IPL 2024, DC vs RR: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ ರಿಯಾನ್ ಪರಾಗ್.ಗುರುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಿಯಾನ್ ಪರಾಗ್ 45 ಎಸೆತಗಳಲ್ಲಿ 84 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ರಿಯಾನ್ ಸ್ಫೋಟಕ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಬಾರಿಸಿದರು. ಅವರ ಈ ಇನ್ನಿಂಗ್ಸ್ ಸಹಾಯದಿಂದಲೇ ರಾಜಸ್ಥಾನ್ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ ಗಳ ಗೆಲುವು ಸಾಧಿಸುವುದು ಸಾಧ್ಯವಾಯಿತು.
ರಹಸ್ಯ ಬಿಚ್ಚಿಟ್ಟ ರಿಯಾನ್ ಪರಾಗ್ :
ಪಂದ್ಯದ ನಂತರ ರಿಯಾನ್ ಪರಾಗ್ ಭಾವುಕರಾಗಿದ್ದರು. ದುಃಖ ಹೊರಹಾಕಬಾರದು ಎಂದು ಗಂಟಲನ್ನು ಎಷ್ಟೇ ಬಿಗಿ ಹಿಡಿದರೂ ಆ ದುಃಖ ಉಮ್ಮಳಿಸಿ ಬಿಟ್ಟಿತ್ತು.ರಿಯಾನ್ ಪರಾಗ್ 45 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಇದು ಐಪಿಎಲ್ನಲ್ಲಿ ಅವರ ಅತ್ಯುತ್ತಮ ಸ್ಕೋರ್ ಆಗಿದೆ.'ಪಂದ್ಯ ಶ್ರೇಷ್ಠ' ಪ್ರಶಸ್ತಿಗೂ ಭಾಜನರಾದರು. ಈ ಸಂತಸದ ಕ್ಷಣದಲ್ಲಿ ಆ ಪರಿ ಅತ್ತಿರುವುದಕ್ಕೂ ಕಾರಣವಿದೆ.
ಇದನ್ನೂ ಓದಿ : ನತಾಶಾ ಅಲ್ಲ.. ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಸ್ಟಾರ್ ಕ್ರಿಕೆಟಿಗನ ಪತ್ನಿ ಹಾಗೂ ಬಾಲಿವುಡ್ ನಟಿ ಈಕೆ!!
ರಿಯಾನ್ ಪರಾಗ್ ಮಾತಿನ ವೇಳೆ 'ನಾನು ನನ್ನ ಭಾವನೆಗಳನ್ನು ನಿಯಂತ್ರಿಸುತ್ತಿದ್ದೇನೆ.ನನ್ನ ಅಮ್ಮ ಇಲ್ಲಿದ್ದಾರೆ.ಕಳೆದ 3-4 ವರ್ಷಗಳಿಂದ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನನ್ನ ಹೋರಾಟವನ್ನು ಅವರು ನೋಡಿದ್ದಾರೆ. ಎಂದು ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.ತಾನು ನಡೆದು ಬಂದ ಹಾದಿಯನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ.
ಕ್ಯಾಮರಾ ಮುಂದೆ ಭಾವುಕರಾದ ರಿಯಾನ್ :
ಕಳೆದ 3 ದಿನಗಳಿಂದ ನಾನು ಹಾಸಿಗೆಯಲ್ಲಿದ್ದೆ, ನಿರಂತರವಾಗಿ ನೋವು ನಿವಾರಕಗಳನ್ನು ಸೇವಿಸುತ್ತಿದ್ದೆ. ಆದರೆ, ಇಂದು ನಾನು ನನ್ನ ತಂಡಕ್ಕೆ ಕೊಡುಗೆ ನೀಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Watch: 4,4,6,4,6 - ಅಬ್ಬರಿಸಿದ ರಿಯಾನ್ ಪರಾಗ್, ರಾಜಸ್ಥಾನ ರಾಯಲ್ಸ್ ಗೆ 12 ರನ್ ಗಳ ರೋಚಕ ಜಯ