ನವದೆಹಲಿ: ಭಾರತದ ಆಲ್ರೌಂಡರ್ ವಿಜಯ್ ಶಂಕರ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ತರಬೇತಿ ವೇಳೆ ಜಸ್ಪ್ರೀತ್ ಬುಮ್ರಾ ಯಾರ್ಕರ್ ನಿಂದಾಗಿ ಅವರ ಕಾಲ್ಬೆರಳಿಗೆ ಗಾಯವಾಗಿದೆ ಎನ್ನಲಾಗಿದೆ. ತಂಡದ ಮೂಲಗಳು ಪಿಟಿಐಗೆ ತಿಳಿಸಿರುವಂತೆ " "ಹೌದು, ವಿಜಯ್ ನೋವಿನಿಂದ ಬಳಲುತ್ತಿದ್ದರು ಆದರೆ ಅದು ಸಂಜೆಯ ಹೊತ್ತಿಗೆ ಕಡಿಮೆಯಾಗಿದೆ. ಆಶಾದಾಯಕವಾಗಿ, ಭಯಪಡುವಂತದ್ದು ಏನೂ ಇಲ್ಲ" ಎಂದು ಮೂಲಗಳು ತಿಳಿಸಿವೆ.
ಗುರುವಾರ ಶಂಕರ್ ಚಪ್ಪಲಿಗಳಲ್ಲಿ ತಿರುಗಾಡುತ್ತಿದ್ದಾರೆ ಎನ್ನಲಾಗಿದೆ ನಂತರ ಅವರು ಜಾಗಿಂಗ್ ಮಾಡಲು ಪ್ರಯತ್ನಿಸಿದರು ಆದರೆ ಅರ್ಧ ಲ್ಯಾಪ್ ನಂತರ ಬಿಟ್ಟುಕೊಟ್ಟರು. ಇತರರು ಸಾಮಾನ್ಯ ಫೀಲ್ಡಿಂಗ್ ಡ್ರಿಲ್ಗಳಲ್ಲಿ ಮತ್ತು ನೆಟ್ ಸೆಷನ್ಗಳಲ್ಲಿ ಭಾಗವಹಿಸಿದ್ದರಿಂದ ಅವರು ಕೆಲವು ಮೂಲಭೂತ ಅಭ್ಯಾಸಗಳನ್ನು ಮಾಡಿದರು ಎನ್ನಲಾಗಿದೆ.
ಸದ್ಯ ಭಾರತ ತಂಡದಲ್ಲಿ ಆಲ್ ರೌಂಡರ್ ಆಗಿರುವ ವಿಜಯ್ ಶಂಕರ್ ನಂ 4 ನೇ ಬ್ಯಾಟ್ಸ್ಮನ್ ಆಗಿದ್ದಾರೆ.ಆದರೂ ಕೂಡ ಅವರನ್ನು ಫ್ಲೋಟರ್ ಆಗಿ ಬಳಸಿಕೊಳ್ಳಲಾಗುತ್ತಿದೆ.ಪಾಕ್ ವಿರುದ್ಧದ ಪಂದ್ಯದಲ್ಲಿ ಅವರು ನಾಯಕ್ ಸರ್ಫರಾಜ್ ಅಹ್ಮದ್ ಸೇರಿದಂತೆ ಪ್ರಮುಖ ವಿಕೆಟ್ ಪಡೆದ ಶಂಕರ್ ಪಡೆದಿದ್ದರು.ಇತ್ತೀಚಿಗಷ್ಟೇ ಶಿಖರ್ ಧವನ್ ಅವರು ಗಾಯಗೊಂಡಿದ್ದರ ಪರಿಣಾಮವಾಗಿ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದರು.ಈಗ ವಿಜಯ್ ಶಂಕರ್ ಕೂಡ ಗಾಯಗೊಂಡಿರುವುದು ನಿಜಕ್ಕೂ ತಂಡಕ್ಕೆ ಆಘಾತ ತರಿಸಿದೆ ಎನ್ನಲಾಗಿದೆ.