್ಪಾಸ್ನಲ್ಲಿ ಕಾರೊಂದು ಮುಳುಗಿ ಆಂಧ್ರಪ್ರದೇಶ ಮೂಲದ ಯುವತಿ ಸಾವಿಗೀಡಾಗಿದ್ದಳೆ. ಮೃತರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಿಸಿದ್ದು ವೈದ್ಯರ ನಿರ್ಲಕ್ಷ ವಹಿಸಿದ್ದರೆ ಕ್ರಮ ಗ್ಯಾರೆಂಟಿ ಅಂದ್ರು.
ರಾಜಧಾನಿಯಲ್ಲಿ ವರುಣನ ಆರ್ಭಟಕ್ಕೆ ವಾಹನ ಸವಾರರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೆಲವೆಡೆ ತಗ್ಗು ಪ್ರದೇಶಕ್ಕೆ ನುಗ್ಗಿದ ಮಳೆ ನೀರಿನಿಂದ ಜನ ತೀವ್ರವಾಗಿ ಪರದಾಡಿದ್ದಾರೆ. ಏಕಾಏಕಿ ಸುರಿದ ಮಳೆ, ಬಿರುಗಾಳಿ ಮತ್ತು ಆಲಿ ಕಲ್ಲಿನಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ಸಮಸ್ಯೆವುಂಟಾಗಿದೆ.
ಬೆಂಗಳೂರಿನಲ್ಲಿ ಮಳೆ ಅವಾಂತರ.. ಮಹಿಳೆ ಸಾವು ವಿಚಾರ. ಪ್ರಕೃತಿ ಯಾರ ಕೈಯಲ್ಲಿ ಇಲ್ಲ, ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ ಇದೆ ತೊಂದರೆ ಇದೆ ಅದನ್ನು ಸರಿ ಮಾಡಬೇಕು. ಸರಿ ಮಾಡುವ ಕಾಲ ಬಂದಿದೆ, ನಾವು ಸರಿ ಮಾಡುತ್ತೇವೆ-ಡಿಕೆಶಿ
BBMP Action To Increase Forest Area: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೂನ್ 5ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲು ಮುಖ್ಯ ಆಯುಕ್ತರು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಿಬಿಎಂಪಿ ಶಾಲೆಗಳಲ್ಲಿ ಪಾಲಿಕೆ ಮೇಜರ್ ಆಪರೇಷನ್ ಶುರು ಮಾಡಿದೆ.ಗುಣಮಟ್ಟ ಶಿಕ್ಷಣ ನೆಪದಲ್ಲಿ 200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.ಬಿಬಿಎಂಪಿ ಈ ನಿರ್ಧಾರ ದಶಕಗಳ ಕಾಲ ಕೆಲಸ ಮಾಡಿದ ಶಿಕ್ಷಕರನ್ನ ಅತಂತ್ರ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.