Australian Media insult Virat Kohli: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು ವಿರಾಟ್ ಕೊಹ್ಲಿ-ಸ್ಯಾಮ್ ಕಾನ್ಸ್ಟಾಸ್ ಘಟನೆಯ ಕುರಿತು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ತೀರ್ಪು ನೀಡಿದ್ದಾರೆ. ಆದರೆ ಆಸ್ಟ್ರೇಲಿಯಾದ ಮಾಧ್ಯಮಗಳು ಮಾತ್ರ ಸುಮ್ಮನಾಗುತ್ತಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ತಲುಪಿ ಕಪ್ ಗೆಲ್ಲುತ್ತಾರೆ ಎನ್ನುತ್ತಿರುವಾಗಲೇ ಜೈಲು ಪಾಲಾದ ಹನುಮಂತು !ಇದೇ ನೋಡಿ ಇವರ ಮೇಲಿನ ಆರೋಪ
ಮೈದಾನದಲ್ಲಿ ಕೊಹ್ಲಿ ಮತ್ತು ಕಾನ್‌ಸ್ಟಾಸ್ ನಡುವೆ ತೀವ್ರ ವಾಗ್ವಾದ ನಡೆದಿರುವುದು ಎಲ್ಲರಿಗೂ ತಿಳಿದಿರುವುದೇ. ಇದರಲ್ಲಿ ಕೊಹ್ಲಿ ಉದ್ದೇಶಪೂರ್ವಕವಾಗಿ, ಆರಂಭಿಕ ಆಟಗಾರನನ್ನು ಕೆಣಕಿರುವುದು ಕಂಡುಬಂದಿತ್ತು. ಇದಾದ ನಂತರ ಮೈದಾನದಲ್ಲಿ ಮತ್ತು ಹೊರಗಡೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವರು. ಅನೇಕ ಮಾಜಿ ಕ್ರಿಕೆಟಿಗರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ, ಮ್ಯಾಚ್ ರೆಫರಿ ತನ್ನ ನಿರ್ಧಾರವನ್ನು ನೀಡಿದ್ದು, ಈ ವಿವಾದ ಅಂತ್ಯಗೊಂಡಿತ್ತು. ಜೊತೆಗೆ ಕೊಹ್ಲಿಗೆ, ತನ್ನ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಅನ್ನು ಕೂಡ ನೀಡಲಾಗಿದೆ. ಆದರೆ ಆಸ್ಟ್ರೇಲಿಯಾ ಮೀಡಿಯಾ ಮಾತ್ರ, ಇನ್ನೂ ಸುಮ್ಮನಾದಂತೆ ತೋರುತ್ತಿಲ್ಲ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕೊಹ್ಲಿಯನ್ನು ಕನಿಷ್ಠ ಒಂದು ಪಂದ್ಯಕ್ಕಾದರೂ ಅಮಾನತುಗೊಳಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಆದರೆ, ಮ್ಯಾಚ್ ರೆಫರಿ ಒಂದು ಡಿಮೆರಿಟ್ ಪಾಯಿಂಟ್ ಮತ್ತು ದಂಡದ ಕಠಿಣ ಶಿಕ್ಷೆ ನೀಡಿದ್ದಾರೆ. ಈ ಎಲ್ಲದರ ಮಧ್ಯೆ, ಆಸ್ಟ್ರೇಲಿಯಾ ಮಾಧ್ಯಮ ಮಾತ್ರ ತನ್ನ ಮಿತಿಯನ್ನು ದಾಟಿದ್ದು, ವಿರಾಟ್ ಕೊಹ್ಲಿಯನ್ನು ಅವಮಾನಿಸಿದೆ.
Australian media choose to use "Clown Kohli" instead of celebrating Sam Konstas debut. This is why Virat Kohli is brand in Australia. Reason to increase the number of sales of newspapers. 🤡#INDvsAUS pic.twitter.com/B1ksAPfgI3
— Akshat (@AkshatOM10) December 26, 2024
ಇದನ್ನೂ ಓದಿ: ಮೊದಲ ವಾರವೇ ಎಲಿಮಿನೇಟ್ ಆಗ್ತಾರೆ ಅಂದುಕೊಂಡಿದ್ದ ಈ ಸ್ಪರ್ಧಿಯೇ ಬಿಗ್ ಬಾಸ್ ಕನ್ನಡ 11 ರ ವಿನ್ನರ್ ಆಗ್ತಾರಾ!?
'ದಿ ವೆಸ್ಟ್ ಆಸ್ಟ್ರೇಲಿಯನ್' ಎಂಬ ಮಾಧ್ಯಮವು, ವಿರಾಟ್ ಕೊಹ್ಲಿಯನ್ನು 'ಜೋಕರ್ ಕೊಹ್ಲಿ' ಎಂದು ಕರೆಯುವ ಮೂಲಕ ಅವಮಾನಿಸಿದೆ. ಅಷ್ಟೇ ಅಲ್ಲದೆ, ಹೇಡಿ, ಕ್ರೈ ಬೇಬಿ, ಕೋಡಂಗಿ(clown Kohli) ಎಂದೂ ಸಹ ಕರೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್