PAK vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಮೊದಲ ಸೋಲು ಪಾಕಿಸ್ತಾನಕ್ಕೆ ಆಳವಾದ ಗಾಯವನ್ನು ಉಂಟುಮಾಡಿದೆ. ಮುಂದಿನ ಟೆಸ್ಟ್ನಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಸ್ಟಾರ್ಗಳನ್ನು ಹೊರಗಿಟ್ಟ ಬಳಿಕ, ಪಿಸಿಬಿ 3 ಹೊಸ ಆಟಗಾರರಿಗೆ ಅವಕಾಶ ನೀಡಿತ್ತು. ಈ ಪೈಕಿ ಸ್ಪಿನ್ನರ್ಗಳ ಜೋಡಿ ಸಾಧನೆಯೊಂದನ್ನು ಮಾಡಿದ್ದು ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಹ ಸಾಧನೆ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ ಮೇಲೆ ಹಳೆಯ ಕೇಸ್ ರಿ-ಓಪನ್... ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ಡಿʼಬಾಸ್ !
ಇದುವರೆಗೆ ಕೇವಲ 8 ಟೆಸ್ಟ್ಗಳನ್ನು ಆಡಿದ ಸಾಜಿದ್ ಖಾನ್ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿದ್ದರು, ರೂಟ್, ಬ್ರೂಕ್, ಒಲಿ ಪೋಪ್ ಮತ್ತು ಬೆನ್ ಡಕೆಟ್ ಅವರಂತಹ ಪ್ರಮುಖ ಆಟಗಾರರಿಗೆ ಸಾಜಿದ್ ಪೆವಿಲಿಯನ್ ಹಾದಿ ತೋರಿಸಿದ್ದರು. ಇದಾದ ನಂತರವೂ ನಿಲ್ಲದೆ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿಸಿದರು. ಉಳಿದ 3 ವಿಕೆಟ್ ಕಬಳಿಸಿದ ನೌಮನ್ ಅಲಿ ಕಿತ್ತುಕೊಂಡರು.
ಮೊದಲ ಇನಿಂಗ್ಸ್ ಬಳಿಕ ಇಂಗ್ಲೆಂಡ್ ತಂಡ ಸಾಜಿದ್ ಖಾನ್ ಗಾಗಿ ತಯಾರಿಯಲ್ಲಿ ನಿರತವಾಗಿತ್ತು. ಆದರೆ ಆ ಗಾಯ ವಾಸಿಯಾಗುವ ಮುನ್ನವೇ ನೌಮನ್ ಅಲಿ 297 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಕೇವಲ 144 ರನ್ಗಳಿಗೆ ಸೀಮಿತವಾಗುವಂತೆ ಮಾಡಿದರು. ಈ ಇಬ್ಬರೂ ಸ್ಪಿನ್ನರ್ಗಳು ಮತ್ತೆ ಇನ್ನಿಂಗ್ಸ್ ಕಿಂಗ್ ಆಗಿ ಮೆರೆದರು. ಮುಲ್ತಾನ್ನಲ್ಲಿ ಸಾಜಿದ್ ಖಾನ್ 2 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದರೆ, ನೌಮನ್ ಅಲಿ 8 ವಿಕೆಟ್ ಪಡೆದರು. ಎಲ್ಲಾ 20 ವಿಕೆಟ್ಗಳು ಈ ಇಬ್ಬರು ಸ್ಪಿನ್ನರ್ಗಳ ಪಾಲಾದವು.
ಇದನ್ನೂ ಓದಿ: ಜಿಮ್ನಲ್ಲಿ ಬೆವರಿಳಿಸಿದ ಸುಹಾನಾ..! ಕಿಂಗ್ ಖಾನ್ ಮಗಳ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ..
72 ವರ್ಷಗಳಲ್ಲಿ ಮೊದಲ ಬಾರಿಗೆ...
ಪಾಕಿಸ್ತಾನದ 72 ವರ್ಷಗಳ ಇತಿಹಾಸದಲ್ಲಿ ಇಬ್ಬರು ಬೌಲರ್ಗಳು ಒಟ್ಟಾಗಿ ಎಲ್ಲಾ 20 ವಿಕೆಟ್ಗಳನ್ನು ಉರುಳಿಸಿದ್ದು ಇದೇ ಮೊದಲು. ಸಾಜಿದ್ ಖಾನ್ ಅವರ ಹೆಸರಿನಲ್ಲಿ 9 ವಿಕೆಟ್ ಪಡೆದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ನೌಮನ್ ಅಲಿ ಕಡಿಮೆಯೇನಲ್ಲ, ಅವರು 11 ವಿಕೆಟ್ಗಳನ್ನು ಗಳಿಸಿದ್ದು ಮಾತ್ರವಲ್ಲದೆ ಬ್ಯಾಟ್ನಿಂದಲೂ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಬೌಲರ್ಗಳ ಅಮೋಘ ಪ್ರದರ್ಶನದಿಂದಾಗಿ ಪಾಕಿಸ್ತಾನ ಈ ಪಂದ್ಯವನ್ನು 152 ರನ್ಗಳಿಂದ ಗೆದ್ದು 44 ತಿಂಗಳ ಬರವನ್ನು ಕೊನೆಗೊಳಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ