ಸಂಚಿಯಾನ್ (ದಕ್ಷಿಣ ಕೊರಿಯಾ): ಏಪ್ರಿಲ್ 5ರಿಂದ ಪ್ರಾರಂಭವಾದ ಕೊರಿಯಾ ಓಪನ್ ಬ್ಯಾಡ್ಮಿಂಟನ್ (Korea Open Badminton)ಟೂರ್ನಿಯಲ್ಲಿ ಭಾರತದ ಅನುಭವಿ ಆಟಗಾರ್ತಿ, ವಿಶ್ವದ ಮೂರನೇ ಶ್ರೇಯಾಂಕದ ಪಿ.ವಿ ಸಿಂಧು (P.V Sindu), ಅಮೆರಿಕದ ಲಾರೆನ್ ಲ್ಯಾಮ್ ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.
ಇದನ್ನು ಓದಿ: KKR vs MI, IPL 2022: ಕೆಕೆಆರ್ ಮತ್ತು ಮುಂಬೈ ಕದನದಲ್ಲಿ ಗೆಲುವು ಯಾರಿಗೆ..?
ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ವಿರುದ್ಧ ಪಿವಿ ಸಿಂಧು 21-15, 21-14 ಪಾಯಿಂಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ಗೆದ್ದ ಸಿಂಧು, 34 ನಿಮಿಷಗಳ ಕಾಲ ಭರ್ಜರಿ ಪ್ರದರ್ಶನ ನೀಡಿದರು. ಇನ್ನು ಮುಂದಿನ ಪಂದ್ಯದಲ್ಲಿ ಜಪಾನ್‌ನ ಅಯಾ ಒಹೊರಿ ಅವರಿಗೆ ಸಿಂಧು ಸವಾಲೊಡ್ಡಲಿದ್ದಾರೆ.
ಜೊತೆಗೆ 40 ನಿಮಿಷಗಳ ಕಾಲ ನಡೆದ ಮತ್ತೊಂದು ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ (Kidambi Srikanth) 22-20, 21-11 ಪಾಯಿಂಟ್‌ಗಳ ಅಂತರದಲ್ಲಿ ಮಲೇಷ್ಯಾದ ಷಟ್ಲರ್ ಡೇರೆನ್ ಲಿವ್ ಅವರನ್ನು ಸೋಲಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್ ಅವರನ್ನು ಎದುರಿಸಲಿದ್ದಾರೆ.
ಇದನ್ನು ಓದಿ: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಗೆಲುವಿನ ಶುಭಾರಂಭಗೈದ ಲಕ್ಷ್ಯ ಸೇನ್
ಇನ್ನು ಆರಂಭದ ದಿನವೇ ಭಾರತದ ಶಟ್ಲರ್ ಲಕ್ಷ್ಯ ಸೇನ್ ಗೆಲುವಿನ ಶುಭಾರಂಭ ಮಾಡಿದ್ದರು. ಕೊರಿಯಾದ ಚೋಯ್ ಜಿ ಹೂನ್ ವಿರುದ್ಧ 14-21, 21-16, 21-18 ಪಾಯಿಂಟ್‌ಗಳ ಅಂತರದಿಂದ ಲಕ್ಷ್ಯ ಸೇನ್ (Lakshya Sen) ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.