INDW vs IREW: ಪುರುಷರನ್ನೂ ಮೀರಿಸಿದ ಭಾರತ ಮಹಿಳಾ ತಂಡ; ಏಕದಿನ ಕ್ರಿಕೆಟ್​ನಲ್ಲಿ 435 ರನ್ ಸಿಡಿಸಿ ಚರಿತ್ರೆ ಸೃಷ್ಟಿ!!

INDW vs IREW: ಮಹಿಳಾ ತಂಡ ದಾಖಲಿರುವ 435 ರನ್‌ಗಳ ಈ ಬೃಹತ್‌ ಮೊತ್ತವು ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡರಲ್ಲೂ ಭಾರತದ ಅತ್ಯಧಿಕ ಏಕದಿನ ಸ್ಕೋರ್ ಆಗಿದೆ. ಇದೇ ಮೊದಲ ಬಾರಿಗೆ ಭಾರತದ ಮಹಿಳಾ ತಂಡವು 400ರ ಗಡಿ ದಾಟಿದ ದಾಖಲೆ ಮಾಡಿತು.

Written by - Puttaraj K Alur | Last Updated : Jan 15, 2025, 10:30 PM IST
  • ಸ್ಫೋಟಕ ಶತಕ ಸಿಡಿಸಿದ ಸ್ಮೃತಿ ಮಂದಾನ ಮತ್ತು ಪ್ರತಿಕಾ ರಾವಲ್
  • ಪುರುಷರನ್ನೂ ಮೀರಿಸಿದ ಭಾರತದ ಮಹಿಳಾ ತಂಡದಿಂದ ಚರಿತ್ರೆ ಸೃಷ್ಟಿ
  • ಏಕದಿನ ಕ್ರಿಕೆಟ್​ನಲ್ಲಿ 435 ರನ್ ಗಳಿಸಿ ಹೊಸ ದಾಖಲೆ ನಿರ್ಮಾಣ
INDW vs IREW: ಪುರುಷರನ್ನೂ ಮೀರಿಸಿದ ಭಾರತ ಮಹಿಳಾ ತಂಡ; ಏಕದಿನ ಕ್ರಿಕೆಟ್​ನಲ್ಲಿ 435 ರನ್ ಸಿಡಿಸಿ ಚರಿತ್ರೆ ಸೃಷ್ಟಿ!! title=
ಭಾರತದ ಮಹಿಳಾ ತಂಡದಿಂದ ಚರಿತ್ರೆ ಸೃಷ್ಟಿ!!

India Women vs Ireland Women: ಐರ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹೊಸ ಇತಿಹಾಸವನ್ನ ನಿರ್ಮಿಸಿದೆ. ರಾಜ್‌ಕೋಟ್‌ನ ನಿರಂಜನ್‌ ಶಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡವು ಪುರುಷರನ್ನೂ ಮೀರಿಸಿ ಹೊಸ ಚರಿತ್ರೆಯನ್ನ ಸೃಷ್ಟಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ ಅಂದರೆ 435 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 435 ರನ್‌ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಪ್ರತಿಕಾ ರಾವಲ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಮೊದಲ ವಿಕೆಟ್‌ಗೆ ಈ ಜೋಡಿ 233 ರನ್‌ಗಳ ಜೊತೆಯಾಟವಾಡಿತು. ಪ್ರತಿಕಾ ರಾವಲ್‌ 129 ಎಸೆತಗಳಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್‌ ಇದ್ದ 154 ರನ್‌ ಸಿಡಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಸ್ಮೃತಿ ಮಂದಾನ 80 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ ಇದ್ದ 135 ರನ್‌ ಗಳಿಸಿದರು. ಈ ಜೋಡಿಯ ಸ್ಫೋಟಕ ಆಟಕ್ಕೆ ಐರ್ಲೆಂಡ್ ಆಟಗಾರ್ತಿಯರು ಸುಸ್ತಾಗಿ ಹೋಗಿದ್ದರು. ಇನ್ನುಳಿದಂತೆ ರಿಚಾ ಘೋಷ್‌ 59, ತೇಜಲ್ ಹಸಬ್ನಿಸ್ 28 ಮತ್ತು ಹರ್ಲೀನ್ ಡಿಯೋಲ್ 15 ರನ್‌ ಗಳಿಸಿದರು. 

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್‌ಶಾಕ್..‌ ಪಂದ್ಯದ ಮಧ್ಯದಲ್ಲೇ ತಂಡ ತೊರೆದ ಸ್ಟಾರ್‌ ಆಟಗಾರ! ಅಭಿಮಾನಿಗಳಲ್ಲಿ ಆತಂಕ..

ಭಾರತ ತಂಡ ನೀಡಿದ ಗುರಿ ಬೆನ್ನತ್ತಿದ ಐರ್ಲೆಂಡ್‌ 31.4 ಓವರ್‌ಗಳಲ್ಲಿ ಕೇವಲ 131 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಬರೋಬ್ಬರಿ 304 ರನ್‌ಗಳ ಹೀನಾಯ ಸೋಲು ಕಂಡಿತು. ಮಹಿಳಾ ತಂಡ ದಾಖಲಿರುವ 435 ರನ್‌ಗಳ ಈ ಬೃಹತ್‌ ಮೊತ್ತವು ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡರಲ್ಲೂ ಭಾರತದ ಅತ್ಯಧಿಕ ಏಕದಿನ ಸ್ಕೋರ್ ಆಗಿದೆ. ಇದೇ ಮೊದಲ ಬಾರಿಗೆ ಭಾರತದ ಮಹಿಳಾ ತಂಡವು 400ರ ಗಡಿ ದಾಟಿದ ದಾಖಲೆ ಮಾಡಿತು. ಭಾರತ ಪುರುಷರ ತಂಡವು 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಿಗಿದತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 418 ರನ್‌ ಗಳಿಸಿದ್ದು ದಾಖಲೆಯಾಗಿತ್ತು. ಇದೀಗ ಮಹಿಳಾ ತಂಡವು ಈ ದಾಖಲೆಯನ್ನೇ ಬ್ರೇಕ್‌ ಮಾಡಿದೆ.  

ಏಕದಿನದಲ್ಲಿ ಅತ್ಯಧಿಕ ರನ್‌ ಗಳಿಸಿದ ಭಾರತೀಯ ಆಟಗಾರ್ತಿಯರು  

188 - ದೀಪ್ತಿ ಶರ್ಮಾ vs ಐರ್ಲೆಂಡ್, ಪೊಚೆಫ್‌ಸ್ಟ್ರೂಮ್, 2017
171* - ಹರ್ಮನ್‌ಪ್ರೀತ್ ಕೌರ್ vs ಆಸ್ಟ್ರೇಲಿಯಾ-ವೆಸ್ಟ್, ಡರ್ಬಿ, 2017
154 - ಪ್ರತೀಕ್ ರಾವಲ್ vs ಐರ್ಲೆಂಡ್, ರಾಜ್‌ಕೋಟ್, 2025
143* – ಹರ್ಮನ್‌ಪ್ರೀತ್ ಕೌರ್ vs ಇಂಗ್ಲೆಂಡ್, ಕ್ಯಾಂಟರ್ಬರಿ, 2022
138* - ಜಯಾ ಶರ್ಮಾ vs ಪಾಕಿಸ್ತಾನ, ಕರಾಚಿ, 2005

ಇದನ್ನೂ ಓದಿ: ಕೊನೆಯ ಟೆಸ್ಟ್‌ ಪಂದ್ಯಕ್ಕೂ ಮುನ್ನ ತಂಡಕ್ಕೆ ಗುಡ್‌ ಬೈ ಹೇಳಿದ ರೋಹಿತ್‌ ಶರ್ಮಾ! ನಾಯಕನ ನಿರ್ಧಾರಕ್ಕೆ ರಿಷಬ್‌ ಪಂತ್‌ ಭಾವುಕ?!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News