2022ರ ಆಗಸ್ಟ್ 15 ರೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಶೀಘ್ರದಲ್ಲೇ ಭಾರತೀಯ ರೈಲ್ವೆ ದೇಶವನ್ನು ಸಂಪರ್ಕಿಸುತ್ತದೆ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಕೆಲಸ ಸ್ಥಗಿತಗೊಂಡಿತ್ತು ಎಂದು ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳು ಸಂಪೂರ್ಣವಾಗಿ ಭಾರತಕ್ಕೆ ಆಂತರಿಕ ವಿಷಯವಾಗಿದೆ, ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎಂದು ಚೀನಾ ಗೌರವಿಸಬೇಕು ಎಂದು ಸರ್ಕಾರ ಹೇಳಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತ ಬಯಸದಿದ್ದರೆ ಕಾಶ್ಮೀರ ವಿಚಾರವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ ಭಾರೀ ಮುಖಭಂಗವಾಗಿದೆ.
ಪಾಕಿಸ್ತಾನವು ತನಗೆ ಒಳ್ಳೆಯದನ್ನು ಬಯಸಿದರೆ, ಅದು ನಮಗೆ ಪಿಒಕೆ ಅನ್ನು ಹಸ್ತಾಂತರಿಸಬೇಕು. ಪಾಕಿಸ್ತಾನದ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಇಮ್ರಾನ್ ಖಾನ್ ಈ ಕೆಲಸವನ್ನು ಮಾಡಲೇಬೇಕು ಎಂದು ರಾಮದಾಸ್ ಅಥಾವಾಲೆ ಹೇಳಿದ್ದಾರೆ.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿರುವ ಭಾರತ ಸರ್ಕಾರದ ವಿರುದ್ಧ ವಿಶ್ವದ ಗಮನ ಸೆಳೆಯಲು ಮುಜಫರಾಬಾದ್ನಲ್ಲಿ ನಡೆಯಲಿರುವ 'ಮೆಗಾ ರ್ಯಾಲಿ'ವೊಂದನ್ನು ಉದ್ದೇಶಿಸಿ ಮಾತನಾಡುವುದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದರು.
ರಾಜ್ಯದಲ್ಲಿ ಸೇಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಅಡಿಯಲ್ಲಿ ಸರ್ಕಾರವು ನೇರವಾಗಿ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಈಗ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮುಜಫರಾಬಾದ್ನಲ್ಲಿ ಬೃಹತ್ ರ್ಯಾಲಿ ನಡೆಸಲು ಮುಂದಾಗಿದ್ದು ಈ ವಿಚಾರವನ್ನು ಇಮ್ರಾನ್ ಖಾನ್ ಸ್ವತಃ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಭಾರತದೊಂದಿಗೆ ವ್ಯಾಪಾರ-ವ್ಯವಹಾರ ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಈಗ ಭಾರತದಿಂದ ಜೀವ ಉಳಿಸುವ ಔಷಧಿಗಳನ್ನು ಬಯಸಿದೆ. ಪಾಕಿಸ್ತಾನದ ಫೆಡರಲ್ ಸರ್ಕಾರ ಸೋಮವಾರ ಈ ನಿರ್ಧಾರವನ್ನು ತೆಗೆದುಕೊಂಡಿತು.
ದ್ವಿಪಕ್ಷೀಯ ಮಾತುಕತೆಗಾಗಿ ಭಾರತದ ಪ್ರಸ್ತಾಪವನ್ನು ಷರತ್ತು ಬದ್ಧ ಮಾತುಕತೆ ಎಂದು ಕರೆದ ನಂತರ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಭಾನುವಾರ ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಹಿಂತೆಗೆಯುವವರೆಗೆ ಭಾರತದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಬೆಂಬಲಿತ ಶಾಂತಿಯುತ ನಿರ್ಣಯವನ್ನು ಅಮೇರಿಕಾ ಬೆಂಬಲಿಸಬೇಕು ಎಂದು ಯುಎಸ್ ಸೆನೆಟರ್ ಮತ್ತು ಅಧ್ಯಕ್ಷೀಯ ಸ್ಪರ್ಧಿ ಬರ್ನಿ ಸ್ಯಾಂಡರ್ಸ್ ಶನಿವಾರ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಕಾಶ್ಮೀರದ ಬಗ್ಗೆ ಯಾವುದೇ ನಿಲುವು ಇಲ್ಲ ಮತ್ತು ಪ್ರಸ್ತುತ ವಿಷಯದಲ್ಲಿ ಯಾವುದೇ ದೇಶವು ಅದನ್ನು ಬೆಂಬಲಿಸುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಬೇಕಿದೆ ಎಂದು ಪುನರುಚ್ಚರಿಸಿದ ರಷ್ಯಾ ದಕ್ಷಿಣ ಏಷ್ಯಾದ ಎರಡೂ ದೇಶಗಳು ಮಧ್ಯಸ್ಥಿಕೆ ಕೇಳದ ಹೊರತು ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜಮ್ಮು ಕಾಶ್ಮೀರ ವಿಷಯದ ಬಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.