ಹಂಪಿ ಉತ್ಸವದಲ್ಲಿ ಸೌಂಡ್ ಸಿಸ್ಟಮ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ತಾಂತ್ರಿಕ ಸಮಸ್ಯೆಯಿಂದ 15 ನಿಮಿಷ ಕಾರ್ಯಕ್ರಮ ಸ್ಥಗಿತವಾಗಿತು.. ಈ ಹಿನ್ನೆಲೆ ಸಚಿವ ಆನಂದ್ ಸಿಂಗ್ ಸೌಂಡ್ ಟೆಕ್ನಾಲಜಿ ತಂಡವನ್ನು ತರಟೆ ತೆಗೆದುಕೊಂಡಿದ್ದಾರೆ..
ಈ ಉತ್ಸವಗಳು ನಿನ್ನೆ, ಮೊನ್ನೆಯಿಂದ ಪ್ರಾರಂಭವಾಗಿರೋದಲ್ಲ ಎಂದು ಹಂಪಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಆನಂದ್ ಸಿಂಗ್ ಹೇಳಿದ್ದಾರೆ.. ವಿಜಯನಗರ ಅನ್ನೋದೇ ಒಂದು ಶಕ್ತಿ, ಬಹಳ ದೊಡ್ಡ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ವಿಜಯನಗರ ಸಾಮ್ರಾಜ್ಯ ಇಡೀ ಪ್ರಪಂಚಕ್ಕೆ ಫೇಮಸ್ ಎಂದಿದ್ದಾರೆ.
ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು. ಉತ್ತರ ಕರ್ನಾಟಕಕ್ಕೆ ವಿಜಯನಗರವೇ ರಾಜಧಾನಿ. ಪ್ರತ್ಯೇಕ ರಾಜ್ಯವಾದ್ರೆ ಅದಕ್ಕೆ ರಾಜಧಾನಿ ವಿಜಯನಗರ ಆಗಲಿದೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಮತ್ತು 10 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಗಿಫ್ಟ್ ನೀಡಿದ್ದಾರೆ.
ಕರಾವಳಿ ನಿಯಂತ್ರಣ ವಲಯದ(ಸಿಆರ್ಝೆಡ್) 2019ರ ಪ್ರಸ್ತಾವನೆಗೆ ಅನುಮೋದನೆ ಪಡೆದ ದೇಶದ ಎರಡನೇ ಹಾಗೂ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಈ ಪ್ರದೇಶಗಳಲ್ಲಿ ಇನ್ಮುಂದೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶಗಳು ದೊರೆತಂತಾಗಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಕ್ವೆಂಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಚಿವ ಆನಂದ್ ಸಿಂಗ್ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದೆ. ಹೊಸಪೇಟೆಯ ನಗರಸಭೆ ಸದಸ್ಯ ಅಬ್ದುಲ್ ಖದೀರ್ ಆರೋಪ ಮಾಡಿದ್ದು ಆನಂದ್ ಸಿಂಗ್ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿಲ್ಲಾ ಅಂದ್ರೆ ನಾನು ರಾಜೀನಾಮೆ ಕೊಡ್ತೀನಿ. ಒತ್ತುವರಿ ಆಗಿದ್ರೆ, ನೀವು ರಾಜೀನಾಮೆ ಕೊಡಿ ಎಂದು ಆನಂದ್ ಸಿಂಗ್ಗೆ ಸಲಾವ್ ಹಾಕಿದ್ದಾರೆ.
ಆಂಜನೇಯ ಶೂದ್ರ ಅದಕ್ಕೆ ಅಭಿವೃದ್ಧಿ ಮಾಡ್ತಿಲ್ಲ ಎಂಬ ಮಾಜಿ ಸಂಸದ ಉಗ್ರಪ್ಪ ಹೇಳಿಕೆಗೆ ಸಚಿವ ಆನಂದ್ ಸಿಂಗ್ ತಿರುಗೇಟು ನೀಡಿದ್ದಾರೆ. ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100ಕ್ಕೆ ನೂರು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ ಅಂತ ಹೇಳಿದ್ರು.
ಇನ್ನು ಜೋಗ ಜಲಪಾತ(Jog Falls)ದಲ್ಲಿ 185 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಅದರಂತೆ ಹಂಪಿ, ಹಳೇಬೀಡು, ಬೇಲೂರು, ಬಾದಾಮಿಯಲ್ಲಿ ಪ್ರವಾಸೋದ್ಯಮದ ಇಲಾಖೆಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದು ವಿವರಿಸಿದರು.
ಉಸ್ತುವಾರಿಯಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ಸಂಧರ್ಭದಲ್ಲಿ ನನಗೆ ದೊರೆತಂತಹ ಆತ್ಮೀಯ ಸ್ವಾಗತಕ್ಕೆ ಬಹಳ ಆಭಾರಿಯಾಗಿದ್ದೇನೆ. ಇಂದು ನನಗೆ ಗಂಡನ ಮನೆಯಿಂದ ತವರು ಮನೆಗೆ ಬಂದಂತಹ ಆತ್ಮಿಯ ಸ್ವಾಗತ ದೊರೆಯಿತು ಎಂದು ಸಚಿವರು ಸಂತಸ ವ್ಯಕ್ತ ಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.