ಜನವರಿಯಲ್ಲಿ ಆರಂಭವಾಗಲಿದೆ "ಪ್ರೊ ಲುಡೋ ಸ್ಟಾರ್ ಲೀಗ್": ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿ

ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಈ ಲೀಗ್ ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

Written by - YASHODHA POOJARI | Last Updated : Dec 14, 2024, 05:35 PM IST
    • "ಪ್ರೊ ಲುಡೋ ಸ್ಟಾರ್ ಲೀಗ್" ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ
    • ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಈ ಲೀಗ್ ನ ಆಯೋಜಕ
    • 40x40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ
ಜನವರಿಯಲ್ಲಿ ಆರಂಭವಾಗಲಿದೆ "ಪ್ರೊ ಲುಡೋ ಸ್ಟಾರ್ ಲೀಗ್": ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿ title=
Pro Ludo Star League

ರಿಯಾಲಿಟಿ ಶೋಗಳು ಮತ್ತು ಕ್ರೀಡಾ ಲೀಗ್‌ಗಳ ಈ ಜಮಾನಾದಲ್ಲಿ ಇದೇ ಮೊದಲ ಬಾರಿಗೆ "ಪ್ರೊ ಲುಡೋ ಸ್ಟಾರ್ ಲೀಗ್" ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ. ಜನವರಿಯಲ್ಲಿ ಆರಂಭವಾಗಲಿದೆ. ಈ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು, ನಿರೂಪಕರು ಹಾಗೂ ಆಟಗಾರರು ಮಾತನಾಡಿದರು.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಹಾಕಬಾರದು !ದರಿದ್ರ ಬೆನ್ನತ್ತಿ, ದುಡಿದ ಹಣವೆಲ್ಲಾ ಖರ್ಚಾಗುತ್ತಲೇ ಹೋಗುವುದು!ಬದುಕು ಕೂಡಾ ಮಗುಚಿಯೇ ಬೀಳುವುದು

ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಈ ಲೀಗ್ ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ಇದೇ ಮೊದಲ ಬಾರಿಗೆ 40x40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್ ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿದ 16 ತಾರೆಯರು ಈ ಎಂಟು ತಂಡಗಳಲ್ಲಿ ಇಬ್ಬರಂತೆ ಇರುತ್ತಾರೆ. ಇವರಲ್ಲದೆ 16 ಜನ ಮಾಡಲ್ಸ್ ಕೂಡ ಇರಲಿದ್ದಾರೆ.  ಹಾಗೂ ಈ ಆಟದ ಭಾಗವಾಗಲಿದ್ದಾರೆ.

ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್‌ ಲೀಗ್‌ನ ಆಂಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿದ್ದಾರೆ. ಈ ಸ್ಪರ್ಧೆಯ ವಿಶೇಷವಾಗಿ ಮಾಮೂಲಿ ಲುಡೋ ಆಟದ ನಿಯಮ ಗಳಿಗಿಂತ ಸ್ವಲ್ಪ ಬೇರೆ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.
ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರುಗಳು ಹೀಗಿದೆ.
1.ಪ್ರೌಡ್‌ ತುಳುವರು - ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ
2. ಮಿಮಿಕ್ರಿ ಮ್ಯಾಜಿಕ್ - ಮಿಮಿಕ್ರಿ ಗೋಪಿ ಮತ್ತು ವಿನುತ
3. ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ
4. ದಿ ಪವರ್ ಕಪಲ್ - ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್
5. ಲಾಫ್ಟರ್ ಲೆಜೆಂಡ್ಸ್ - ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್
6. ಮಲೆನಾಡು ಕ್ವೀನ್ಸ್ - ಚಂದನ ಗೌಡ ಮತ್ತು ಅಮೃತ
7. ಗೌಡ ವಾರಿಯರ್ಸ್ - ಕೆಂಪೇಗೌಡ ಮತ್ತು ಮಾನ್ಯ ಗೌಡ
8. ದಿ ಡ್ರೀಮರ್ಸ್ - ಸೀತಾರಾಮ್ ಮತ್ತು ಸಾಕ್ಷಿ ಮೇಘನಾ
ಎಂದು "ಪ್ರೋ ಲುಡೋ ಸ್ಟಾರ್ ಲೀಗ್" ಬಗ್ಗೆ ನಿರ್ದೇಶಕ ಸುದೇಶ್ ಭಂಡಾರಿ ಮಾಹಿತಿ ನೀಡಿದರು.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಖರೀದಿಗೆ ಇದೇ ಉತ್ತಮ ಸಮಯ!!

 

 

Trending News