ಕಂಠಪೂರ್ತಿ ಕುಡಿದು ಬ್ಯಾಟಿಂಗ್‌ಗೆ ಬಂದ ಸ್ಟಾರ್‌ ಕ್ರಿಕೆಟರ್‌! ಎಣ್ಣೆ ಮತ್ತಲ್ಲಿ ಬ್ಯಾಟ್‌ ಬೀಸಿದ್ದೇ ಬೀಸಿದ್ದು... ಈತನ ಅಬ್ಬರಕ್ಕೆ ODI ಕ್ರಿಕೆಟ್‌ನಲ್ಲಿ ದಾಖಲಾಯ್ತು ಅತಿದೊಡ್ಡ ಸ್ಕೋರ್‌

Garfield Sobers: ಈ ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಗ್ಯಾರಿ ಸೋಬರ್ಸ್ ಹೆಸರು ಕೂಡ ಇದೆ. ಇಂದಿಗೂ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಎಂದಾಗ ಇವರ ಹೆಸರು ಕೂಡ ನೆನಪಾಗುತ್ತದೆ. ಆದರೆ ಈ ಕ್ರಿಕೆಟಿಗ ಹಿಂದಿನ ರಾತ್ರಿ ಪಾರ್ಟಿಗಳಲ್ಲಿ ಕಂಠಪೂರ್ತಿ ಕುಡಿದು ಮರುದಿನ ಮೈದಾನದಲ್ಲಿ ಅಬ್ಬರಿಸುತ್ತಿದ್ದರು. ಕೆಲವು ಸಹ ಶತಕದಾಟ ಆಡಿದ್ದೂ ಇದೆ.  

Written by - Bhavishya Shetty | Last Updated : Oct 25, 2024, 05:09 PM IST
    • ಕ್ರಿಕೆಟ್ ತಂಡಗಳ ಮಾರ್ಗಸೂಚಿಗಳಲ್ಲಿ ಪಂದ್ಯದ ದಿನಗಳಲ್ಲಿ ಶಿಸ್ತುಬದ್ಧವಾಗಿ ಉಳಿಯಬೇಕೆಂಬ ಷರತ್ತು ಇದೆ.
    • ಇದರಲ್ಲಿ ಮುಖ್ಯವಾದದ್ದು ಮದ್ಯಪಾನ ಮಾಡುವಂತಿಲ್ಲ ಎಂಬುದು.
    • ಈ ನಿಯಮವನ್ನು ಉಲ್ಲಂಘಿಸಿದ್ದಲ್ಲದೆ, ಮದ್ಯದ ಏಟಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು.
ಕಂಠಪೂರ್ತಿ ಕುಡಿದು ಬ್ಯಾಟಿಂಗ್‌ಗೆ ಬಂದ ಸ್ಟಾರ್‌ ಕ್ರಿಕೆಟರ್‌! ಎಣ್ಣೆ ಮತ್ತಲ್ಲಿ ಬ್ಯಾಟ್‌ ಬೀಸಿದ್ದೇ ಬೀಸಿದ್ದು... ಈತನ ಅಬ್ಬರಕ್ಕೆ ODI ಕ್ರಿಕೆಟ್‌ನಲ್ಲಿ ದಾಖಲಾಯ್ತು ಅತಿದೊಡ್ಡ ಸ್ಕೋರ್‌ title=
File Photo

Garfield Sobers: ವಿಶ್ವದಾದ್ಯಂತ ಕ್ರಿಕೆಟ್ ಆಡುವ ಬಹುತೇಕ ದೇಶಗಳ ಕ್ರಿಕೆಟ್ ತಂಡಗಳ ಮಾರ್ಗಸೂಚಿಗಳಲ್ಲಿ ಪಂದ್ಯದ ದಿನಗಳಲ್ಲಿ ಶಿಸ್ತುಬದ್ಧವಾಗಿ ಉಳಿಯಬೇಕೆಂಬ ಷರತ್ತು ಇದೆ. ಇದರಲ್ಲಿ ಮುಖ್ಯವಾದದ್ದು ಮದ್ಯಪಾನ ಮಾಡುವಂತಿಲ್ಲ ಎಂಬುದು. ಆದರೆ ಕೆಲ ಕ್ರಿಕೆಟಿಗರು ಈ ನಿಯಮವನ್ನು ಉಲ್ಲಂಘಿಸಿದ್ದಲ್ಲದೆ, ಮದ್ಯದ ಏಟಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು.

ಇದನ್ನೂ ಓದಿ: Actress Vinaya Prasad: ಪತಿ ಕಳೆದುಕೊಂಡಿದ್ದ ನಟಿ ವಿನಯ ಪ್ರಸಾದ್ ಬಾಳಿಗೆ ಬೆಳಕಾಗಿ ಬಂದ ಎರಡನೇ ಪತಿ ಇವರೇ! ಅವರೂ ಕನ್ನಡದ ಖ್ಯಾತ ಸೆಲೆಬ್ರಿಟಿ!!

ಈ ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಗ್ಯಾರಿ ಸೋಬರ್ಸ್ ಹೆಸರು ಕೂಡ ಇದೆ. ಇಂದಿಗೂ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಎಂದಾಗ ಇವರ ಹೆಸರು ಕೂಡ ನೆನಪಾಗುತ್ತದೆ. ಆದರೆ ಈ ಕ್ರಿಕೆಟಿಗ ಹಿಂದಿನ ರಾತ್ರಿ ಪಾರ್ಟಿಗಳಲ್ಲಿ ಕಂಠಪೂರ್ತಿ ಕುಡಿದು ಮರುದಿನ ಮೈದಾನದಲ್ಲಿ ಅಬ್ಬರಿಸುತ್ತಿದ್ದರು. ಕೆಲವು ಸಹ ಶತಕದಾಟ ಆಡಿದ್ದೂ ಇದೆ.

ಸೋಬರ್ಸ್‌ ಬಾರ್ಬಡೋಸ್‌ನಲ್ಲಿ ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇನ್ನು ಕ್ರಿಕೆಟ್‌ ಆಡುತ್ತಿದ್ದ ಸಂದರ್ಭದಲ್ಲಿ, ಸೋಬರ್ಸ್ ರಾತ್ರಿ ಕ್ಲಬ್‌ಗಳಲ್ಲಿ ಮದ್ಯ ಮತ್ತು ಸುಂದರಿಯರ ಸಹವಾಸದಲ್ಲಿ ತಡರಾತ್ರಿಯವರೆಗೂ ಇರುತ್ತಿದ್ದರಂತೆ. ಈ ಬಗ್ಗೆ ಹಲವು ಚರ್ಚೆಗಳೂ ನಡೆದಿತ್ತು. ಇವುಗಳಲ್ಲಿ ಕೆಲವನ್ನು ಸೋಬರ್ಸ್ ಅವರ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.

ಅದು ಸುಮಾರು 1973ನೇ ಇಸವಿ. ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ರಾತ್ರಿಯಿಡೀ ಸೋಬರ್ಸ್ ಹೋಟೆಲ್‌ನಲ್ಲಿ ಇರಲಿಲ್ಲ. ಮೈದಾನದಲ್ಲಿ ಆಟ ಮುಗಿದ ಕೂಡಲೇ ಸೋಬರ್ಸ್ ನೈಟ್ ಕ್ಲಬ್ ಕಡೆಗೆ ತಿರುಗಿದ್ದರು. ಅವರ ಸರಳ ತತ್ವವೆಂದರೆ - ಜೀವನವು ಸಂಪೂರ್ಣ ಆನಂದಕ್ಕಾಗಿ... ಒಟ್ಟಾರೆಯಾಗಿ ಎಂಜಾಯ್‌ ಮಾಡಬೇಕು ಎಂಬುದಾಗಿತ್ತು. ಅಂದು ರಾತ್ರಿ ಹೊರಗೆ ತಂಗಿದ್ದ ಅವರು ಬೆಳಗ್ಗೆಯೇ ಹೋಟೆಲ್‌ಗೆ ಮರಳಿದರು. ಆದರೆ ಅದಾಗಲೇ ಹ್ಯಾಂಗೋವರ್‌ನಲ್ಲಿದ್ದ ಸೋಬರ್ಸ್‌ ಅವರನ್ನು ಬ್ಯಾಟಿಂಗ್‌ಗೆ ತಂಡ ಕಳುಹಿಸಿತು.

ತಲೆ ಸುತ್ತಿದ್ದರೂ... ಹೊಟ್ಟೆ ನೋವಿದ್ದರೂ... ಬಾಲ್‌ ಕೂಡ ಕಾಣಿಸದಿದ್ದರೂ... ಒಟ್ಟಾರೆಯಾಗಿ ಬ್ಯಾಟ್‌ ಬೀಸಿ ಶತಕ ಬಾರಿಸಿದ್ದರು ಸೋಬರ್ಸ್.‌ ಆ ನಂತರ ಔಟ್‌ ಆದ ಅವರು ಡ್ರೆಸ್ಸಿಂಗ್‌ ರೂಂಗೆ ತೆರಳಿ ಮತ್ತೆ ಮದ್ಯ ಸೇವನೆ ಮಾಡಿದ್ದರು.  ಅಷ್ಟರಲ್ಲಾಗಲೇ ಹೊಟ್ಟೆ ನೋವು ಮಾಯವಾಗಿತ್ತು. ಇನ್ನು ಈ ಪಂದ್ಯದಲ್ಲಿ ವಿಂಡೀಸ್‌ ಇನ್ನಿಂಗ್ಸ್ ಅನ್ನು ಎಂಟು ವಿಕೆಟ್‌ಗಳಿಗೆ 652 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ತಂಡ ಎರಡೂ ಇನಿಂಗ್ಸ್‌ಗಳಲ್ಲಿ 233 ಮತ್ತು 193 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಟೆಸ್ಟ್‌ನಲ್ಲಿ ವಿಂಡೀಸ್ ಇನ್ನಿಂಗ್ಸ್ ಮತ್ತು 226 ರನ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: ಈ ಮಹಿಳಾ ಸ್ಪರ್ಧಿಯೇ ಈ ಬಾರಿಯ ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆಯುತ್ತಿರೋದು! ಲಕ್ಷ ಅಲ್ಲ... ಕೋಟಿಯಲ್ಲಿದೆ ಓಟ್‌! ಪುರುಷರಿಗೇ ಸೆಡ್ಡು ಹೊಡೆದ ʼಲೇಡಿ ಡಾನ್ʼ!

1968 ರಲ್ಲಿ, ಅಂತಹುದೇ ಮತ್ತೊಂದು ಘಟನೆ ನಡೆದಿದೆ. ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿತ್ತು. ಸಂಜೆ ಆಟದ ನಂತರ ಸೋಬರ್ಸ್ ಗರ್ಲ್‌ಫ್ರೆಂಡ್‌ನ್ನು ಭೇಟಿಯಾಗಲೆಂದು ಹೋಗಿದ್ದರು. ಇಡೀ ರಾತ್ರಿ ಆಕೆ ಜೊತೆ ಹೋಟೆಲ್‌ನಲ್ಲಿ ಕಳೆದಿದ್ದ ಅವರು ಬೆಳಿಗ್ಗೆ ತಡವಾಗಿ ಹಿಂತಿರುಗಿದ್ದರು. ಅಷ್ಟೊತ್ತಿಗಾಗಲೇ ತಂಡ ಹೋಟೆಲ್‌ನಿಂದ ಮೈದಾನಕ್ಕೆ ಹೊರಟಿತ್ತು. ಹೀಗಾಗಿ ಬೇಗ ಬೇಗ ಪ್ಯಾಡ್ ಧರಿಸಿ ಮೈದಾನಕ್ಕೆ ತೆರಳಬೇಕು ಎಂದು ಕೊಂಡಿದ್ದ ಸೋಬರ್ಸ್‌ಗೆ ಅಲ್ಲಿಯೇ ನಿದ್ದೆ ಬಂದಿತ್ತು. ಆದರೆ ಅತ್ತ ಕಡೆ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಉರುಳುತ್ತಲೇ ಇತ್ತು. ಕೊನೆಗೂ ಸೋಬರ್ಸ್ ಸರದಿ ಬಂದೇ ಬಿಡ್ತು. ಎಚ್ಚರವಾಗ್ತಿದ್ದಂತೆ ಣ್ಣು ಉಜ್ಜಿಕೊಳ್ಳುತ್ತಾ ಮೈದಾನಕ್ಕೆ ಓಡಿದರು. ಮದ್ಯದ ಏಟಲ್ಲಿ ಇದ್ದರೂ ಸಹ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಕೇವಲ 113 ನಿಮಿಷಗಳಲ್ಲಿ 132 ರನ್ ಗಳಿಸಿದರು. ಮತ್ತೆ ಹೊರಬಂದು ಹಿಂತಿರುಗುವಾಗ ಡ್ರೆಸ್ಸಿಂಗ್ ರೂಮಿನಲ್ಲಿ ನಿದ್ದೆಗೆ ಜಾರಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News