ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಸಿಬಿಐ ಕಚೇರಿ ಎದುರು ವ್ಯಾಪಕ ಪ್ರತಿಭಟನೆ ಹಮ್ಮಿಕೊಂಡಿದೆ. ನವದೆಹಲಿಯಲ್ಲಿ 'ಸಿಬಿಐ ಘೇರಾವೋ' ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚಾಲನೆ ದೊರೆಯಿತು.
ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ನಡೆಯುತ್ತಿರುವ ತನಿಖೆಯಿಂದ ಸರ್ಕಾರ ಭೀತಿಗೆ ಸಿಲುಕಿದೆ ಆದ್ದರಿಂದ ಅವರು ಸಿಬಿಐ ಮುಖ್ಯಸ್ಥ ಅಲೋಕ್ ಕುಮಾರ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಲೋಕಸಭೆಯಲ್ಲಿ ಮಾತನಾಡುತ್ತಾ, ವಿಜಯ್ ಮಲ್ಯ, ನಿರಾವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ 31 ಉದ್ಯಮಿಗಳು ಸಿಬಿಐ ಸಂಬಂಧಿಸಿದ ವಿಷಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.
ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ 12,600 ಕೋಟಿ ರೂಪಾಯಿಗಳಿಗೆ ಪಿಎನ್ಬಿಯಿಂದ ಲೂಟಿ ಮಾಡಿದ ಬಳಿಕ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಾಗಿದೆ. ಇತ್ತೀಚಿನ ಪ್ರಕರಣದಲ್ಲಿ ಸಿಬಿಐ ಬುಧವಾರ 515.15 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದೆ.
ಬ್ಯಾಂಕ್ಗಳಿಗೆ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರದ ಉದ್ಯಮಿ ವಿಕ್ರಂ ಕೊಠಾರಿ ಅವರ ಮನೆಯಲ್ಲಿ 20ಗಂಟೆಗೂ ಹೆಚ್ಚು ಸಮಯದಿಂದ ಠಿಕಾಣಿ ಹೂಡಿರುವ ಸಿಬಿಐ ಪರಿಶೀಲನೆ ನಡೆಸುತ್ತಿದ್ದಾರೆ.
ವಿವಿಧ ಬ್ಯಾಂಕುಗಳಲ್ಲಿ 3,695 ಕೋಟಿ ರೂ.ಸಾಲ ಪಡೆದು ವಂಚಿಸಿರುವ ಕುರಿತು ಪೆನ್ ತಯಾರಕ ಕಂಪನಿ ರೋಟೊಮ್ಯಾಕ್ ಗ್ಲೋಬಲ್ ಅಂಡ್ ಅಫೀಶಿಯಲ್ಸ್ ಪ್ರೈವೇಟ್ ಲಿ. ವಿರುದ್ಧ ಸಿಬಿಐ ದೂರು ದಾಖಲಿಸಿದೆ.
ಅಪರಾಧಿಯು ಪೋಷಕರು-ಶಿಕ್ಷಕ ಸಭೆ ಮತ್ತು ಪರೀಕ್ಷೆಯನ್ನು ಮುಂದೂಡಬಹುದೆಂದು ಯೋಚಿಸಿ, ಪ್ರದ್ಯುಮನ್ ಎಂಬ ಏಳು ವರ್ಷದ ಬಾಲಕನನ್ನು ಶಾಲೆಯ ಶೌಚಾಲಯದಲ್ಲಿ ಕೊಲೆ ಮಾಡಿರುವುದಾಗಿ ಸಿಬಿಐ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.