Virender Sehwag Love Story: ವೀರೇಂದ್ರ ಸೆಹ್ವಾಗ್ ಅವರು ಬಾಲ್ಯದಲ್ಲಿಯೇ ತಮ್ಮ ಪತ್ನಿ ಆರತಿ ಅವರನ್ನು ಭೇಟಿಯಾಗಿದ್ದರಂತೆ. ಇವರಿಬ್ಬರ ಲವ್ ಸ್ಟೋರಿ ಆಸಕ್ತಿದಾಯಕವಾಗಿದ್ದು ಮುಂದೆ ಸಂಪೂರ್ಣ ಮಾಹಿತಿ ತಿಳಿಯೋಣ. ವೀರೇಂದ್ರ ಸೆಹ್ವಾಗ್ ಕೇವಲ 7 ವರ್ಷದವನಿದ್ದಾಗ ಆರತಿ ಅಹ್ಲಾವತ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರಸಂಬಂಧಿಯನ್ನು ಮದುವೆಯಾಗಿದ್ದ ಕಾರಣದಿಂದ ಈ ಎರಡೂ ಕುಟುಂಬಗಳು ಸಂಬಂಧ ಹೊಂದಿದ್ದವು.
ಇದನ್ನೂ ಓದಿ: ಬಿಗ್‌ಬಾಸ್‌ನ ಮೊದಲನೇ ಫೈನಲಿಸ್ಟ್ ಆಗಿರುವ ಹನುಮಂತು ಅವರ ಮನೆ ಹೇಗಿದೆ ಗೊತ್ತಾ..?
ವೀರೇಂದ್ರ ಸೆಹ್ವಾಗ್ ಮತ್ತು ಆರತಿಯ ವಿವಾಹವು ಕುಟುಂಬದೊಳಗೆ ನಡೆಯಿತು ಎಂದು ಆರತಿಯ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು. "ಇದು ಪ್ರೇಮ ವಿವಾಹವಾಗಿತ್ತು. ನಮ್ಮ ಚಿಕ್ಕಮ್ಮ (ತಂದೆಯ ತಂಗಿ) ಸೆಹ್ವಾಗ್ ಅವರ ಕುಟುಂಬದ ಸೋದರಸಂಬಂಧಿಯನ್ನು ಮದುವೆಯಾಗಿದ್ದರು" ಎಂದು ಹೇಳಿದ್ದರು.
ಸೆಹ್ವಾಗ್ ಮತ್ತು ಆರತಿ 2004 ರಲ್ಲಿ ವಿವಾಹವಾದರು. ಈಗ ಮದುವೆಯಾಗಿ ಸುಮಾರು 21 ವರ್ಷಗಳಾಗಿವೆ. ಆರತಿ ಮತ್ತು ವೀರೇಂದ್ರ ಸೆಹ್ವಾಗ್ ದಂಪತಿಗಳು ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಮಕ್ಕಳ ಪೋಷಕರು. ವಿಶೇಷ ಅಂದ್ರೆ ಸೆಹ್ವಾಗ್ ಅವರ ಮದುವೆ ಬಿಜೆಪಿಯ ಮಾಜಿ ದಿಗ್ಗಜರಾದ ದಿವಂಗತ ಅರುಣ್ ಜೇಟ್ಲಿ ಅವರ ಸರ್ಕಾರಿ ಬಂಗಲೆಯಲ್ಲಿ ನಡೆದಿತ್ತು. 2002 ರಲ್ಲಿ, ಸೆಹ್ವಾಗ್ ತಮಾಷೆಯಾಗಿ ಆರತಿ ಬಳಿ, ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿದ್ದರಂತೆ. ಇದಕ್ಕೆ ಆರತಿ ಬಹಳ ಗಂಭೀರವಾಗಿ ಪ್ರತಿಕ್ರಿಯಿಸಿ, "ಹೌದು"ಎಂದು ಹೇಳಿದರು. ವೀರು ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಈ ಜೋಡಿ ಮದುವೆಗೆ ಸಿದ್ಧವಾಗಿತ್ತು. ಆದರೆ ಸೆಹ್ವಾಗ್ ತಮ್ಮ ಕುಟುಂಬವನ್ನು ಮನವೊಲಿಸಲು ಬಹಳ ಸಮಯ ತೆಗೆದುಕೊಂಡರು. ಸಂದರ್ಶನವೊಂದರಲ್ಲಿ ಸೆಹ್ವಾಗ್ ಈ ಬಗ್ಗೆ ಹೇಳಿದ್ದು, "ನಮ್ಮ ಕುಟುಂಬದಲ್ಲಿ, ಮದುವೆಗಳು ಹತ್ತಿರದ ಸಂಬಂಧಿಕರೊಳಗೆ ನಡೆಯುವುದಿಲ್ಲ. ಹೀಗಾಗಿ ನನ್ನ ಹೆತ್ತವರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಒಪ್ಪಿಗೆ ಕೊಟ್ಟಿದ್ದರು" ಎಂದು ಹೇಳಿದ್ದರು.
ಇದನ್ನೂ ಓದಿ: ಅನ್ನ ಬಿಟ್ಟು ಚಪಾತಿ ತಿಂದ್ರೆ ಹೊಟ್ಟೆಯ ಬೊಜ್ಜು ಕರಗುತ್ತಾ? ತೂಕ ಇಳಿಸಲು ಈ ಟಿಪ್ಸ್ ಫಾಲೋ ಮಾಡ್ಲೇಬೇಕು!!
"ವೀರೂ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಮನೆಯಲ್ಲಿಯೂ ಈ ಮದುವೆಯಿಂದ ಅನೇಕರಿಗೆ ಅಸಮಾಧಾನವಿತ್ತು. ಆದರೆ ನಮ್ಮ ಪ್ರೀತಿಗೆ ಮಣಿದು ಎರಡೂ ಕುಟುಂಬಗಳು 2004ರ ಏಪ್ರಿಲ್ ತಿಂಗಳಲ್ಲಿ ಮದುವೆ ಮಾಡಿಸಿದ್ದರು" ಎಂದು ಆರತಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ