Mohammad Kaif on Virat Kohli: ಸ್ಟೈಲಿಶ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಆರ್’ಸಿಬಿ ಪ್ಲೇಆಫ್’ನಲ್ಲಿ ಸ್ಥಾನವನ್ನು ನಿರ್ಧರಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಐಪಿಎಲ್ ತರಬೇತಿ ಶಿಬಿರವನ್ನು ಪ್ರಾರಂಭಿಸಿದೆ. 2024 ರ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 22 ರಂದು ಚೆನ್ನೈನಲ್ಲಿ ಆಡಲಿದೆ.
ಈ ಋತುವಿನ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಮೊಹಮ್ಮದ್ ಕೈಫ್ ವಿರಾಟ್ ಕೊಹ್ಲಿಯ ಗಮನಾರ್ಹ ಫಾರ್ಮ್ ಮತ್ತು RCB ನ ಪ್ಲೇಆಫ್ ಆಕಾಂಕ್ಷೆಗಳಲ್ಲಿ ಅದರ ಪ್ರಮುಖ ಪಾತ್ರವನ್ನು ವಿವರಿಸಿದ್ದಾರೆ, “ಗ್ರೀನ್ ಮತ್ತು ಮ್ಯಾಕ್ಸ್‌ವೆಲ್’ನಂತಹ ಇತರ ಗಮನಾರ್ಹ ಆಟಗಾರರ ಉಪಸ್ಥಿತಿಯ ಹೊರತಾಗಿಯೂ, ಕೊಹ್ಲಿಯ ಸ್ಥಿರತೆ ತಂಡದ ಯಶಸ್ಸಿಗೆ ಪ್ರಮುಖವಾಗಿದೆ. ವಿರಾಟ್ ಕೊಹ್ಲಿ ಕಳೆದ 1-2 ವರ್ಷಗಳಿಂದ ಅದ್ಭುತ ಕ್ರಿಕೆಟ್ ಆಡುತ್ತಿದ್ದಾ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ” ಎಂದು ಹೇಳಿದ್ದಾರೆ.
“ಏಷ್ಯಾ ಕಪ್ ಸಮಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದು ನನಗೆ ನೆನಪಿದೆ… ಅಂದಿನಿಂದ ಅವರು ಹಿಂತಿರುಗಿ ನೋಡಿಲ್ಲ. ಅಂದಿನಿಂದ ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿಯಂತಹ ಆಟಗಾರ ಫಾರ್ಮ್’ನಲ್ಲಿರುವಾಗ, ಪ್ರತಿ ಪಂದ್ಯದಲ್ಲೂ ಹೇಗೆ ರನ್ ಗಳಿಸಬೇಕೆಂದು ಅವರಿಗೆ ತಿಳಿದಿದೆ. ವಿಶ್ವಕಪ್’ನಲ್ಲಿ ಅತ್ಯುತ್ತಮ ಆಟಗಾರರಾಗಿದ್ದರು. ಹಾಗಾಗಿ ಅವರು ಈ ಅದ್ಭುತ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.
ಇದನ್ನೂ ಓದಿ: ಅನುಷ್ಕಾಗೂ ಮುನ್ನ ಈ 6 ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದರಲ್ಲಿ ಒಬ್ಬಳು ಕರ್ನಾಟಕದ ಖ್ಯಾತ ಹೀರೋಯಿನ್
“ವಿರಾಟ್ ಕೊಹ್ಲಿಯ ಒಂದು ವಿಶೇಷ ವಿಷಯವೆಂದರೆ ಅವರು ಕಂಬ್ಯಾಕ್ ಮಾಡಿದಾಗಲೆಲ್ಲಾ ಉತ್ತಮವಾಗಿ ಆಡುತ್ತಾರೆ. ಹೆಚ್ಚಿನ ಆಟಗಾರರು ಫಾರ್ಮ್’ನಲ್ಲಿ ಉಳಿಯಲು ಮತ್ತು ನಿಯಮಿತವಾಗಿ ಆಡಲು ಕ್ರಿಕೆಟ್’ನೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ, ಆದರೆ ವಿರಾಟ್ ಕೊಹ್ಲಿ ಹಾಗಲ್ಲ, ಕಂಬ್ಯಾಕ್ ಯಾವತ್ತೂ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಆದರೆ ವಿರಾಟ್ ಕೊಹ್ಲಿ ಇದ್ದರೆ ಮಾತ್ರ ಆರ್‌ಸಿಬಿಗೆ ಪ್ಲೇಆಫ್’ನಲ್ಲಿ ಯಾವ ಸ್ಥಾನ ಸಿಗಬಹುದು ಎಂಬುದನ್ನು ನಿರ್ಧರಿಸುತ್ತದೆ. ಆರ್‌ಸಿಬಿಯನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಗ್ರೀನ್ ಜೊತೆಗೆ ಫಾರ್ಮ್‌ನಲ್ಲಿರುವುದು ಮುಖ್ಯವಾಗಿದೆ” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.