Akash Deep-Virat Kohli Video: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪುನರಾಗಮನ ಮಾಡಿದೆ. ನಾಲ್ಕನೇ ದಿನದ ಆಟದಲ್ಲಿ ಭಾರತ ತಂಡ ಫಾಲೋ ಆನ್ ಭೀತಿ ತಪ್ಪಿಸಿ ಆಸ್ಟ್ರೇಲಿಯಾಕ್ಕೆ ಸವಾಲೊಡ್ಡುವ ಸ್ಥಿತಿ ತಲುಪಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 445 ರನ್ ಗಳಿಸಿತ್ತು. ಇದಾದ ಬಳಿಕ ಫಾಲೋ ಆನ್ ಅಪಾಯದಿಂದ ಪಾರಾಗಲು ಟೀಂ ಇಂಡಿಯಾ 246 ರನ್ ಗಳಿಸಬೇಕಿತ್ತು. ನಾಲ್ಕನೇ ದಿನದಂತ್ಯಕ್ಕೆ ಭಾರತ 252/9 ಸ್ಕೋರ್ ಮಾಡಿದೆ. ಇನ್ನೂ 193 ರನ್‌ಗಳ ಹಿಂದೆ ಇದ್ದು, ಇದೀಗ ಒಂದು ದಿನದ ಆಟ ಬಾಕಿ ಉಳಿದಿದ್ದು, ಎರಡೂ ತಂಡಗಳು ತಲಾ ಒಂದೊಂದು ಇನ್ನಿಂಗ್ಸ್ ಆಡಬೇಕಿದೆ. ಹೀಗಿರುವಾಗ ಈ ಪಂದ್ಯ ಡ್ರಾದತ್ತ ಸಾಗುತ್ತದೆಯೋ ಏನೋ ಎಂಬ ಅನುಮಾನವಿದೆ.
ಇದನ್ನೂ ಓದಿ: Multibagger stocks: ಒಂದೇ ವಾರದಲ್ಲಿ 37% ಲಾಭ ನೀಡಿದ 8 ಷೇರುಗಳು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು!!
ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ತಂಡವನ್ನು 246 ರನ್‌ಗಳ ಸಮೀಪಕ್ಕೆ ಕೊಂಡೊಯ್ದರು. ಆದರೆ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರಿಂದ ಸ್ಕೋರ್ 213/9 ಆಯಿತು. ಇಲ್ಲಿಂದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ 39 ರನ್‌ಗಳ ಅಜೇಯ ಜೊತೆಯಾಟವನ್ನು ಮಾಡುವ ಮೂಲಕ ತಂಡವನ್ನು ಫಾಲೋ-ಆನ್‌ನಿಂದ ರಕ್ಷಿಸಿದರು. ಸ್ಟಂಪ್ ಆಗುವವರೆಗೂ ಆಕಾಶ್ ದೀಪ್ 31 ಎಸೆತಗಳಲ್ಲಿ 27 ರನ್ ಮತ್ತು ಜಸ್ಪ್ರೀತ್ ಬುಮ್ರಾ 27 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿದ್ದಾರೆ.
ಇದನ್ನೂ ಓದಿ: ಪ್ರಜ್ಞೆತಪ್ಪಿದ ಧರಣಿ ನಿರತ ಉಪನ್ಯಾಸಕಿಗೆ ಚಿಕಿತ್ಸೆ ನೀಡಿ ಕರ್ತವ್ಯ ಪ್ರಜ್ಞೆ ಮೆರೆದ ಶಾಸಕ ಡಾ.ಸರ್ಜಿ
ಡ್ರೆಸ್ಸಿಂಗ್ ರೂಮಿನಲ್ಲಿ ಹಬ್ಬದ ವಾತಾವರಣ
ಆಕಾಶ್ ದೀಪ್ ಫೋರ್ ಹೊಡೆಯುವ ಮೂಲಕ ಭಾರತವನ್ನು ಫಾಲೋ-ಆನ್ ನಿಂದ ಪಾರು ಮಾಡಿದರು. ಇದರೊಂದಿಗೆ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮದ ವಾತಾವರಣವಿತ್ತು. ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ವಿಜಯೋತ್ಸವ ಆಚರಿಸಿದರು. ಆಕಾಶ್ ಅದಾದ ನಂತರ ಇನಿಂಗ್ಸ್ ನ 75ನೇ ಓವರ್ ನಲ್ಲಿ ಬೌಂಡರಿ ನಂತರ ಸಿಕ್ಸರ್ ಕೂಡ ಬಾರಿಸಿದರು. ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಆಕಾಶ್ ಸಿಕ್ಸರ್ ಬಾರಿಸಿದಾಗ ವಿರಾಟ್ ಕೊಹ್ಲಿ ಸಂತಸಕ್ಕೆ ಮಿತಿಯೇ ಇರಲಿಲ್ಲ. ಡ್ರೆಸ್ಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತು ಪುಟ್ಟ ಮಕ್ಕಳಂತೆ ಸಂಭ್ರಮಿಸಿದ್ದರು. ಅದರ ವಿಡಿಯೋ ಸದ್ಯ ವೈರಲ್ ಆಗಿದೆ.
Akash Deep makes sure India avoid the follow-on and then smashes Pat Cummins into the second level!#AUSvIND pic.twitter.com/HIu86M7BNW
— cricket.com.au (@cricketcomau) December 17, 2024
THE SHOW-STOPPER AKASH DEEP! 😎#AUSvINDOnStar 👉 3rd Test, Day 5 | 18th DEC, WED, 5:15 AM! #ToughestRivalry #BorderGavaskarTrophy pic.twitter.com/Yi8RQxoqhK
— Star Sports (@StarSportsIndia) December 17, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ